CRIMENEWSನಮ್ಮಜಿಲ್ಲೆ

ಪಂಕ್ಚರಾಗಿ ನಿಂತಿದ್ದ ಕ್ಯಾಂಟರ್‌ಗೆ KSRTC ಬಸ್‌ ಡಿಕ್ಕಿ: ಚಾಲಕನ ಕಾಲುಗಳು ಮುರಿತ- 20ಕ್ಕೂ ಹೆಚ್ಚು ಮಂದಿಗೆ ಗಾಯ

ವಿಜಯಪಥ ಸಮಗ್ರ ಸುದ್ದಿ

ರಾಮನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕ್ಯಾಂಟರ್‌ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ಕಾಲುಗಳು ಮುರಿದಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸೋಲೂರು ಬಳಿ ನಡೆದಿದೆ.

ಚಿಕ್ಕಮಂಗಳೂರು ವಿಭಾಗದ ಸಕಲೇಶಪುರ ಘಟಕದ ಬಸ್‌ ಅಪಘಾತಕೀಡಾಗಿದ್ದು, ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿದ್ದ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬಸ್‌ನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಜೆಸಿಬಿ ಬಳಸಿ ಚಾಲಕನನ್ನು ರಕ್ಷಿಸಿದ್ದಾರೆ.

ಬಸ್ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು ಈ ವೇಳೆ ಕ್ಯಾಂಟರ್ ಪಂಕ್ಚರ್ ಆಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಅದನ್ನೆಲ್ಲ ಗಮನಿಸದೆ ಬಸ್ ಚಲಾಯಿಸಿದ್ದ ಪರಿಣಾಮ ಬಸ್ ಕ್ಯಾಂಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಇನ್ನು ಅಪಘಾತದಿಂದ ಗಾಯಗೊಂಡ ಪ್ರಯಾಣಿಕರು ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಘಡ ಸಂಬಂಧ ಸೋಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Deva
the authorDeva

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