NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ LMSನಲ್ಲಿ ನೌಕರರಿಗೆ ನಿಮ್ಮ ಕೋಟ ಮುಗಿದಿದೆ ಎಂಬ ಸಿದ್ಧ ಉತ್ತರ – ಒಂದು ದಿನದ ರಜೆಗಾಗಿ ಕೊಡಲೇ ಬೇಕು 300 ರೂ. ಲಂಚ

ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ನೌಕರರ ಕಿತ್ತು ತಿನ್ನುವ ರಣಹದ್ದುಗಳದ್ದೇ ಕಾರು ಬಾರು

ವಿಜಯಪಥ ಸಮಗ್ರ ಸುದ್ದಿ
  • ಮಧ್ಯರಾತ್ರಿ ಎದ್ದು ರಜೆ ಹಾಕಿಕೊಳ್ಳಬೇಕು ಆದರೂ ಮಂಜೂರಾಗಲ್ಲ ರಜೆ

  • ಡಿಪೋಗಳಲ್ಲಿನ ಲಂಚಬಾಕತನಕ್ಕೆ ಬೇಸತ್ತು ಸಮಸ್ಯೆ ಹೇಳಿಕೊಂಡ ನೌಕರರು

ಹುಬ್ಬಳ್ಳಿ: ಸಾರಿಗೆ ನಿಗಮಗಳಲ್ಲಿ ಏನು ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗುತ್ತಿದೆ. ನೌಕರರಿಗೆ ಅನುಕೂಲವಾಗಲಿ ಎಂದು ನಿಗಮದ ಉನ್ನತ ಮಟ್ಟದ ಅಧಿಕಾರಿಗಳು ವಾರದ ರಜೆ ಹೊರತು ಪಡಿಸಿ ತಿಂಗಳಲ್ಲಿ ನೇರವಾಗಿ 3-4 ರಜೆಯನ್ನು ತೆಗೆದುಕೊಳ್ಳುವ ಅವಕಾಶವನ್ನು ಮೆಷಿನ್‌ (LMS- Leave Management System) ಮೂಲಕ ಮಾಡಿಕೊಟ್ಟಿದ್ದಾರೆ.

ಆದರೆ, ಆ ಮಷಿನ್‌ಅನ್ನು ಡಿಪೋಮಟ್ಟದ ಅಧಿಕಾರಿಗಳು ನಿರ್ವಹಣೆ ಮಾಡುತ್ತಿರುವುದರಿಂದ ತಿಂಗಳು ಪೂರ್ತಿ ರಜೆ ಹಾಕದೆ ದುಡಿದು ಯಾವುದಾದರೂ ತುರ್ತು ಸಂದರ್ಭದಲ್ಲಿ ರಜೆ ತೆದುಕೊಳ್ಳಲು ಮೆಷಿನ್‌ ಮೂಲಕ ಪ್ರಯತ್ನಪಟ್ಟರೆ ಆ ಮಷಿನ್‌ನಲ್ಲಿ ಕೋಟ ಮುಗಿದಿದೆ ಎಂಬ ಸಿದ್ಧ ಉತ್ತರ ಸಿಗುತ್ತಿದೆ.

ಹೇ ಇದು ತಪ್ಪಾಗಿ ಬಂದಿರಬೇಕು ಮತ್ತೊಮ್ಮೆ ನೋಡೋಣ ಎಂದು ಮತ್ತೆ ಪ್ರಯತ್ನಿಸಿದರೂ ಅದೇ ಉತ್ತರ. ಇದರಿಂದ ಬೇಸತ್ತ ನೌಕರರು ತುರ್ತು ಕಾರ್ಯನಿಮಿತ್ತ ನಮಗೆ ರಜೆ ಬೇಕು ಎಂದು ಡಿಪೋ ವ್ಯವಸ್ಥಾಪಕರ ಬಳಿ ಕೇಳಿದರೆ ಅವರಿಂದ ಬರುವ ಸಿದ್ಧ ಉತ್ತರವೂ ಅದೇ ಆಗಿದೆ. ಇಲ್ಲ ಮಷಿನ್‌ ಇದೆಯಲ್ಲ ಅದರಲ್ಲಿ ಹಾಕೋ ಹೋಗು ಎಂದು ಬೆದರಿಸಿ ಕಳುಹಿಸುವ ಪರಿಪಾಠ ಮುಂದುವರಿದಿದೆ.

