ಮಿಲನ ನಂತರ ಯೋನಿ ಸ್ವಚ್ಛತೆ ಬಹಳ ಮುಖ್ಯ- ಇಲ್ಲದಿದ್ದರೆ ವೆಜಿನಲ್ ಕ್ಯಾಂಡಿಡಯಾಸಿಸ್ ಸೋಂಕು ತಗುಲುವ ಸಾಧ್ಯತೆ ಹೆಚ್ಚು
ಮಂಡ್ಯ: ಮಿಲನದ ನಂತರ ಯೋನಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವೆಜಿನಲ್ ಕ್ಯಾಂಡಿಡಯಾಸಿಸ್ ಎಂಬ ಸೋಂಕು ತಗುಲಬಹುದು. ವೆಜಿನಲ್ ಕ್ಯಾಂಡಿಡಯಾಸಿಸ್ನಿಂದ ಯೋನಿಯಲ್ಲಿ ಉರಿಯೂತ, ಸೋರುವಿಕೆ ಮತ್ತು ವಿಪರೀತ ಕೆರೆತ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಪ್ರಸ್ತುತ ಮಳೆಗಾಲದ ಸಮಯವಾಗಿದ್ದು, ಇದು ಇತರ ಎಲ್ಲ ಋತುಗಳಿಗಿಂತ ಹೆಚ್ಚು ಇಷ್ಟವಾಗುವ ಋತುವಾಗಿದೆ. ಆದರೆ ಈ ಋತುವಿನಲ್ಲಿ ಹಲವಾರು ಕಾಯಿಲೆ ಹಾಗೂ ಸೋಂಕುಗಳು ಸಹ ಮಹಿಳೆಯರಿಗೆ ಕಾಡುವ ಸಾಧ್ಯತೆಯಿದೆ.
ಮುಂಗಾರಿನ ಈ ಸಮಯದಲ್ಲಿ ವಾತಾವರಣವು ಹಸಿ ಹಾಗೂ ಆರ್ದ್ರವಾಗಿರುವುದರಿಂದ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಗೆ ಈ ಸಮಯ ಬಹಳ ಸೂಕ್ತವಾಗಿದೆ. ಹೀಗಾಗಿ ಮುಂಗಾರಿನಲ್ಲಿ ಯೋನಿಯ ಸೋಂಕು ಕಾಣಿಸಿಕೊಳ್ಳಬಹುದು. ಮಿಲನದ ನಂತರ ಯೋನಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದಲ್ಲಿ ವೆಜಿನಲ್ ಕ್ಯಾಂಡಿಡಯಾಸಿಸ್ ಸೋಂಕು ತಗುಲಬಹುದು. ಅಲ್ಲದೆ ಇದರಿಂದ ಫಲವತ್ತತೆಯೂ ಕಡಿಮೆಯಾಗಬಹುದು ಎನ್ನುತ್ತಾರೆ ಮಂಡ್ಯದ ಹಾಸ್ಪಿಟಲ್ನ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ (Obstetricians and gynaecologists) ಡಾ. ಸಂಜಯ್ ಅವರು.
ಮಹಿಳೆಯರ ಯೋನಿ ಮತ್ತು ಸ್ತ್ರೀ ಜನನಾಂಗದ ಪ್ರದೇಶದಲ್ಲಿ ಕ್ಯಾಂಡಿಡಾ ಆಲ್ಬಿಕನ್ಸ್ (Candida albicans) ಎಂದು ಕರೆಯಲಾಗುವ ಯೀಸ್ಟ್ ಇರುತ್ತದೆ. ಇಮ್ಯುನೊ ಸಪ್ರೆಶನ್, ಡಯಾಬಿಟೀಸ್ ಅಥವಾ ಲೈಂಗಿಕ ಕ್ರಿಯೆಗಳ ಕಾರಣದಿಂದ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಇದು ಯೋನಿಯ ಗೋಡೆಯನ್ನು ಅಡ್ಡಿಪಡಿಸಬಹುದು ಮತ್ತು ಸೋಂಕುಗಳಿಗೆ ಕಾರಣವಾಗಬಹುದು.
