ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರು ಬಂಧನ: ಪೊಲೀಸರ ವಿರುದ್ಧ ಪಿಸಿಆರ್ ಮಾಡುತ್ತೇವೆ- ವಕೀಲ ನಟರಾಜ ಶರ್ಮಾ
ಕಾರ್ಮಿಕ ಇಲಾಖೆ ಆಯುಕ್ತರು ಪೂರ್ವಗ್ರಹ ಪೀಡಿತರಾಗಿ ಮಾತನಾಡಿದ್ದಾರೆ
ಬೆಂಗಳೂರು: ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆಯ ಪದಾಧಿಕಾರಿ ಹಾಗೂ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರನ್ನು ಕಳೆದ ರಾತ್ರಿ 11ಗಂಟೆಯಲ್ಲಿ ಪೊಲೀಸ್ ಠಾಣೆಗೆ ಕರೆತಂದು ಮಾ.22ರ ಬೆಳಗ್ಗೆ 11 ಗಂಟೆಯಾದರು ಬಿಡುಗಡೆ ಮಾಡಿಲ್ಲ.
ಇದು ಪೊಲೀಸರು ಸಂಪೂರ್ಣವಾಗಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ರೌಡಿಶೀಟರ್‌ನನ್ನು ಬಿಟ್ಟು ಉಳಿದವರನ್ನು 1ಗಂಟೆಯೊಳಗೆ ಬಿಟ್ಟು ಕಳುಹಿಸಬೇಕು. ಹಾಗೆ ಮಾಡಿಲ್ಲ. ಹೀಗಾಗಿ ಪೊಲೀಸರ ವಿರುದ್ಧ ಪಿಸಿಆರ್ ಪ್ರಕರಣ ದಾಖಲಿಸಲಾಗುವುದು ಎಂದು ವಕೀಲ ನಟರಾಜ್ ಶರ್ಮಾ ಹೇಳಿದ್ದಾರೆ.
ಇನ್ನು ಸಾರಿಗೆ ನೌಕರರು ಕಾನೂನಿನ ರೀತಿ ಹೋರಾಟ ಮಾಡುತ್ತಾರೆ. ಇದೇ ಮಾ.24ರಿಂದ ಹಮ್ಮಿಕೊಂಡಿರುವ ಮುಷ್ಕರವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಮಾಡುತ್ತಾರೆ. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಇದೇ ಕಳೆದ ಮಾ.20ರಂದು ಕಾರ್ಮಿಕ ಇಲಾಖೆಯ ಆಯುಕ್ತರು ಬರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಮಾತ್ರ ಆಹ್ವಾನಿಸಿದ್ದು, ಉಳಿದ ನಿಗಮಗಳ ಅಧಿಕಾರಿಗಳನ್ನು ಕರೆದಿಲ್ಲ. ಮತ್ತೆ ದಿನಾಂಕವನ್ನು ಮುಂದೂಡಿದ್ದಾರೆ. ಅಂದರೆ ಅವರ ನಡೆಯಲ್ಲೇ ಗೊತ್ತಾಗುತ್ತದೆ ಅವರು ಎಷ್ಟರ ಮಟ್ಟಿಗೆ ನೌಕರರಿಗೆ ನ್ಯಾಯ ಕೊಡಿಸಲು ಮುಂದಾಗಿದ್ದಾರೆ ಎಂಬುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಕಾರ್ಮಿಕ ಇಲಾಖೆಯ ಆಯುಕ್ತರು ಅತ್ತೆ ಮನೆಗೆ ಅಳಿಯ ಬಂದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ಕೂರಿಸಿಕೊಂಡು ಮಾತನಾಡಿದ್ದಾರೆ. ನೌಕರರ ವೇದಿಕೆ ಪದಾಧಿಕಾರಿಗಳನ್ನು ಕರೆದು 15ದಿನ ಕಾಲವಕಾಶ ಕೊಟ್ಟು ಕಳುಹಿಸಿದ್ದಾರೆ. ಅಂದರೆ, ಆಯುಕ್ತರು ಮಾತನಾಡಿರುವುದರಲ್ಲೇ ಗೊತ್ತಾಗುತ್ತದೆ ಅವರು ಪೂರ್ವಗ್ರಹ ಪೀಡಿತರಾಗಿದ್ದರು ಎಂಬುವುದು ಎಂದು ಹೇಳಿದರು.
ಇನ್ನು ಪೊಲೀಸ್‌ನವರು ಪೊಲೀಸ್ ಠಾಣೆಗೆ ಕರೆತಂದ ಒಂದು ಗಂಟೆಯೊಳಗೆ ರೌಡಿಶೀಟರ್ ಅಲ್ಲದವರನ್ನು ಕರೆತಂದರೆ ಬಿಟ್ಟು ಕಳುಹಿಸಬೇಕು. ಆದರೆ ಕಳುಹಿಸಿಲ್ಲ ಜತೆಗೆ ಆರೋಗ್ಯ ತಪಾಸಣೆ ಮಾಡಿಸಬೇಕಿತ್ತು ಅದನ್ನು ಮಾಡಿಸಿಲ್ಲ ಎಂದು ಕಿಡಿಕಾರಿದರು.