ಇಲ್ಲ ಸಾರ್‌ ಅದರಲ್ಲಿ ಕೋಟ ಮುಗಿಸಿದೆ ಎಂದು ಬರುತ್ತಿದೆ ನಮಗೆ ರಜೆ ಬೇಕೆಬೇಕು ಎಂದು ಕೇಳಿದರೆ ಅಂಥ ನೌಕರರನ್ನು ಗುರಿಯಾಗಿಸಿ ಹಿಂಸೆ ನೀಡುವ ಪ್ರವೃತ್ತಿ ಈ ಹಿಂದಿನದಕ್ಕಿಂದಲೂ ಈಗ ಹೆಚ್ಚಾಗಿದೆ ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಈ ಮಷಿನ್‌ ಮೂಲಕ ರಜೆ ಹಾಕಿಕೊಳ್ಳಬೇಕು ಎಂದರೆ ಮಷಿನ್‌ ಓಪನ್‌ ಆಗುವುದೇ ಮಧ್ಯರಾತ್ರಿ 12 ಗಂಟೆಯಿಂದ ಅಲ್ಲಿಯವರೆಗೂ ಸರ್ವರ್‌ ಡೌನ್‌ ಎಂದೋ ಇಲ್ಲ ಓಪನ್‌ ಆಗದೆ ಇರುವುದು ಕಂಡು ಬರುತ್ತಿದೆ. ಹೀಗಾಗಿ ನೌಕರರು ರಾತ್ರ 12 ಗಂಟೆ ಬಳಿಕ ರಜೆ ಹಾಕುವುದಕ್ಕೆ ಅಲರಮ್‌ ಇಟ್ಟುಕೊಂಡು ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಹೋದರೆ ಹೋಗಲಿ ಆ ವೇಳೆಯಾದರು ರಜೆ ಹಾಕಬಹುದಲ್ಲ ಎಂದು ನೌಕರರು ಅಲರಮ್‌ ಹೊಡೆದ ಬಳಿಕ ಎದ್ದು ರಜೆ ಹಾಕುವುದಕ್ಕೆ ಕುಳಿತರೆ ಮುಂಜಾನೆಯಾದರೂ ಜಪ್ಪಯ್ಯ ಎಂದರೂ ರಜೆ ಮಾತ್ರ ಮಂಜೂರಾಗುವುದಿಲ್ಲ. ಬದಲಿಗೆ ಅದೇ ಸಿದ್ಧ ಉತ್ತರ ನಿಮ್ಮ ಕೋಟ ಮುಗಿದೆ ಎಂಬುವುದು.

ನಾಳೆ ಹೋಗಿ ನಾವು ರಜೆ ಬರುತ್ತಿಲ್ಲ ನಮಗೆ ಈ ದಿನ ರಜೆ ಬೇಕು ಎಂದು ಎಟಿಎಸ್‌, ಟಿಐ ಅವರನ್ನು ಹೇಳಿದರೆ ಅವರು ನೇರವಾಗಿಯೇ ಹೇಳುತ್ತಾರೆ 300 ರೂಪಾಯಿ ಕೊಟ್ಟರೆ ನಾನು ಡಿಎಂ ಅವರಿಂದ ಮಾಡಿಸಿಕೊಡುತ್ತೇನೆ ಇಲ್ಲವಾದರೆ ನೀನೆ ಹೋಗಿ ಡಿಎಂ ಬಳಿ ರಜೆ ಮಂಜೂರು ಮಾಡಿಸಿಕೊ ಎಂದು.

ಇದರಿಂದ ನೊಂದ ನೌಕರರು ವಿಜಯಪಥಕ್ಕೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾವು ತ್ರಿಶಂಕು ಸ್ಥಿತಿಯಲ್ಲಿದ್ದೇವೆ ನಮ್ಮ ಸಮಸ್ಯೆ ಕೇಳುವವರು ಯಾರು ಇಲ್ಲ. ಆದರೆ ತುರ್ತು ಪರಿಸ್ಥಿತಿಯಲ್ಲಿ ರಜೆ ತೆಗೆದುಕೊಂಡರೆ ಕ್ಲಾಸ್‌ ತೆಗೆದುಕೊಳ್ಳಲು ಅಧಿಕಾರಿಗಳು ಮೊದಲ ಸಾಲಿನಲ್ಲೇ ನಿಂತಿರುತ್ತಾರೆ. ಅಲ್ಲದೆ ಕಾರಣ ಕೇಳಿ ಅಂದು ಡಿಪೋದಲ್ಲೇ ಕಾಯಿಸಿ ನಿಲ್ಲಿಸುತ್ತಾರೆ.

ನಾವು ಏನೋ ಮಾಡಬಾರದ ತಪ್ಪು ಮಾಡಿದ್ದೇವೇನೋ ಎಂಬ ರೀತಿ ಡಿಪೋದಲ್ಲಿ ನಿಲ್ಲಿಸಿ ಡ್ಯೂಟಿಯನ್ನು ಕೊಡದೆ ಮತ್ತೆ ಗೈರು ಹಾಜರಿ ತೋರಿಸಿ 8 ಗಂಟೆ ಬಳಿಕ ಡಿಪೋದಿಂದ ಈಗ ಹೋಗು ನಾಳೆ ಬಾ ಎಂದು ದಮ್ಕಿಹಾಕಿ ಕಳುಹಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ಮತ್ತೆ ನಾಳೆಯೂ ಇದೇ ಶಿಕ್ಷೆ, ಯಾರಿಗಾದರೂ ಹೇಳಿಕೊ ಎಂಬ ಉಡಾಫೆ ಉತ್ತರ, ಜತೆಗೆ ಬೈಗುಳವನ್ನು ಕೇಳಬೇಕಾದ ಸ್ಥಿತಿ.