ಈ ಸೋಂಕು ತಗುಲಿದಾಗ ವಿಶೇಷವಾಗಿ ಪೆರಿನಿಯಮ್ನಲ್ಲಿ ವಿಪರೀತ ಕೆರೆತದಿಂದ ಕೂಡಿದ ಬಿಳಿ ಬಣ್ಣದ ಮೊಸರಿನಂಥ ಸ್ರವಿಕೆಯಾಗುತ್ತದೆ. ಇದು ಖಂಡಿತವಾಗಿಯೂ ಯೋನಿ ಮತ್ತು ಒಳ ತೊಡೆಗಳ ಮೇಲೆ ಪರಿಣಾಮ ಬೀರುತ್ತದೆ. ಸೌಮ್ಯವಾದ ಸೋಂಕಿದ್ದರೆ ತುರಿಕೆಯೊಂದಿಗೆ ಕನಿಷ್ಠ ಯೋನಿ ಸ್ರವಿಸುವಿಕೆ ಇರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಎಪಿತೀಲಿಯಲ್ ಹಾನಿಯಿಂದ ಹೊರಸೂಸುವಿಕೆ ಮತ್ತು ರಕ್ತಸ್ರಾವದೊಂದಿಗೆ ಹೆಚ್ಚು ಪ್ರಮಾಣದ ಬಿಳಿಯಾದ ಮೊಸರಿನ ರೀತಿಯ ಸ್ರವಿಸುವಿಕೆ ಇರುತ್ತದೆ.
ಇದಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾ ಸೋಂಕು ಉಂಟಾದಲ್ಲಿ ಅಹಿತಕರ ವಾಸನೆಗೆ ಕಾರಣವಾಗಬಹುದು. ಇದರಿಂದ ಸಂಭೋಗದ ಸಮಯದಲ್ಲಿ ನೋವು ಮತ್ತು ಮೂತ್ರನಾಳದಲ್ಲಿ ಉರಿಯ ಅನುಭವಕ್ಕೆ ಕಾರಣವಾಗಬಹುದು. ಮಾನ್ಸೂನ್‌ನಲ್ಲಿ ತೇವ ಮತ್ತು ಕೆಟ್ಟ ಹವಾಮಾನ ಪರಿಸ್ಥಿತಿಗಳಿಂದಾಗಿ ಮಹಿಳೆಯರು ಯೋನಿ ಸೋಂಕು, ವಿಶೇಷವಾಗಿ ಕ್ಯಾಂಡಿಡಿಯಾಸಿಸ್‌ಗೆ ಹೆಚ್ಚು ಒಳಗಾಗುತ್ತಾರೆ ಎಂದು ಡಾ.ಸಂಜಯ್ ಹೇಳುತ್ತಾರೆ.
ಪ್ರಶ್ನೆ: ಮಳೆಗಾಲದಲ್ಲಿ ಇಂಥ ಸೋಂಕುಗಳು ಉಂಟಾಗದಂತೆ ನಾವು ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬಹುದು?
ಡಾ.ಸಂಜಯ್: ಹತ್ತಿಯ ಮತ್ತು ಸಡಿಲವಾದ ಒಳ ಉಡುಪುಗಳನ್ನು ಬಳಸಿ ಒದ್ದೆಯಾದ ಬಟ್ಟೆಗಳನ್ನು ಧರಿಸಬೇಡಿ. ಬಟ್ಟೆ ಒದ್ದೆಯಾಗಿದ್ದರೆ ಬದಲಾಯಿಸಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಿ. ಆಹಾರದಲ್ಲಿ ಮೊಸರು ಅಥವಾ ಪೂರಕ ಆಹಾರಗಳಂಥ ಪ್ರೋಬಯಾಟಿಕ್‌ಗಳು ಮತ್ತು ಸಾಕಷ್ಟು ವಿಟಮಿನ್ ಸಿ ಇರುವಂತೆ ನೋಡಿಕೊಳ್ಳಿ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಸಮೃದ್ಧವಾಗಿರುವ ಆಹಾರ ಸೇವಿಸುವುದನ್ನು ತಪ್ಪಿಸಿ.
