NEWSನಮ್ಮಜಿಲ್ಲೆನಮ್ಮರಾಜ್ಯ

BMTC ಷರತ್ತು ಒಪ್ಪಲ್ಲ ಕಾನೂನು ಹೋರಾಟ ಮುಂದುವರಿಸುತ್ತೇವೆ:100ಕ್ಕೂ ಹೆಚ್ಚು ವಜಾಗೊಂಡ ನೌಕರರ ನಿಲುವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಳೆದ 2021ರ ಏಪ್ರಿಲ್‌ 7 ರಿಂದ 21ರವರೆಗೆ ಸರಿ ಸಮಾನ ವೇತನ ಮತ್ತು ಇತರೆ ಬೇಡಿಕೆಗಳ ಈಡೆರಿಕೆಗೆ ಒತ್ತಾಯಿಸಿ ನೌಕರರು ಕೈಗೊಂಡ ಮುಷ್ಕರದ ವೇಳೆ ಸೇವೆಯಿಂದ ವಜಾಗೊಂಡಿರುವ ಉಳಿದ ನೌಕರರನ್ನು ಮತ್ತೆ ಮರು ನೇಮಕ ಮಾಡಿಕೊಳ್ಳುವ ಕಾರ್ಯಕ್ಕೆ ಗುರುವಾರದಿಂದ (ಜ.5) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನೆ ನೀಡಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಅಲ್ಲದೆ ಪ್ರಮುಖವಾಗಿ ಮೂರು ಷರತ್ತುಗಳನ್ನು ವಿಧಿಸಿದೆ. ಅವುಗಳೆಂದರೆ, ಮರು ನೇಮಕಗೊಳ್ಳುವ ನೌಕರರು ನಿರಂತರ ಸೇವೆಗೆ ಅರ್ಹರಿರುತ್ತಾರೆ. ಆದರೆ ಈ ಹಿಂದಿನ ಅಂದರೆ ವಜಾಗೊಂಡಿರುವ ಅವಧಿಯಲ್ಲಿ ಮಧ್ಯಂತರ ಪರಿಹಾರ ಸೇರಿದಂತೆ ವಜಾಗೊಂಡ ದಿನಾಂಕದಿಂದ ಮರು ನೇಮಕಗೊಳ್ಳುವ ದಿನಾಂಕದವರೆಗೆ ಯಾವುದೇ ಹಿಂಬಾಕಿ ವೇತನ, ತತ್ಪಲಿತ ಸೇವಾ ಸೌಲಭ್ಯ ರಹಿತವಾಗಿರಲಿದೆ ಎಂದು ತಿಳಿಸಿದೆ.

ಇದಿಷ್ಟೇ ಅಲ್ಲದೆ ಪ್ರಮುಖವಾಗಿ ಎರಡನೇ ಷರತ್ತಿನಲ್ಲಿ ನೇಮಕಗೊಂಡ ದಿನಾಂಕದಿಂದ ಮುಂದಿನ ಮೂರು ವರ್ಷಗಳವರೆಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಮುಂದೂಡಲಾಗುವುದು ಎಂದು ತಿಳಿಸಿದೆ.

ಅಲ್ಲದೆ ಮೂರನೇ ಖಂಡಿಷನ್‌ನಲ್ಲಿ ಮುಂದೆ ಯಾವುದೇ ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಇತರರನ್ನು ಪ್ರಚೋದಿಸುವುದಿಲ್ಲ ಹಾಗೂ ಮುಷ್ಕರದ ಅವಧಿಯಲ್ಲಿ ಗೈರು ಹಾಜರಿಯಾಗುವುದಿಲ್ಲ ಎಂದು ನೌಕರರು ಮುಚ್ಚಳಕೆ ಬರೆದುಕೊಡಬೇಕು.

ಈ ಮೂರು ಷರತ್ತುಗಳಿಗೆ ಒಪ್ಪಿ ಜಂಟಿ ಮೆಮೋಗೆ ಸಹಿ ಮಾಡಿರುವ ನೌಕರರಿಗೆ ಅವರ ಮಾತೃ ವಿಭಾಗದ ಮತ್ತು ಘಟಕದಲ್ಲಿ ಡ್ಯೂಟಿ ಕೊಡದೆ ಬೇರೆ ವಿಭಾಗ ಮತ್ತು ಘಟಕಕ್ಕೆ ವರ್ಗಾವಣೆ ಮಾಡಿ ಕೂಡಲೇ ಆ ಘಟಕದಲ್ಲಿ ಡ್ಯೂಟಿ ವರದಿ ಮಾಡಿಕೊಳ್ಳಬೇಕು ಎಂದು ವರ್ಗಾವಣೆ ಆದೇಶದ ಪ್ರತಿಯನ್ನು ನೌಕರರ ಕೈಗಿತ್ತಿದ್ದಾರೆ.

