ಪಾಂಡವಪುರ: ಎಚ್ಎನ್ಆರ್ ಫೌಂಡೇಶನ್ ವತಿಯಿಂದ ಮಾಜಿ ಶಾಸಕ ಕೆ.ಕೆಂಪೇಗೌಡ ಅವರ ಸ್ಮರಣಾರ್ಥ ಬಿಜಿಎಸ್ ಗ್ಲೋಬಲ್ ವೈದ್ಯಕೀಯ ಮಹಾ ವಿದ್ಯಾಲಯ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ ಅವರ ಸಹಯೋಗದಿಂದ ಗರ್ಭಕೋಶ, ಸ್ತನ ಕ್ಯಾನ್ಸರ್ ಹಾಗೂ ಸಾಮಾನ್ಯ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ 500ಕ್ಕೂ ಮಂದಿ ತಪಾಸಣಾಕ್ಕೊಳಪಟ್ಟರು. 30ಕ್ಕೂ ಹೆಚ್ಷು ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಅವರಿಗೆ ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಸಿ ಮತ್ತೇ ವಾಪಸ್ ಅವರನ್ನು ಮನೆಗೆ ಕರೆತಂದು ಬಿಡಲಾಗುವುದು ಎಂದು ಎಚ್.ಆರ್.ಎನ್ ಫೌಂಡೇಶನ್ ಅಧ್ಯಕ್ಷ ಡಾ.ಎಚ್.ಎನ್ ರವೀಂದ್ರ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿ ಅವರು, ಇತ್ತೀಚೆಗೆ ಮಹಿಳೆಯರಿಗೆ ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ಕಾಣಬರುತ್ತಿದೆ. ಈ ಹಿನ್ನೆಲೆ ಶಿಬಿರ ಆಯೋಜಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಕೃಷ್ಣೇಗೌಡ, ಸಂಪಹಳ್ಳಿ ಉಮೇಶ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಎಚ್. ಎನ್.ದಯಾನಂದ್, ಶ್ಯಾದನಹಳ್ಳಿ ನರೇಂದ್ರಬಾಬು, ಮುಖಂಡರಾದ ಸರ್ವೇಶ್, ಸಿ.ಕೆ.ಮಂಜುನಾಥ್, ಚಿನಕುರಳಿ ಚಂದ್ರಶೇಖರ್, ಹಿರೇಮರಳಿ ಶಿವಕುಕುಮಾರ್, ಕೆ.ಬಿ.ರಾಮು, ಹಾರೋಹಳ್ಳಿ ಕೊನಾರಿ ಮಂಜು ಇತರರಿದ್ದರು.
– ವರದಿ: ಪಾಂಡವಪುರ ವಿಶ್ವನಾಥ್