ಯೋನಿ ನಾಳದ ಚಿಕಿತ್ಸೆಯನ್ನು ಯಾವಾಗಲೂ ಮಿಶ್ರ ಸೋಂಕುಗಳಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ, ಸೌಮ್ಯವಾದ ಸೋಂಕಿಗೆ ಸ್ಥಳೀಯ ಯೋನಿ ಪೆಸ್ಸರಿ ಅಥವಾ ಆಂಟಿಬಯೋಟಿಕ್ ಮತ್ತು ಆಂಟಿಫಂಗಲ್ ಔಷಧಗಳನ್ನು ಹೊಂದಿರುವ ಸಪೊಸಿಟರಿ ಚಿಕಿತ್ಸೆಯನ್ನು 7 ರಾತ್ರಿಗಳವರೆಗೆ ನೀಡಿದರೆ ಸಾಕಾಗುತ್ತದೆ.
ಮುಟ್ಟಿನ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡಬೇಡಿ. ಒಂದು ವೇಳೆ ಮಾಡಿದರೂ ಖಾಸಗಿ ಭಾಗವನ್ನು ನೀರಿನಿಂದ ತೊಳೆಯಿರಿ ಮತ್ತು ನಂತರ ಪೆಸರಿಯನ್ನು ಸೇರಿಸಿ ಹಾಗೂ ರಾತ್ರಿಯಿಡೀ ಅದನ್ನು ಹಾಗೆಯೇ ಬಿಡಿ. ಸೋಂಕು ಮರುಕಳಿಸುವುದನ್ನು ತಪ್ಪಿಸಬೇಕಾದರೆ ಲೈಂಗಿಕ ಸಂಗಾತಿಗಳು ಏಕಕಾಲಕ್ಕೆ ಚಿಕಿತ್ಸೆ ಪಡೆಯುವುದು ಅಗತ್ಯ.
ಪ್ರಶ್ನೆ: ಈ ಸೋಂಕಿಗಳಿಗೂ ಒಳ ಉಡುಪುಗಳಿಗೂ ಏನಾದರೂ ಸಂಬಂಧವಿದೆಯಾ?
ಡಾ.ಸಂಜಯ್: ಸಾಮಾನ್ಯವಾಗಿ ಬಟ್ಟೆ ನೇರವಾಗಿ ಸೋಂಕಿಗೆ ಕಾರಣವಾಗುವುದಿಲ್ಲ. ಆದರೆ, ಇದು ಚರ್ಮದ ಕಿರಿಕಿರಿ ಮತ್ತು ದದ್ದುಗಳಿಗೆ ಕಾರಣವಾಗಬಹುದು. ಬಿಗಿಯಾದ, ಗಾಳಿಯಾಡದ ಸಿಂಥೆಟಿಕ್ ಉಡುಪುಗಳಿಂದ ಸೋಂಕು ತಗುಲುವ ಸಾಧ್ಯತೆ ಇದೆ. ಇಂಥ ಉಡುಪುಗಳನ್ನು ಧರಿಸದಿರುವುದು ಉತ್ತಮ.
ಪ್ರಶ್ನೆ: ಯೋನಿ ಸೋಂಕು ಉಂಟುಮಾಡುವ ಇತರ ಅಂಶಗಳ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಸಿ:
ಡಾ.ಸಂಜಯ್: ಡಯಾಬಿಟೀಸ್ನಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುತ್ತದೆ ಹಾಗೂ ಇದರಿಂದ ಯೀಸ್ಟ್ ಸೋಂಕುಗಳು ಹೆಚ್ಚಾಗಬಹುದು. ಮಾನಸಿಕ ಒತ್ತಡದಿಂದ ರೋಗನಿರೋಧಕ ಶಕ್ತಿಯು ಏರುಪೇರಾಗಬಹುದು ಮತ್ತು ದೈಹಿಕ ಒತ್ತಡದಿಂದ ಜ್ವರ ಮತ್ತು ಇತರ ರೋಗಗಳು ಬೇಗನೆ ವಾಸಿಯಾಗದೆ ಇಂಥ ಸೋಂಕು ತಗುಲಲು ಕಾರಣವಾಗಬಹುದು.
ಇತರ ಕಾಯಿಲೆಗಳ ಉಪಶಮನಕ್ಕಾಗಿ ನೀಡಿದ ಆ್ಯಂಟಿ ಬಯಾಟಿಕ್ಸ್ ಗಳಿಂದ ಯೋನಿಯ ಸಂರಕ್ಷಕ ಲ್ಯಾಕ್ಟೊಬ್ಯಾಸಿಲಿ ಹಾಳಾಗಬಹುದು. ಇದರಿಂದ ಯೋನಿಯ ಪಿಎಚ್ ಮಟ್ಟ ಏರುಪೇರಾಗಿ ಕ್ಯಾಂಡಿಡಯಾಸಿಸ್ ಬರಬಹುದು.
