Please assign a menu to the primary menu location under menu

NEWSನಮ್ಮಜಿಲ್ಲೆನಮ್ಮರಾಜ್ಯ

ಬೀದರ್‌: ಹೊರ ಬಂದ ಚಲಿಸುತ್ತಿದ್ದ ಬಸ್‌ ಟೈರ್‌ಗಳು – 30 ಪ್ರಯಾಣಿಕರು ಪಾರು

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಚಲಿಸುತ್ತಿದ್ದ ಬಸ್‌ನ ಎಡಭಾಗದ ಹಿಂದಿಯ ಟೈರ್‌ಗಳು ಹೊರ ಬಂದ ಘಟನೆ ಬೀದರ್‌ ಮಾರ್ಗದ ಕೌಠಾ (ಬಿ) ಮತ್ತು ಜನವಾಡ ಗ್ರಾಮಗಳ ಮಧ್ಯೆ ಸೇತುವೆ ಬಳಿ ಸಂಭವಿಸಿದೆ.

ಬೀದರ್‌ ವಿಭಾಗದ ಔರಾದ ಘಟಕದ ಬಸ್‌ನಲ್ಲಿ ಈ ಅವಘಡ ನಡೆದಿದೆ. ಇದರಿಂದ ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವ ಪರಸ್ಥಿತಿ ಪ್ರಯಾಣಿಕರಿಗೆ ಬಂದೊಂದಗಿದೆ. ಈ ಬಗ್ಗೆ ಘಟಕದಲ್ಲಿ ಬಸ್‌ಗಳನ್ನು ಮಾರ್ಗಕ್ಕೆ ಬಿಡುವ ಮುನ್ನ ಎಚ್ಚರ ವಹಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಘಟನೆ ವಿವರ: ಬಸ್‌ ಜನವಾಡ ಸೇತುವೆ ಬಳಿ ಬರುತ್ತಿದ್ದಂತೆಯೇ ತಾಂತ್ರಿಕ ದೋಷದಿಂದ ಹಬ್ ಕಟ್ಟಾಗಿ ಎಡಗಡೆಯ ಹಿಂಬದಿಯ ಎರಡೂ ಟೈರ್‌ಗಳು ಹೊರಬಂದಿವೆ. ಇದನ್ನು ಗಮನಿಸಿದರೆ ರಿಯರ್ ಹಬ್‌ನ ಮೆಂಟೆನೆನ್ಸ್ ಸರಿಯಾಗಿ ಆಗಿಲ್ಲ. ಹೀಗಾಗಿ ಈ ಅವಘಡ ಸಂಭವಿಸಿದ್ದು, ತಾಂತ್ರಿಕ ನಿರ್ವಹಣೆಯ ಮೇಲ್ವಿಚಾರಕರಾಗಿರುವ ಘಟಕ ಮಟ್ಟದ ಪಾರುಪತ್ತೆಗಾರರೇ ಇದರ ಹೊಣೆ ಹೊರಬೇಕು ಎನ್ನುತ್ತಿದ್ದಾರೆ ಅಧಿಕಾರಿಗಳು.

ಸುಮಾರು 30 ಪ್ರಯಾಣಿಕರು ಈ ಬಸ್‌ನಲ್ಲಿ ಚಲಿಸುತ್ತಿದ್ದರು. ಒಂದುವೇಳೆ ಟೈರ್‌ ಪೂರ್ತಿ ಹೊರಬಂದು ಕಳಚಿಬಿದ್ದಿದ್ದರೆ ಅವರ ಗತಿ ಏನಾಗುತ್ತಿತ್ತೊ ಎಂಬ ಆತಂಕ ಕೆಲ ಹೊತ್ತು ಪ್ರಯಾಣಿಕರಲ್ಲಿ ಮನೆ ಮಾಡಿತ್ತು.