ಸರ್‌ ಇದರಿಂದ ನಮಗೆ ಜೀವನವೇ ಬೇಡ ಎಂಬ ಮನಸ್ಥಿತಿಗೆ ಒಮ್ಮೊಮ್ಮೆ ಬಂದುಬಿಡುವಂತಾಗುತ್ತಿದೆ. ದಯಮಾಡಿ ಇದನ್ನು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದು ನಮ್ಮ ಸಮಸ್ಯೆಗೆ ಸ್ಪಂದಿಸಲು ನೆರವಾಗಿ ಎಂದು ಮನವಿ ಮಾಡಿದ್ದಾರೆ.

ಇತ್ತ 8 ಗಂಟೆಗೂ ಹೆಚ್ಚು ಕಾಲ ದುಡಿದರೂ ಓಟಿ ಕೊಡದ ಡಿಪೋ ವ್ಯಸ್ಥಾಪಕರು, ನೌಕರರು ಅವರ ರಜೆ ಅವರು ಹಾಕಿಕೊಳ್ಳುವುಕ್ಕೂ ನಿರ್ಬಂಧ ಹೇರಿ ಕಾಡುವುದು ಎಷ್ಟು ಸರಿ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ನಾಲ್ಕೂ ನಿಗಮಗಳ ಎಂಡಿಗಳು ಕೂಲಂಕಶವಾಗಿ ಪರಿಶೀಲಿಸಿ ನೌಕರರ ಸಮಸ್ಯೆಗೆ ಮುಕ್ತಿ ನೀಡುವರೇ ಎಂಬುದನ್ನು ಕಾದು ನೋಡಬೇಕಿದೆ.

Leave a Reply

error: Content is protected !!
LATEST
ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಬೆನ್ನೆಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನ ಪ್ರಜ್ವಲ್ ರೇವಣ್ಣ ಸರಣಿ ಅತ್ಯಾಚಾರ ಪ್ರಕರಣದ ನೊಂದ ಮಹಿಳೆಯರ ಬೆಂಬಲಕ್ಕೆ ನಿಂತ ಆಮ್ ಆದ್ಮಿ ಪಾರ್ಟಿ ಬಿಜೆಪಿ ಗೆದ್ದರೆ ಸರ್ವಾಧಿಕಾರ ಆಡಳಿತ ಬರುವುದರಲ್ಲಿ ಯಾವುದೇ ಸಂಶಯವಿಲ್ಲ: ಮುಖ್ಯಮಂತ್ರಿ ಚಂದ್ರು ಬಿಸಿಲ ಝಳಕ್ಕೆ ಬಿಎಂಟಿಸಿ ನಿರ್ವಾಹಕ ಸೇರಿ ಇಬ್ಬರು ಮೃತ ಬೇಸಿಗೆಯ ಬಿರು ಬಿಸಿಲು- ತಂಪೆರೆದ ಭರಣಿ ಮಳೆ: ರೈತರ ಮುಖದಲ್ಲಿ ಮಂದಹಾಸ ಬೇಟಿ ಬಚಾವೋ ಬೇಟಿ ಪಢಾವೋ ಎಂದರೆ ಅತ್ಯಾಚಾರಿಗಳಿಗೆ ಟಿಕೆಟ್‌ ನೀಡುವುದೇ?:  ಮುಖ್ಯಮಂತ್ರಿ ಚಂದ್ರು ಪ್ರಶ್ನೆ ಪ್ರಜ್ವಲ್ ರೇವಣ್ಣನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಕ್ಷಣೆ ನೀಡಿ: ಮೋಹನ್ ದಾಸರಿ ಆಗ್ರಹ ಕೊರೊನಾದಿಂದ ಜೀವಕಳೆದುಕೊಂಡ KSRTCಯ 114ಕ್ಕೂ ಹೆಚ್ಚು ನೌಕರರ ಕುಟುಂಬಕ್ಕೆ ಇನ್ನೂ ಸಿಕ್ಕಿಲ್ಲ 30 ಲಕ್ಷ ಪರಿಹಾರ!!? ಲೈಂಗಿಕ ದೌರ್ಜನ್ಯ ಪ್ರಕರಣ: ಆರೋಪಿಗಳ ಬಂಧಿಸುವ ಅಧಿಕಾರ ಎಸ್‌ಐಟಿಗೆ ಇಲ್ಲ - ವಕೀಲ ಶಿವರಾಜು ಮೇ 15 ರಿಂದ ಉಚಿತ ಎಂಬ್ರಾಯ್ಡರಿ & ಆರಿ ವರ್ಕ್ ತರಬೇತಿ ಆರಂಭ