ಸೋಂಕಿತ ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆ ಮತ್ತು ಮೌಖಿಕ ಸಂಭೋಗದಲ್ಲಿ ತೊಡಗುವುದು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಗರ್ಭಾವಸ್ಥೆಯ ಕಾರಣದಿಂದ ಸಹ ಮಹಿಳೆಯರಿಗೆ ಯೋನಿ ನಾಳದ ಉರಿಯೂತ ಉಂಟಾಗಬಹುದು.
Related
You Might Also Like
KSRTC: ಟಿಸಿಗಳಿಂದ ಪ್ರತಿ ತಿಂಗಳು ಸಾವಿರ ರೂ. ಭಿಕ್ಷೆ ಬೇಡುತ್ತಿರುವ ಡಿಸಿ, ಡಿಟಿಒಗಳು..!
ಪಾಪಾ ಸಂಬಳ ಸಾಲುತ್ತಿಲ್ಲವಂತೆ ಅದಕ್ಕೆ ಹೆಚ್ಚಿಗೆ ಸಂಬಳ ಪಡೆಯುತ್ತಿರುವ ಟಿಸಿಗಳ ಕಾಲು ಹಿಡಿದು ಭಿಕ್ಷೆ ಬೇಡುತ್ತಿದ್ದಾರೆ ಪಾಪಿಗಳು ನಾಚಿಕೆ ಬಿಟ್ಟು ಟಿಸಿಗಳ ಸುಲಿಗೆ ಮಾಡುವ ಇಂಥ ನಾಲಾಯಕ್...
ಕನಿಷ್ಠ ಪಿಂಚಣಿ ಶೀಘ್ರ ಜಾರಿ: ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಭರವಸೆ
ನ್ಯೂಡೆಲ್ಲಿ: ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿಯ ನಿಯೋಗದೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಆ ಸಭೆಯಲ್ಲಿ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ...
ಸಾರಿಗೆ ನೌಕರರ ಕಾರ್ಮಿಕರು ಎಂದು ಸಂಬೋಧಿಸದಿದ್ದರೆ ಜಂಟಿಯವರಿಗೆ ತಿಂದದ್ದು ಜೀರ್ಣವಾಗುವುದಿಲ್ಲವೇ: ಒಕ್ಕೂಟ ಕಿಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮದ ನೌಕರರನ್ನು ಪದೇಪದೆ ಕಾರ್ಮಿಕರು ಎಂದು ಕರೆಯುವ ಈ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಿಗೆ ನಿಜವಾಗಲು ನೌಕರರ ಬಗ್ಗೆ...
ಸರ್ಕಾರಿ ವಾಹನ ಚಾಲಕರಿಗೆ ಕನಿಷ್ಠ ವೇತನ ₹34,100 ನಿಗದಿಗೊಳಿಸಿ ಸರ್ಕಾರ ಆದೇಶ
ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರಿಗೆ 34100 ರೂಪಾಯಿ ಸಂಚಿತ ವೇತನ ನಿಗದಿ ಮಾಡಿರುವ ಸರ್ಕಾರ ಕಳೆದ ನವೆಂಬರ್ 1ರಿಂದಲೇ...
ಇಂದಿನಿಂದ ನಿವೃತ್ತ ಸಾರಿಗೆ ನೌಕರರಿಗೆ ಉಪಧನ, ನಿವೃತ್ತಿ ಗಳಿಕೆ ರಜೆ ನಗದೀಕರಣ ಪಾವತಿಗೆ ಎಂಡಿ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಯ ನಾಲ್ಕೂ ನಿಗಮಗಳಲ್ಲಿ 01.01.2020 ರಿಂದ 28.02.2023 ರವರೆಗಿನ ಅವಧಿಯಲ್ಲಿ ಸಂಸ್ಥೆಯ ಸೇವೆಯಿಂದ ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ನೌಕರರಿಗೆ ಪರಿಷ್ಕೃತ...
