CRIMEನಮ್ಮಜಿಲ್ಲೆ

ನಂಜನಗೂಡು: KSRTC ಬಸ್‌ ಬೈಕ್‌ಗೆ ಡಿಕ್ಕಿ- ಬೈಕ್‌ ಸವಾರ ಸ್ಥಳದಲ್ಲೇ ಸಾವು

ವಿಜಯಪಥ ಸಮಗ್ರ ಸುದ್ದಿ

ನಂಜನಗೂಡು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೊಬ್ಬ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಂಜನಗೂಡು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದಿದೆ.

ಅಪಘಾತದಲ್ಲಿ ತಾಲೂಕಿನ ಸಿಂಧುವಳ್ಳಿ ಗ್ರಾಮದ ನಿವಾಸಿ ಬೊಮ್ಮೇಗೌಡ (70) ಮೃತಪಟ್ಟಿದ್ದು ಮತ್ತೋರ್ವ ಸವಾರ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಂಧುವಳ್ಳಿ ಗ್ರಾಮದಿಂದ ನಂಜನಗೂಡು ಪಟ್ಟಣಕ್ಕೆ ಬೈಕ್‌ನಲ್ಲಿ ಇಬ್ಬರು ಬರುತ್ತಿದ್ದ ವೇಳೆ ನಂಜನಗೂಡಿನ ಬಸವೇಶ್ವರ ವೃತ್ತದ ಬಳಿ ಹಿಂಬದಿಯಿಂದ ಬಂದ ಸಾರಿಗೆ ಬಸ್ ಡಿಕ್ಕಿ ಹೊಡೆದು ಬೊಮ್ಮೇಗೌಡ ಅವರ ಕಾಲಿನ ಮೇಲೆ ಚಕ್ರ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಸಿದ್ದರಾಜು, ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ರವೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರಿಗೆ ಬಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

Deva
the authorDeva

Leave a Reply

error: Content is protected !!
Latest news
GBA ದಕ್ಷಿಣ: ಮಳೆ ಬಂದಾಗ ಹೆಚ್ಚು ನೀರು ನಿಲ್ಲುವ ಪ್ರದೇಶಗಳಿಗೆ ಆಯುಕ್ತ ರಮೇಶ್ ಭೇಟಿ ಸರ್ಕಾರ ಸಾರಿಗೆ ನೌಕರರ ಏಳಿಗೆ ಬಗ್ಗೆ ಯೋಚಿಸಲೂ ಆಗದಂತಹ ನಿಕೃಷ್ಟ ಹಂತ ತಲುಪಿರುವುದು ದುರಂತವೇ ಸರಿ: ವಿಪಕ್ಷ ನಾಯಕ ಆರ್‌... KKRTC: ಭ್ರಷ್ಟ ಅಧಿಕಾರಿಗಳ ವಿರುದ್ಧ ಎಂಡಿಗೆ ಲಿಖಿತ ದೂರು ಕೊಟ್ಟು 3 ತಿಂಗಳುಗಳು ಕಳೆದರೂ ಯಾವುದೇ ಕ್ರಮವಿಲ್ಲ ಏಕೆ- ಯಾ... KSRTC- ನಮ್ಮ ಹೋರಾಟ ಕಡೆಗಣಿಸುತ್ತಿದ್ದೀರಿ ಇದು ನಿಮಗೆ ಸಲ್ಲ- ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸುತ್ತೇವೆ ಕೇಂದ್ರ ಸರ್... ಸಾರಿಗೆ ನೌಕರರಿಗೆ 26 ತಿಂಗಳ ವೇತನ ಹಿಂಬಾಕಿ ಪಾವತಿಗೆ ಮೊದಲ ಹಂತವಾಗಿ 450 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ ! KSRTC: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಗುಡ್ಡಕ್ಕೆ ಡಿಕ್ಕಿ ಹೊಡೆದು ನಿಂತ ಬಸ್‌- ತಪ್ಪಿದ ಭಾರಿ ಅನಾಹುತ KSRTC ಪ್ರಮುಖ ಬೇಡಿಕೆಗಳ ಸರ್ಕಾರ ಇನ್ನೂ ನೌಕರರ ಶ್ರಮಕ್ಕನ್ವಯ ಇತ್ಯರ್ಥಪಡಿಸಿಲ್ಲ: ಜ್ಯೋತಿ ಅನಂತಸುಬ್ಬರಾವ್ ಅಸಮಾಧಾನ ಇಂದು ಸಾರಿಗೆ ಸಚಿವರ ಅಧ್ಯಕ್ಷತೇಲಿ ನೌಕರರ ವೇತನ ಹೆಚ್ಚಳ, 38 ತಿಂಗಳ ಹಿಂಬಾಕಿ ಕುರಿತು ಮತ್ತೇ ಒಕ್ಕೂಟದ ಜತೆ ಸಭೆ ಕೆಲ ಸಾರಿಗೆ ಅಧಿಕಾರಿಗಳಿಗೆ ವರದಾನವಾದ 17/1ನಿಯಮ- ಮೇ 10ರೊಳಗೆ ರದ್ದುಗೊಳಿಸಿ ಮೂಲ ಹುದ್ದೆಗೆ ನಿಯೋಜಿಸಲು ಎಂಡಿಗೆ ಸಾರಿ... ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಓಕೆನಾ ಅಥವಾ ವೇತನ ಆಯೋಗನಾ? ನೌಕರರ ಅಭಿಪ್ರಾಯವೇನು?