ಉಪ್ಪಿನಂಗಡಿ: ತಾನು ಅಂದುಕೊಂಡ ಸ್ಥಳದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ಲಿಸಲಿಲ್ಲ ಎಂದು ಕೋಪಗೊಂಡ ವ್ಯಕ್ತಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ಗೆ ಕಲ್ಹೊಡೆದು ಬಸ್ ಕಿಟಕಿ ಗಾಲುಗಳನ್ನು ಪುಡಿಪುಟಿ ಮಾಡಿದ್ದಾನೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಅಕ್ಟೋಬರ್ 24 ರಂದು ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದ್ದು, ಆತ ಬಸ್ ನಿಲ್ಲಿಸಲು ಸೂಚಿಸಿದ್ದಾನೆ. ಇದು ಬಸ್ ನಿಲ್ದಾಣವಲ್ಲ ಎಂದು ಬಸ್ ನಿಲ್ಲಿಸಿಲ್ಲ. ಬಳಿಕ ಬಸ್ನಿಂದ ಕೆಳಗಿಳಿದ ಕೂಡಲೇ ಬಸ್ಗೆ ಕಲ್ಲು ಹೊಡೆದಿದ್ದಾಬೆ ಆ ಕಲ್ಲು ಕಿಟಕಿ ಗಾಜಿಗೆ ಬಿದ್ದಿದ್ದು ಒಡೆದು ಹೋಗಿದೆ.