ಕಾರಣ ವಾಹನ ನಿಂತ ಸ್ಥಳದ ಪಕ್ಕದಲ್ಲಿ ಆಳವಾದ ತಗ್ಗು ಇತ್ತು. ಅದೃಷ್ಟವಶಾತ್‌ ಚಾಲಕನ ನಿಯಂತ್ರಣಕ್ಕೆ ಬಸ್‌ ಸಿಕ್ಕಿದ್ದರಿಂದ ರಸ್ತೆಯ ಪಕ್ಕಕ್ಕೆ ವಾಹನ ನಿಲ್ಲಿಸಲು ಸಾಧ್ಯವಾಯಿತು. ಇಲ್ಲದಿದ್ದರೆ, ಸುಮಾರು 30ಮಂದಿ ಪ್ರಯಾಣಿಕರು ಏನಾಗುತ್ತಿದ್ದರೋ ಗೊತ್ತಿಲ್ಲ.

ಇನ್ನು ಇದಕ್ಕೆ ಘಟಕದಲ್ಲಿ ತಾಂತ್ರಿಕ ಮೇಲ್ವಿಚಾರಣೆಯ ಕೊರತೆಯೋ ಅಥವಾ ಅಧಿಕಾರಿಗಳು ಬಿಡಿಭಾಗ ಸರಬರಾಜು ಮಾಡದೆ ಇರುವ ಕಾರಣವೋ ಗೊತ್ತಿಲ್ಲಾ. ಆದರೆ, ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿ ಪ್ರಯಾಣಿಸುವ ಎಲ್ಲರೂ ಆತಂಕ ಪಡುವಂತಾಗಿದೆ.

Leave a Reply

error: Content is protected !!
LATEST
NWKRTC: ನಿರ್ವಾಹಕ ಆತ್ಮಹತ್ಯೆಗೆ ಯತ್ನ- ಅಮಾನತು ಮಾಡುವ ಉದ್ದೇಶದಿಂದಲೇ ಮೆಮೋ ಕೊಟ್ಟ ಆರೋಪ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನೈರ್ಮಲ್ಯದ ಕೊರತೆ: ಕಸ ಮುಕ್ತ ಅಭಿಯಾನ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು: ಅಂದಾನೆಪ್ಪ ವಿಭೂತಿ ಸರ್ವೇ ನಂ-97 ಪುಸ್ತಕ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಇದ್ದಂತೆ: ರಘುನಾಥ ನ್ಯೂಡೆಲ್ಲಿ: ದಲೈವಾಲ ಪ್ರಾಣಕ್ಕೆ ಕುತ್ತು ಬಂದರೆ ದೇಶದ ರೈತರು ಕೇಂದ್ರ ಸರ್ಕಾರದ ಮರಣ ಶಾಸನ ಬರೆಯಬೇಕಾಗುತ್ತದೆ ಎಚ್ಚರ ಜ್ವರ ಬಂದಾಗ ಎಳನೀರು ಕುಡಿಯುವುದು ಒಳ್ಳೆಯದೇ..ಏಕೆಂದರೆ? ಬಿಜೆಪಿ ಸರ್ಕಾರದಲ್ಲಿ ನಿರಂತರವಾಗಿ ವರ್ಷಕ್ಕೆ ಎರಡೆರಡು ಬಾರಿ ಬಸ್ ಟಿಕೆಟ್‌ ದರ ಹೆಚ್ಚಳ: ಪಟ್ಟಿ ರಿಲೀಸ್​ ಮಾಡಿದ ಸಾರಿಗ... KSRTC: ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮರೆತಿದ್ದ ಬಿಜೆಪಿಯವರು ಈಗ ಬಸ್ ದರ ಹೆಚ್ಚಳ ಖಂಡಿಸುತ್ತಾರೆ- ರಾಮಲಿಂಗಾರೆಡ್ಡಿ APSRTCಯಲ್ಲೂ ಶಕ್ತಿ ಯೋಜನೆ ಶೀಘ್ರ ಜಾರಿ: ಬೆಂಗಳೂರಿಗೆ ಭೇಟಿ ನೀಡಿದ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ನಿ... ಜ.19ರಂದು ರೈತರ ಮಕ್ಕಳಿಗಾಗಿ ಉದ್ಯೋಗ ಮೇಳ ಆಯೋಜನೆ- 50 ಕಂಪನಿಗಳು ಭಾಗಿ