KKRTC: ಆತ್ಮಹತ್ಯೆ ಮಾಡಿಕೊಂಡ ಭೀಮಾಶಂಕರ್ ಕುಟುಂಬಕ್ಕೆ ಸಂಸ್ಥೆಯಿಂದ 10 ಲಕ್ಷ ಇನ್ಶೂರೆನ್ಸ್ ಹಣ ಬಿಡುಗಡೆ
ಸೇಡಂ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸೇಡಂ ಘಟಕದಲ್ಲಿ ಚಾಲಕ ಕಂ ನಿರ್ವಾಹಕ ಭೀಮಾಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಇನ್ಶೂರೆನ್ಸ್ ಹಣ 10 ಲಕ್ಷ ರೂ.ಗಳನ್ನು ನಿಗಮದ ಅಧಿಕಾರಿಗಳು ಚೆಕ್ ಮೂಲಕ ತಲುಪಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಕಲ್ಯಾಣ ಕರ್ನಾಟಕ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಈ ಸಂಬಂಧ ಸುದೀರ್ಘ ಚರ್ಚೆ ಮಾಡಿದ್ದರು.
ಮೃತ ಭೀಮಾಶಂಕರ್ ಅವರ ಕುಟುಂಬಕ್ಕೆ ಬರಬೇಕಿರುವ ಎಲ್ಲ ಸವಲತ್ತುಗಳನ್ನು ತುರ್ತಾಗಿ ನೀಡಬೇಕೆಂದು ಒತ್ತಾಯಿಸಿದ್ದರು. ಆ ವೇಳೆ ಅಧಿಕಾರಿ ವರ್ಗದವರು ತುರ್ತಾಗಿ ಸಂತ್ರಸ್ತರಿಗೆ ಬರಬೇಕಿರುವ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು. ಅದರಂತೆ ಇದೇ 23ರಂದು 10 ಲಕ್ಷ ರೂ. ಇನ್ಶೂರೆನ್ಸ್ ಹಣವನ್ನು ಸಂತಸ್ತರಿಗೆ ಬಿಡುಗಡೆ ಮಾಡಿದ್ದಾರೆ.
ಇದಿಷ್ಟೇ ಅಲ್ಲದೆ ಸಂಸ್ಥೆಯಲ್ಲಿ ಬರಬೇಕಿರುವ ಎಲ್ಲ ಸವಲತ್ತುಗಳನ್ನು ತುರ್ತಾಗಿ ನೀಡಬೇಕು ಹಾಗೂ ಮೃತರ ಪತ್ನಿಗೆ ಅನುಕಂಪದ ನೌಕರಿಯನ್ನು ಶೀಘ್ರವಾಗಿ ನೀಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಒತ್ತಾಯಿಸಿದೆ.
ಮೃತ ಭೀಮಾಶಂಕರ್ ಅವರ ಕುಟುಂಬಕ್ಕೆ ತುರ್ತಾಗಿ ಸ್ಪಂದಿಸಿರುವುದಕ್ಕೆ ಕೆಎಸ್‌ಆರ್ಟಿಸಿ ನೌಕರರ ಸಂಘವು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಅವರಿಗೆ ಸಮಸ್ತ ನೌಕರರ ಪರವಾಗಿ ಅಭಿನಂದನೆ ಸಲ್ಲಿಸಿದೆ.
Related
You Might Also Like
KSRTC 4 ಸಾರಿಗೆ ನಿಗಮಗಳ ಬಸ್ ಪ್ರಯಾಣದ ಟಿಕೆಟ್ ದರ ಹೆಚ್ಚಳ ಕಾಲಕಾಲಕ್ಕೆ ಆಗಬೇಕು: ಸಚಿವ ಚಲುವರಾಯಸ್ವಾಮಿ
ಬೆಂಗಳೂರು: ಡಿಸೇಲ್, ಅಕ್ಕಿ, ಬಟ್ಟೆಗೆ ಜಾಸ್ತಿ ಆದ್ರೆ ದುಡ್ಡು ಕೊಡ್ತೀರಾ.. ಮಟನ್ 100 ರೂ. ಇದ್ದದ್ದು 500 ರೂ. ಆದ್ರೆ ತಗೋತೀರ ಆದರೆ, ಅದೇ ಒಂದು ಸರ್ಕಾರ...
ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿರುವ ರಸ್ತೆಗಳ ಗುರುತಿಸಿ: ತುಷಾರ್ ಗಿರಿನಾಥ್
ಬೆಂಗಳೂರು: ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಮಾರ್ಗಸೂಚಿಯ ಅನುಸಾರ ಗುರುತಿಸಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ...
ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ಗೆ ಸಲಹೆ ಕೊಡಿ: ಡಾ. ಹರೀಶ್ ಕುಮಾರ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಕರಡು ಆಯವ್ಯಯದ ತಯಾರಿಕೆಯ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕಾಗಿ ಅತ್ಯಮೂಲ್ಯವಾದ ಸಲಹೆಗಳನ್ನು ನೀಡುವ ಸಲುವಾಗಿ ನಾಗರೀಕರಿಗೆ 10ನೇ...
ಜ.5ರಂದು ಇಪಿಎಸ್ ಪಿಂಚಣಿದಾರರ 84ನೇ ಮಾಸಿಕ ಸಭೆ: ನಂಜುಂಡೇಗೌಡ
ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ಆವರಣದಲ್ಲಿ 84ನೇ ಇಪಿಎಸ್ ಪಿಂಚಣಿದಾರರ ಮಾಸಿಕ ಸಭೆ ಇದೇ ಜನವರಿ 5ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಟಿಸಿ & ಕೆಎಸ್‌ಆರ್ಟಿಸಿ ನಿವೃತ್ತ...
ಸೌತೆಕಾಯಿ ಗಲಾಟೆ: ತಂಗಿ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿದ ಅಣ್ಣ
ಕೊಳ್ಳೇಗಾಲ: ಕೇವಲ ಸೌತೆಕಾಯಿಗಾಗಿ ಅಣ್ಣನೊಬ್ಬ ತನ್ನ ತಂಗಿಯ ಕುತ್ತಿಗೆಯನ್ನು ಕತ್ತಿಯಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲದಲ್ಲಿ ನಡೆದಿದೆ....
ಜ.19-BMTC ನೌ.ಸ.ಸಂ.ಚುನಾವಣೆ: ಭ್ರಷ್ಟ, ಕಮಿಷನ್ ಮುಕ್ತ 20 ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡಿದ ಸಾಮಾನ್ಯ ನೌಕರರ ತಂಡ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘದ ಚುನಾವಣೆ ಇದೇ ಜನವರಿ 19 ರಂದು ನಡೆಯಲಿದ್ದು, ಈಗಾಗಲೇ ಚುನಾವಣಾ ಕಾವು ಏರುತ್ತಿದೆ, ನೌಕರರ ಸಂಘಟನೆಗಳ...
ಬನ್ನೂರು- ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿಯಲ್ಲೆ ಕಾಲಹರಣ: ಸಿಟ್ಟಿಗೆದ್ದ ರೈತರಿಂದ ರಸ್ತೆಗೆ ಭತ್ತ ಸುರಿದು ಪ್ರತಿಭಟನೆ
ಬನ್ನೂರು: ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದು ಖರೀದಿ ಮಾಡದೆ ಕೇವಲ ನೋಂದಣಿ ಪ್ರಕ್ರಿಯೆಯಲ್ಲೆ ಕಾಲಹರಣ ಮಾಡಿದ ಕಾರಣ ಭತ್ತ ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿ ನಷ್ಟ...
KSRTC: ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ- ಇಂದಿನಿಂದಲೇ ಜಾರಿ- ಎಂಡಿ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯವನ್ನು ಮಂಜೂರು ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಇಂದು ಆದೇಶ ಹೊರಡಿಸಿದ್ದಾರೆ. ಒಂಟಿ...
KSRTC: ಶೇ.15ರಷ್ಟು ಬಸ್ ಟಿಕೆಟ್ ದರ ಹೆಚ್ಚಳ- ಜ.5ರಿಂದ ಜಾರಿಗೆ ಸಚಿವ ಸಂಪುಟ ಸಭೆ ಅಸ್ತು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ನಿಗಮಗಳ 10 ವರ್ಷದ ಮನವಿಗೆ ಸ್ಪಂದಿಸಿದೆ....
KSRTCಗೆ ರಾಷ್ಟ್ರದ ಮಟ್ಟದ ಒಂಬತ್ತು ಪ್ರಶಸ್ತಿಗಳು- 3ರಾಜ್ಯಗಳಲ್ಲಿ ಪ್ರದಾನ
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) 9 ರಾಷ್ಟ್ರದ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸಂಸ್ಥೆಗೆ 5 ಆಡ್ ವರ್ಲ್ಡ್ ಶೌಡೌನ್ ಚಿನ್ನದ ಪ್ರಶಸ್ತಿ, 2 ಗೌಕೇರ್...
KSRTC 4 ನಿಗಮಗಳ ನಷ್ಟ ಪರಿಹಾರಕ್ಕೆ ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ರಾಜ್ಯದ ನಾಲ್ಕು ಬಸ್ ನಿಗಮಗಳು ಶೇ.15ರಷ್ಟು ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, ಈ ಕುರಿತು ಸರಕಾರ ಚರ್ಚೆ...