BMTC: ಡಿ.24ರಂದು ನೌಕರರಿಗೆ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಗೆ ಎಂಡಿ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ಸಿಬ್ಬಂದಿಗಳಿಗೆ ಇದೇ ಡಿಸೆಂಬರ್ 20ರಂದು ಬಾಕಿ 7 ತಿಂಗಳ ತುಟ್ಟಿಭತ್ಯೆ ಹಿಂಬಾಕಿ ಪಾವತಿಸಲು ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ಇಂದು...
KKRTC ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಒಂದು ಕೋಟಿ ರೂ. ಅಪಘಾತ ವಿಮೆ ಜತೆಗೆ ನೌಕರರಿಗೆ ಸಿಗುವ ಇತರ ಸೌಲಭ್ಯಗಳು
ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ಸೇವೆಯಲ್ಲಿರುವಾಗ ಅಪಘಾತ ಅಥವಾ ಸ್ವಾಭಾವಿಕವಾಗಿ ಮರಣ ಹೊಂದಿದಲ್ಲಿ ಕುಟುಂಬದವರಿಗೆ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ, ಕೆನರಾ...
KKRTC: ನಗದು ರಹಿತ ಚಿಕಿತ್ಸೆಗಾಗಿ ಸಿಬ್ಬಂದಿಗಳ ವೈಯಕ್ತಿಕ, ಅವಲಂಬಿತರ ಮಾಹಿತಿ ಸಂಗ್ರಹಿಸಿ- ಅಧಿಕಾರಿಗಳಿಗೆ ಆದೇಶ
ಕಲಬುರಗಿ: ನಗದು ರಹಿತ ಚಿಕಿತ್ಸೆಗಾಗಿ ಅವಶ್ಯಕವಿರುವ ಸಿಬ್ಬಂದಿಗಳ ವೈಯಕ್ತಿಕ ಹಾಗೂ ಅವರ ಅವಲಂಬಿತರ ಮಾಹಿತಿಯನ್ನು ಸಂಗ್ರಹಿಸಿ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ...
ಹೈಕೋರ್ಟ್ ಆದೇಶದ ಬೆನ್ನಲ್ಲೇ ದಾವಣಗೆರೆಯಲ್ಲಿ ಪೊಲೀಸರಿಂದ ಸಿ.ಟಿ.ರವಿ ಬಿಡುಗಡೆ
ದಾವಣಗೆರೆ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಶಾಸಕ ಸಿ.ಟಿ.ರವಿ ಅವರನ್ನು ದಾವಣಗೆರೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದು. ಅಲ್ಲೇ ನೆರದಿದ್ದ ನೂರಾರು ಬಿಜೆಪಿ ಕಾರ್ಯಕರ್ತರು ಸಿ.ಟಿ.ರವಿಗೆ ಅದ್ದೂರಿ ಸ್ವಾಗತ ಕೋರಿದರು. ಸದನದಲ್ಲಿ...
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ: ಮಂಡ್ಯಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷರಿಗೆ ಸ್ವಾಗತ
ಮಂಡ್ಯ: ಸಕ್ಕರೆ ನಾಡಿನಲ್ಲಿ ಮೂರು ದಿನಗಳ ಕಾಲ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಳೆ ಅಂದರೆ ಶುಕ್ರವಾರ (ಡಿ.20) ಚಾಲನೆ ಸಿಗಲಿದೆ. ಈ...
ಉತ್ತಮ ಆಡಳಿತ ಸಪ್ತಾಹ: ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಡಿಸಿ
ಬೆಂ.ಗ್ರಾ.: ಉತ್ತಮ ಆಡಳಿತ ಸಪ್ತಾಹ-2024 ರ ಅಂಗವಾಗಿ "ಇಂದೇ ಸಕಾಲ"ದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಅನುಮೋದಿಸಿ ಜಿಲ್ಲಾಧಿಕಾರಿಗಳಿಂದ ಹಿರಿಯ ನಾಗರಿಕರಿಗೆ...
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಸಿ.ಟಿ.ರವಿ ಬಂಧನ
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಫ್ಐಆರ್ ದಾಖಲಾದ ಬೆನ್ನಲ್ಲೇ ಸಿ.ಟಿ.ರವಿ...