ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ತೋರಿಕೆಯ ಮಾತುಗಳನ್ನು ಬಿಟ್ಟು ಸಾರಿಗೆ ಕಾರ್ಮಿಕರಿಗೆ ಉತ್ತಮ ರೀತಿಯಲ್ಲಿ, ಅಂದರೆ ಬೆಲೆ ಏರಿಕೆಗೆ ಅನುಗುಣವಾಗಿಯಾದರೂ ವೇತನವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಸಿಐಟಿಯು ಆಗ್ರಹಿಸಿದೆ.
ಸಾರಿಗೆ ಸಚಿವ ಶ್ರೀರಾಮುಲು ಅವರು ಸಚಿವರಾದ ಮೊದಲ ದಿನದಿಂದಲೂ ಸಾರಿಗೆ ನೌಕರರು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಅನುದಾನದ ಲಭ್ಯತೆ ಮೇಲೆ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುತ್ತೇವೆ ಎಂಬುದನ್ನೇ ಹೇಳುತ್ತಿದ್ದಾರೆ. ಆದರೆ ಅದರಿಂದ ಈವರೆಗೂಈ ಯಾವುದೇ ಪ್ರಯೋಜವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಇನ್ನು ಮುಖ್ಯ ಮಂತ್ರಿಗಳು ಡಿಸೆಂಬರ್- 2020 ಮತ್ತು ಏಪ್ರಿಲ್- 2021 ರಲ್ಲಿ ನಡೆದ ಸಾರಿಗೆ ಮುಷ್ಕರದ ವೇಳೆ ಗೃಹ ಸಚಿವರಾಗಿದ್ದವರು. ಅವರಿಗೆ ಎಲ್ಲವೂ ಗೊತ್ತಿದೆ. ಈ ರೀತಿಯ ನೂರಿ ಕುಸ್ತಿ ಮತ್ತು ತೋರಿಕೆಯ ಮಾತುಗಳನ್ನು ಬಿಟ್ಟು ಸಾರಿಗೆ ಕಾರ್ಮಿಕರಿಗೆ ಉತ್ತಮ ರೀತಿಯಲ್ಲಿ, ಅಂದರೆ ಬೆಲೆ ಏರಿಕೆಗೆ ಅನುಗುಣವಾಗಿಯಾದರೂ ವೇತನವನ್ನು ಹೆಚ್ಚಿಸಲು ಮುಂದಾಗಬೇಕು ಎಂದು ಸಿಐಟಿಯು ಒತ್ತಾಯಿಸಿದೆ
ನೋಡಿ ಶಾಸಕರಿಗೆ ಇಟ್ಟಾರೆ ಶೇ. 50 ರಷ್ಷು ಹೆಚ್ಚಳ ಮಾಡಿಕೊಂಡಿದ್ದಾರೆ. ನಮಗೂ ನ್ಯಾಯಯುತವಾಗಿ ವೇತನ ಹೆಚ್ಚಳ ಮಾಡಲಿ ಎಂದು ಹಾಗೂ ಮುಷ್ಕರದ ವೇಳೆ ಸೇವೆಯಿಂದ ವಜಾ ಮಾಡಿರುವ ಎಲ್ಲ ಕಾರ್ಮಿಕರನ್ನು ಪುನರ್ ನೇಮಕ ಮಾಡುವಂತೆ ಸಿಐಟಿಯು ಅಧ್ಯಕ್ಷ ಎಚ್.ಡಿ. ರೇವಪ್ಪ, ಉಪಾಧ್ಯಕ್ಷರಾದ ಡಾ. ಕೆ. ಪ್ರಕಾಶ್, ಚಂದ್ರಪ್ಪ ಮತ್ತು ಎಚ್.ಎಸ್. ಮಂಜುನಾಥ್ ಆಗ್ರಹಿಸಿದ್ದಾರೆ.