ಈ ಮೂರೂ ಷರತ್ತುಗಳನ್ನು ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ಬಹುತೇಕ ನೌಕರರು ಒಪ್ಪಿ ಡ್ಯೂಟಿಗೆ ಹೋಗಲು ಸಿದ್ಧರಾಗಿದ್ದಾರೆ. ಆದರೆ ಹಲವು ನೌಕರರು ನಾವು ಏನು ತಪ್ಪು ಮಾಡಿದ್ದೇವೆ ನಮಗೆ ಷರತ್ತು ವಿಧಿಸಿ ಡ್ಯೂಟಿಗೆ ತೆಗೆದುಕೊಳ್ಳಲು? ಎಂದು ಪ್ರಶ್ನಿಸುತ್ತಿದ್ದು, ಯಾವುದೇ ಷರತ್ತು ಇಲ್ಲದೆ ತೆಗೆದುಕೊಳ್ಳಬೇಕು. ಜತೆಗೆ ಹಿಂಬಾಕಿಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನಮ್ಮನ್ನು ಸಕಾರಣ ನೀಡದೆ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದೀರಿ, ಡಿಪೋ ವ್ಯವಸ್ಥಾಪಕರು ಮತ್ತು ಡಿಪೋಗಳಲ್ಲಿನ ಕೆಲಸ ಸಿಬ್ಬಂದಿ ಕೊಟ್ಟ ತಪ್ಪು ಮಾಹಿತಿ ಆಧರಿಸಿ ನಮಗೆ ಶಿಕ್ಷೆ ನೀಡಿದ್ದೀರಿ. ಹೀಗಾಗಿ ನಾವು ಕಾನೂನು ಹೋರಾಟದ ಮೂಲಕವೇ ಡ್ಯೂಟಿಗೆ ಬರುತ್ತೇವೆ ಎಂದು ಸಂಸ್ಥೆಯ ಷರತ್ತುಗಳಿಗೆ ಒಪ್ಪದೆ ಕಾನೂನು ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಹೀಗಾಗಿ ಬಿಎಂಟಿಸಿಗೇ ಮತ್ತು ಸರ್ಕಾರಕ್ಕೂ ವಜಾಗೊಂಡಿರುವ ಹಲವು ನೌಕರರು ಬಿಸಿ ತುಪ್ಪವಾಗಿ ಪರಿಣಮಿಸುತ್ತಿದ್ದಾರೆ. ಇನ್ನು ಕೆಲ ನೌಕರರು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಕಾನೂನು ಹೋರಾಟ ಅಂದರೆ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಹೀಗೆ ನಾವು ವೇತನ ಇಲ್ಲದೆ ಸಂಸಾರ ನಿರ್ವಹಣೆ ಮಾಡುವುದು ತುಂಬ ಕಷ್ಟಕರವಾಗಲಿದೆ. ಹೀಗಾಗಿ ನಾವು ಸಂಸ್ಥೆಯ ಷರತ್ತಿಗೆ ವಲ್ಲದ ಮನಸ್ಸಿನಿಂದಲೇ ಒಪ್ಪಿ ಡ್ಯೂಟಿಗೆ ಹೋಗುತ್ತಿದ್ದೇವೆ ಎಂದು ತಮ್ಮ ನೋವವನ್ನು ತೋಡಿಕೊಂಡಿದ್ದಾರೆ.

ಒಟ್ಟಾರೆ ಬಿಎಂಟಿಸಿ ವಜಾಗೊಳಿಸಿರುವವರಲ್ಲಿ ಈಗ ಉಳಿದಿರುವ ಸುಮಾರು 483 ನೌಕರರಲ್ಲಿ 100ಕ್ಕೂ ಹೆಚ್ಚು ನೌಕರರು ಕಾನೂನು ಹೋರಾಟದ ಮೂಲಕವೇ ನಾವು ಡ್ಯೂಟಿ ಪಡೆಯುತ್ತೇವೆ. ಹೀಗಾಗಿ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಖಚಿತ ಮಾಹಿತಿ ಹೊರಬಿದ್ದಿದೆ.

ಇನ್ನು ಪೊಲೀಸ್‌ ಪ್ರಕರಣವಿರುವ ನೌಕರರನ್ನು ಸದ್ಯ ತೆಗೆದುಕೊಳ್ಳುವುದಕ್ಕೆ ಸಂಸ್ಥೆಯ ಅಧಿಕಾರಿಗಳು ಹಿಂದೆಟು ಹಾಕುತ್ತಿದ್ದಾರೆ. ಇದು ಒಂದು ಕಡೆ ವಜಾಗೊಂಡ ಎಲ್ಲ ನೌಕರರು ಸೇವೆಗೆ ಮತ್ತೆ ಮರಳುತ್ತಾರೆ ಎಂಬ ನಿರೀಕ್ಷೆಗೂ ಹೊಡೆತ ಬಿದ್ದಂತಾಗುತ್ತಿದೆ. ಹೀಗಾಗಿ ಸುಮಾರು 200ಕ್ಕೂ ಹೆಚ್ಚು ನೌಕರರು ಷರತ್ತುಗಳಿಗೆ ಒಪ್ಪದೆ ಇನ್ನು ಉಳಿದ ನೌಕರರು ಒಪ್ಪಲ್ಲ ಎನ್ನುತ್ತಿದ್ದಾರೆ.

Leave a Reply

error: Content is protected !!
LATEST
ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