ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಸಂಘದ 36ನೆ ದಿನದ ಆಹೋರಾತ್ರಿ ಧರಣಿ ನಿರತ ರೈತರ ಸರದಿ ಉಪವಾಸ ಸತ್ಯಾಗ್ರಹ ಮಂಗಳವಾರ 2ನೇದಿನಕ್ಕೆ ಕಾಲಿಟ್ಟಿದ್ದು, ಇಂದು ಅತ್ತಹಳ್ಳಿ ದೇವರಾಜ್, ಹಾಡ್ಯರವಿ , ಎಂ. ಕಮಲಮ್ಮ ಮೈಸೂರು ಜಿಲ್ಲೆ ಗುರುಸಿದ್ದಪ್ಪ ಕೂಟಗಿ, ಮಡಿವಾಳಪ್ಪ, ಬೆಳಗಾವಿ ಅವರು ಉಪವಾಸ ಸತ್ಯಾಗ್ರಹ ಮಾಡಿದರು.
13 ದಿನಗಳ ಹಿಂದೆ ಧರಣಿ ನಿರತ ರೈತ ಮುಖಂಡರ ಜತೆ ಮಾತುಕತೆ ನಡೆಸಿ ಕಬ್ಬಿನ ದರ ಏರಿಕೆ ಭರವಸೆ ನೀಡಿದ ಮುಖ್ಯಮಂತ್ರಿ ಈ ತನಕ ಯಾವುದೇ ನಿರ್ಧಾರ ಪ್ರಕಟಿಸಿಲ್ಲ, ಬರಿ ಮಾತಿನ ಭರವಸೆ ಬೇಡ ನ್ಯಾಯಸಮ್ಮತ ಕಬ್ಬುದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಸರದಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.
ನಿತ್ಯ ಐದು ರೈತರು ಸರದಿ ಉಪವಾಸ ಸತ್ಯಾಗ್ರಹ ಕೈಗೊಂಡಿದಾರೆ. ಬೆಳಗಿನಿಂದಲೇ ಆಹಾರ ತ್ಯಜಿಸಿ ಸಂಜೆ 6 ಗಂಟೆ ತನಕ ಉಪವಾಸ ಕೈಗೂಂಡರು ಉಳಿದ ರೈತರು ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸುತ್ತಿದ್ದಾರೆ.