NEWSನಮ್ಮರಾಜ್ಯಬೆಂಗಳೂರು

ಚಾಲಕನ ವೇತನದಲ್ಲಿ ಕಡಿತ ಮಾಡಿದ ಹಣ ಇನ್ಶೂರೆನ್ಸ್‌ಗೆ ತುಂಬದೆ ನಷ್ಟ ಮಾಡಿದ ಅಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 1979ರಲ್ಲಿ ಚಾಲಕನಾಗಿ ಸೇವೆ ಆರಂಭಿಸಿದ ಬಿ.ಎಂ.ಹುಂಡೇಕಾರ ಎಂಬುವರ ಸುಮಾರು 9 ಸಾವಿರ ರೂಪಾಯಿ ಇನ್ಶೂರೆನ್ಸ್‌ಗೆ ತುಂಬಬೇಕಾದ ಹಣವನ್ನು ವೇತನದಲ್ಲಿ ಕಡಿತ ಮಾಡಿಕೊಂಡು ಅದನ್ನು ತುಂಬದೆ ವಿಮೆ ಹಣ ಸರಿಯಾಗಿ ಕೈ ಸೇರಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಸಾರಿಗೆ ನಿಗಮದ ಬೆಂಗಳೂರಿನ ಶಾಂತಿನಗರದಲ್ಲಿರುವ ಮುಖ್ಯ ಕೇಂದ್ರ ಕಚೇರಿಗೆ ಮತ್ತು ಸಂಬಂಧಪಟ್ಟ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹತ್ತಾರು ಮನವಿ ಪತ್ರಗಳನ್ನು ಸಲ್ಲಿಸಿದರೂ ಹಾಗೂ ಹತ್ತಾರು ನೂರಾರು ಬಾರಿ ಭೇಟಿ ಮಾಡಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ಬಿ.ಎಂ.ಹುಂಡೇಕಾರ ಅವರು ಸೇವೆಯಲ್ಲಿ ಇದ್ದಾಗ ಅವರನ್ನು ಎರಡು ಬಾರಿ ವಜಾ ಮಾಡಲಾಗಿತ್ತು. ಈ ವೇಳೆ ಅವರು ಕೋರ್ಟ್‌ ಮೊರೆ ಹೋಗಿ ತಮ್ಮ ವಜಾ ಆದೇಶವನ್ನು ಕಾನೂನಾತ್ಮಕವಾಗಿ ರದ್ದುಪಡಿಸಿಕೊಂಡು ಬಂದಿದ್ದರು. ಆ ಬಳಿಕ 2015ರ ಏಪ್ರಿಲ್‌ 30ರಂದು ಸೇವೆಯಿಂದ ನಿವೃತ್ತಿಗೊಳಿಸಿದ್ದು, ಅಂದಿನಿಂದ ಈವರೆಗೂ ಅವರಿಗೆ ಸಲ್ಲಬೇಕಿರುವ ಇನ್ಶೂರೆನ್ಸ್ ಹಣದ ಬಗ್ಗೆ ಅಧಿಕಾರಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

ಇದರಿಂದ ಮನನೊಂದ ನಿವೃತ್ತ ಚಾಲಕ ಬಿ.ಎಂ.ಹುಂಡೇಕಾರ ಸಂಬಂಧಪಟ್ಟ ನಿಗಮದ ಎಂಡಿ ಮತ್ತು ಬೆಂಗಳೂರಿನ ಕೇಂದ್ರ ಕಚೇರಿಗೂ ನೂರಾರು ಬಾರಿ ಅಲೆದು ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಕೊಡುವಂತೆ ಮನವಿ ಮಾಡಿದ್ದಾರೆ, ಆದರೂ ಹುಂಡೇಕಾರ ಅವರ ಮನವಿಗೆ ಯಾವುದೇ ಅಧಿಕಾರಿಗಳು ಸ್ಪಂದಿಸದೆ ಅಸಡ್ಡೆಯಿಂದ ವರ್ತಿಸಿದ್ದಾರೆ ಎಂಬುದಕ್ಕೆ ಅವರು ಈಗಲೂ ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವುದೇ ತಾಜಾ ನಿರ್ದಶನವಾಗಿದೆ.

ಇನ್ನು ಚಾಲಕ ಹುಂಡೇಕಾರ್‌ ಹೆಸರಿನಲ್ಲಿ ಸಮವಸ್ತ್ರ, ರೇನ್‌ಕೋಟ್‌ ಇತರ ವಸ್ತುಗಳನ್ನು ಅವರ ಸಹಿ ಇಲ್ಲದೆ ಘಟಕದ ಅಧಿಕಾರಿಗಳು ತಾವೇ ಪಡೆದುಕೊಂಡು ಚಾಲಕನಿಗೆ ಹಾಗೂ ಸಂಸ್ಥೆಗೆ ಮೋಸ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಇದೇ ಹುಂಡೇಕಾರ ಅವರು ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಅಂದಿನ ಎಂಡಿ ಅವರಿಗೆ ಲಿಖಿತವಾಗಿ ದೂರು ನೀಡಿದರು. ಭ್ರಷ್ಟರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಸಂಸ್ಥೆಗೆ ಮತ್ತು ಚಾಲಕನಿಗೆ ಮೋಸ ಮಾಡಿದ ಅಧಿಕಾರಿಗಳ ರಕ್ಷಣೆ ಮಾಡಿದ್ದಾರೆ.

ಇಂಥ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾದ ಅಂದಿನ ಎಂಡಿ ಅವರಿಗೆ ಸಂಸ್ಥೆಯಲ್ಲಿ ಭ್ರಷ್ಟರನ್ನು ಬೆಳೆಸುವುದೇ ಕಾಯಕವಾಗಿತ್ತೋ ಏನೋ ಗೊತ್ತಿಲ್ಲ. ಆದರೆ, ಅಂದಿನಿಂದ ಪ್ರಸ್ತುತ ಸಂಸ್ಥೆಯಲ್ಲಿ ಭ್ರಷ್ಟರ ಸಂಖ್ಯೆಯೇ ಹೆಚ್ಚಾಗಿದ್ದು ನಿಷ್ಠಾವಂತ ಅಧಿಕಾರಿಗಳು ಮತ್ತು ನೌಕರರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸದಂತಹ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧ ಎಂಡಿ ಅವರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಭ್ರಷ್ಟ ಅಧಿಕಾರಿಗಳ ಹೆಡೆ ಮುರಿಕಟ್ಟಲು ಮುಂದಾಗಬೇಕಿದೆ ಎಂದು ಹುಂಡೇಕಾರ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ...