Vijayapatha – ವಿಜಯಪಥ
Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

2030ರ ವೇಳೆಗೆ ರಾಜ್ಯ ರಸ್ತೆ ಸಾರಿಗೆಯ 4ನಿಗಮಗಳೂ ಖಾಸಗಿ ತೆಕ್ಕೆಗೆ : ಸಚಿವ ಶ್ರೀರಾಮುಲು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಸುಮಾರು 35 ಸಾವಿರ ಬಸ್‌ಗಳಿದ್ದು, ಆ ಎಲ್ಲ ಬಸ್‌ಗಳನ್ನು ಮುಂದಿನ 8 ವರ್ಷದೊಳಗೆ ಎಲೆಕ್ಟ್ರಿಕ್‌ ಬಸ್‌ಗಳಾಗಿ ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಮೊನ್ನೆ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, 2030ರ ವೇಳೆಗೆ ಸಾರಿಗೆ ನಾಲ್ಕೂ ನಿಗಮಗಳಲ್ಲೂ ಎಲೆಕ್ಟ್ರಿಕ್‌ ಬಸ್‌ಗಳನ್ನು ಕೊಳ್ಳುವ ಅವಶ್ಯವಿದೆ. ಕಾರಣ ಡೀಸೆಲ್‌ ದರ ಏರಿಕೆ, ನಿರ್ವಾಹಣ ವೆಚ್ಚ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಆ ಎಲೆಕ್ಟ್ರಿಕ್‌ ಬಸ್‌ಗಳನ್ನು ನಿಗಮಗಳ ಹೆಸರಿನಲ್ಲಿ ರಸ್ತೆಗೆ ಇಳಿಸಿದರೆ ಆ ಎಲ್ಲ ಬಸ್‌ಗಳ ಹೊಣೆ ನಿಗಮಕ್ಕೆ ಬರುವುದಿಲ್ಲ. ಬದಲಿಗೆ ಗುತ್ತಿಗೆದಾರರು ನಿರ್ವಹಿಸುತ್ತಾರೆ, ಅವುಗಳ ನಿರ್ವಾಹಣೆಯನ್ನು ಅವರೆ ನೋಡಿಕೊಳ್ಳುತ್ತಾರೆ ಇದರಿಂದ ಸರ್ಕಾರಕ್ಕೂ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಈ ಎಲ್ಲವನ್ನು ಗಮನಿಸಿದರೆ ಬರಿ ಬಿಎಂಟಿಸಿಯಲ್ಲಿ ಮಾತ್ರ ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಟ್ಟು ಖಾಸಗಿಯವರಿಗೆ ವಹಿಸುತ್ತಾರೆ ಎಂದುಕೊಂಡರೆ ಉಳಿದ ಮೂರು ನಿಗಮಗಳನ್ನು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ ಎಂಬ ಸತ್ಯ ಬಯಲಾಗಿದೆ.

ಇನ್ನು ಸಚಿವರ ಮಾತು ಕೇಳಿದ ನಿಗಮಗಳ ಅಧಿಕಾರಿಗಳು ಮತ್ತು ನೌಕರರಲ್ಲಿ ಆತಂಕ ಶುರುವಾಗಿದೆ. ಏಷ್ಯಾದಲ್ಲೇ ನಂ.1 ಸಾರಿಗೆ ಎಂಬ ಕೀರ್ತಿಪತಾಕೆ ಹಾರಿಸಿರುವ ರಾಜ್ಯ ರಸ್ತೆ ಸಾರಿಗೆ ಈಗ ಇತಿಹಾಸ ಸೇರುವ ಎಲ್ಲ ಸೂಚನೆಗಳನ್ನು ಸಚಿವರು ನೀಡಿದ್ದು, ನಮ್ಮ ಭವಿಷ್ಯವು ಡೋಲಾಯಮಯವಾಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ.

ನಮ್ಮ ಭವಿಷ್ಯ ಬಿಡಿ ಮುಂದಿನ ದಿನಗಳಲ್ಲಿ ಸರ್ಕಾರಿ ಸಾರಿಗೆ ಬಸ್‌ನಲ್ಲಿ ನಾವು ನಮ್ಮ ಬಸ್‌ ಎಂಬ ಜಂಬದೊಂದಿಗೆ ಅಂದರೆ ಗತ್ತಿನಿಂದ ಬಸ್‌ ಏರಿ ನಿರ್ವಾಹಕರು ಮತ್ತು ಚಾಲಕರ ಬಳಿ ಕಿತ್ತಾಡಿಕೊಂಡು ಪ್ರಯಾಣಿಸುತ್ತಿರುವ ಸಾರ್ವಜನಿಕರಿಗೂ ಇದರ ಬಿಸಿ ತಟ್ಟದಿರದು ಎಂದು ಹೇಳುತ್ತಿದ್ದಾರೆ.

ಇನ್ನು ಮುಂದಿನ ಪೀಳಿಗೆ ಸರ್ಕಾರಿ ನೌಕರರಿಗೆ ಸೇರಬೇಕು ಎಂಬ ಆಸೆಗಳನ್ನು ಬದಿಗೊತ್ತಿ, ಯಾರದೋ ಒಡೆತನದಲ್ಲಿರುವ ಕಂಪನಿಗಳಲ್ಲಿ ಗುತ್ತಿಗೆ ಆಧಾರದ ಮೇರೆಗೆ 11 ತಿಂಗಳು ಕಷ್ಟಪಟ್ಟು ದುಡಿದು ಸರಿಯಾದ ವೇತನವಿಲ್ಲದೆ ಹೊರದಬ್ಬಿಸಿಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಈಗಾಗಲೇ ಬಹುತೇಕ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಹೊರಗುತ್ತಿಗೆ ಆಧಾರದ ಮೇಲೆ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರನ್ನು 11 ತಿಂಗಳುಗಳ ಲೆಕ್ಕದಲ್ಲಿ ನೇಮಕ ಮಾಡಿಕೊಂಡು ನಂತರ ಒಂದು ತಿಂಗಳು ಕೆಲಸದಿಂದ ದೂರವಿಟ್ಟು ಮತ್ತೆ ಮರು ನೇಮಕ ಮಾಡಿಕೊಂಡು ಅಷ್ಟೇ ವೇತನಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಆ ನೌಕರರು ಒಂದು ಶಾಶ್ವತ ಕೆಲಸವಿಲ್ಲದೆ ಅತಂತ್ರ ಸ್ಥಿತಿಯಲ್ಲೇ ಈಗಲೂ ಕೆಲಸ ಮಾಡುತ್ತಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಲಿದೆ.

ಈ ರೀತಿ ಸರ್ಕಾರಿ ಸಂಸ್ಥೆಗಳು, ಇಲಾಖೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತ ಹೋದರೆ ಮುಂದಿನ ದಿನಗಳಲ್ಲಿ ಸಿಎಂ ಮತ್ತು ಸಚಿವರನ್ನೇ ನೀವು ಯಾರು ಎಂದು ಕೇಳುವ ಪರಿಸ್ಥಿತಿ ನಿರ್ಮಾಣವಾದರೂ ಯಾರೂ ಅಚ್ಚರಿಪಡಬೇಕಿಲ್ಲ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಖಾಸಗಿತನದಂತೆ ನಡೆದುಕೊಳ್ಳದೆ ಸ್ಥಳೀಯವಾಗಿ ಒಂದು ಗಟ್ಟಿತನವನ್ನು ತೋರಿಸಬೇಕಿದೆ. ಎಲೆಕ್ಟ್ರಿಕ್‌ ಬಸ್‌ಗಳನ್ನು ಬಿಡಬೇಡಿ ಎಂದು ಹೇಳುತ್ತಿಲ್ಲ. ಆ ಬಸ್‌ಗಳನ್ನು ನಿಗಮದಿಂದ ನಿರ್ವಾಹಣೆ ಮಾಡಿಕೊಂಡು ನಿಮಗದ ನೌಕರರಿಂದಲೇ ಚಾಲನೆಯಾದರೆ ಸರ್ಕಾರಕ್ಕೂ ಗೌರವ ಸಿಗುತ್ತದೆ ಎಂಬ ಕಾಳಜಿಯಷ್ಟೇ.

ಇನ್ನು ಒಂದು ಸರ್ಕಾರಿ ನೌಕರಿ ಸಿಕ್ಕಿದೆ ನಾವು ಮತ್ತು ನಮ್ಮ ಕುಟುಂಬ ಸಾಮಾಜಿಕವಾಗಿ ಆರ್ಥಿಕವಾಗಿ ಒಂದು ನೆಲೆಕಂಡುಕೊಳ್ಳುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂಬ ವಾತಾವರಣ ನಿರ್ಮಾಣ ಮಾಡಬೇಕಾದ, ನಾಡನ್ನು ಆಳುತ್ತಿರುವ ಜನಪ್ರತಿನಿಧಿಗಳು ಈ ರೀತಿ ಖಾಸಗಿತನಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ದೇಶದ ಜನರ ಭವಿಷ್ಯಕ್ಕೆ ಮಾರಕ. ತಾವು ಇಂದಿನ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಷ್ಟೇ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂಬ ಕೂಗು ಕೇಳಿ ಬರುತ್ತಿದೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