CrimeNEWSನಮ್ಮರಾಜ್ಯ

ಸಚಿವರು ಸ್ಥಳಕ್ಕೆ ಬರಲೇ ಬೇಕು- ಬಿಎಂಟಿಸಿ ಡಿಪೋದಲ್ಲಿ ಶವವಿಟ್ಟುಕೊಂಡು ಅಹೋರಾತ್ರಿ ಧರಣಿ : ಘೋಷಣೆ ಮಾಡಿದ ಎಎಪಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸಾರಿಗೆ ನಿಗಮಗಳಲ್ಲಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಾರಿಗೆ ಸಚಿವರು ಮತ್ತು ಸರ್ಕಾರದ ವಿರುದ್ಧ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಗ್ಗೆಯಿಂದ ಬಿಎಂಟಿಸಿ ಚನ್ನಸಂದ್ರ ಡಿಪೋ 21ರಲ್ಲಿ ಚಾಲನಕನ ಪಾರ್ಥಿವ ಶರೀರ ವಿಟ್ಟುಕೊಂಡು ನ್ಯಾಯಕ್ಕಾಗಿ ಧರಣಿ ನಡೆಸುತ್ತಿದ್ದರೆ ಸಚಿವರಾಗಲಿ ಇಲ್ಲ ಸಂಸ್ಥೆಯ ಎಂಡಿಯಾಗಲಿ ಸ್ಥಳಕ್ಕೆ ರಾತ್ರಿ 7ಗಂಟೆಯಾದರೂ ಬಂದಿಲ್ಲ.

ಅಂದರೆ ಇವರು ಡಿಪೋ ವ್ಯವಸ್ಥಾ ಪಕರಿಗೇ ಹೆದರಿಕೊಂಡು ಕುಳಿತಿದ್ದಾರೆ. ಈ ಎಲ್ಲವನ್ನು ಬಿಟ್ಟು ಡಿಪೋ ಮ್ಯಾನೇಜರ್ ಅಮಾನತು ಮಾಡಿ, ಬಂಧನ ಮಾಡಬೇಕು ಹಾಗೂ ಸರ್ಕಾರ ತಕ್ಷಣವೇ ಐವತ್ತು ಲಕ್ಷ ರೂ. ಪರಿಹಾರ ಧನವನ್ನು ಮೃತರ ಕುಟುಂಬಕ್ಕೆ ಘೋಷಿಸಬೇಕೆಂದು ಒತ್ತಾಯಿಸಿದರು.

ಇನ್ನು ಸಚಿವರು ಧರಣಿ ನಿರತ ಡಿಪೋಗೆ ಬರುವವರಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಘೋಷಿಸಿದರು.

ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಯಾರು ಕಾರಣ ಸಾರಿಗೆ ಸಚಿವರಲ್ಲವೇ, ಸಿಎಂ ಬೊಮ್ಮಾಯಿ ಅವರು ಕಾರಣವಲ್ಲವೇ. ನೌಕರರು ಕೇಳುತ್ತಿರುವುದು ಮೂಲಭೂತ ಸೌಲಭ್ಯಗಳನ್ನು. ಆದರೆ ಅದನ್ನು ಮಾಡಲಾಗದೆ ನೀವು ಭ್ರಷ್ಟರಾಗುತ್ತಿದ್ದೀರಾ ಎಂದು ಕಿಡಿಕಾರಿದರು.

ಇನ್ನು ಬಿಎಂಟಿಸಿ ಎಂಡಿ ಸತ್ಯವತಿಯವರು ಅಷ್ಟೊಂದು ಹೆದರಿಕೊಂಡಿದ್ದೀರಾ ನೀವು ಡಿಪೋ ವ್ಯವಸ್ಥಾಪಕರಿಗೆ, ಡಿಪೋ ಮ್ಯಾನೇಜರ್‌ ಒಬ್ಬ ಭ್ರಷ್ಟ ಕಿರುಕುಳ ಕೊಡುತ್ತಾನೆ, ಒಂದು ಡ್ಯೂಟಿಗೆ ಸಾವಿರ ಸಾವಿರ ದುಡ್ಡು ತೆಗೆದುಕೊಳ್ಳುತ್ತಾನೆ, ರಜಕ್ಕೆ ಹಣ ತೆಗೆದುಕೊಳ್ಳುತ್ತಾನೆ. ಅಂಥವರ ಪರವಾಗಿ ನೀವು ನಿಂತಿದ್ದೀರ ಎಂದರೆ ನಿಮ್ಮ ಒಂದು ಅಧಿಕಾರಕ್ಕೆ ನಾಚಿಕೆಯಾಗಬೇಕು.

ಒಂದು ಅಮಾನತು ಆದೇಶವನ್ನು ನಿಮಗೆ ಮಾಡಲಾಗುತ್ತಿಲ್ಲ ಎಂದರೆ ನೀವು ಯಾಕ್ರಿ ಕೂತಿದ್ದೀರಾ ಬಿಎಂಟಿಸಿ ಎಂಡಿಯಾಗಿ ವಿಆರ್‌ಎಸ್‌ ತೆಗೆದುಕೊಂಡು ಬನ್ನಿ ನಮ್ಮೊಂದಿಗೆ ಹೋರಾಟ ಮಾಡಿ. ಇನ್ನು ಸಾರಿಗೆ ಸಚಿವರು ಬಳ್ಳಾರಿಯಲ್ಲಿ ಹಬ್ಬ ಮಾಡುತ್ತಿದ್ದೀರಲ್ಲ ಬೆಂಗಳೂರಿಗೆ ಬಂದ್ರಿ ಇಲ್ಲಿ, ಘಟಕ 21ರಲ್ಲಿ ಸೂತಕ ನಡೆಯುತ್ತಿದೆ. ನಿಮ್ಮದೇ ಸಿಬ್ಬಂದಿ ಕಿರಿಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಮ್ಮ ಅಧಿಕಾರಿಗಳು ಮತ್ತು ನೀವುಗಳೇ ಇವತ್ತು ಕೊಲೆ ಮಾಡಿದ್ದೀರಾ, ಮುಖ್ಯಮಂತ್ರಿಗಳಿಗಂತು ರಾಜ್ಯದ ಜನರ ಮೇಲೆ ಕಾಳಜಿನೆ ಇಲ್ಲವಾಗಿದೆ. ಬೆಳಗ್ಗೆ 10 ಗಂಟೆಯಿಂದ ಇದೇ ಘಟಕದಲ್ಲಿ ಕುಳಿತುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಇನ್ನು ಒಬ್ಬ ಅಧಿಕಾರಿಯೂ ಬಂದಿಲ್ಲ ಎಂದರೆ ನಿಮ್ಮ ಆಡಳಿತಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಕ್ಯಾಂಡಲ್ ಲೈಟ್ ಹಚ್ಚುವ ಮೂಲಕ ಸಾರಿಗೆ ನೌಕರರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ ಅಹೋರಾತ್ರಿ ಧರಣಿಯನ್ನು ಮುಂದುವರಿಸಿದ್ದಾರೆ.

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