NEWSನಮ್ಮರಾಜ್ಯಶಿಕ್ಷಣ-

ಮೈಸೂರು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಅನಧಿಕೃತ ಕ್ಯಾಂಟೀನ್ ಈ ಕೂಡಲೇ ತೆರವುಗೊಳಿಸಿ : ಕೋರ್ಟ್‌ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬಾಡಿಗೆ ಬಾಕಿ  2,43,800  ರೂ.ಗಳು ಹಾಗೂ  ವಿದ್ಯುತ್,  ನೀರಿನ ಬಾಕಿ 2.60 ಲಕ್ಷ ರೂ. ಒಟ್ಟು   5,03,800 ರೂ.ಗಳ ಪಾವತಿಸಲೂ ಆದೇಶ

ಮೈಸೂರು: ಕರ್ನಾಟಕ ಸಾರ್ವಜನಿಕ ಆವರಣಗಳ ಸಕ್ಷಮ ಪ್ರಾಧಿಕಾರಗಳ ಜಿಲ್ಲಾ ನ್ಯಾಯಾಲಯವು ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಅವಧಿ ಮೀರಿದ ನಂತರವೂ, ಅಕ್ರಮವಾಗಿ ನಡೆಸುತ್ತಿದ್ದ ಕ್ಯಾಂಟೀನ್ ತೆರವುಗೊಳಿಸುವಂತೆ ಆದೇಶ ನೀಡಿದೆ.

ಕಾಲೇಜು ಪ್ರಾಂಶುಪಾಲರಾದ ಡಾ.ಡಿ. ರವಿ ಮತ್ತು ಸರ್ಕಾರಿ ವಕೀಲರಾದ ಉಮೇಶ್ ಕುಮಾರ್ ಅವರ ಸತತ ಕಾನೂನು ಹೋರಾಟದ ‌ಫಲವಾಗಿ ವಿದ್ಯಾರ್ಥಿ ಪರವಾದ ಆದೇಶ ಬಂದಿದೆ.

ಕಾಲೇಜಿ‌ನಲ್ಲಿ ಪ್ರತೀ ಮಾಹೆ 7100 ರೂಪಾಯಿ ಬಾಡಿಗೆಯಂತೆ ಮತ್ತು 21,300 ರೂಪಾಯಿ ಭದ್ರತಾ ಠೇವಣಿಯಂತೆ ಕ್ಯಾಂಟೀನ್ ನಡೆಸಲು 2017 ರಿಂದ 2022 ರವರೆಗೆ ಕರಾರು ಮಾಡಿಕೊಳ್ಳಲಾಗಿತ್ತು. ಆದರೆ 58 ತಿಂಗಳ ಬಾಡಿಗೆ ಬದಲಿಗೆ ಕೇವಲ 26 ತಿಂಗಳ ಬಾಡಿಗೆ ನೀಡಲಾಗಿತ್ತು. ಅಲ್ಲದೇ, 52 ತಿಂಗಳ ವಿದ್ಯುತ್ ಬಿಲ್ ಆದ 2.6 ಲಕ್ಷವನ್ನು ಪಾವತಿಸದೆ ಕರಾರು ಉಲ್ಲಂಘನೆ ‌ಮಾಡಲಾಗಿತ್ತು.

ವಿಧಿಸಿದ ಷರತ್ತುಗಳ ಅನ್ವಯ ಪ್ರಾಂಶುಪಾಲರ ನಿರ್ಧಾರವೇ ಅಂತಿಮ. ಆದರೆ, ಇದನ್ನು ಮರೆಮಾಚಿ ಬಾಡಿಗೆದಾರರಾದ ಎಚ್.ಪಿ. ಪ್ರಭಾವತಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ, ನ್ಯಾಯಾಲಯದ ಆದೇಶದ ನಡುವೆಯೂ ಒಪ್ಪಂದ ಉಲ್ಲಂಘಿಸಿ ಹಸ್ತಾಂತರ ಮಾಡಿರಲಿಲ್ಲ. ಜತೆಗೆ, ಕೋವಿಡ್-19 ರ ಕಷ್ಟದ ಸಮಯದಲ್ಲಿ ವಿನಾಯಿತಿ ನೀಡಿದ್ದರೂ ವಿನಾಕಾರಣ ಹಸ್ತಾಂತರ ಮಾಡದೆ ತೊಂದರೆ ನೀಡಿದ್ದರು.

ಈ ವಿಷಯವನ್ನು ಮನಗಂಡ ಕರ್ನಾಟಕ ಸಾರ್ವಜನಿಕ ಆವರಣಗಳ ಅನಧಿಕೃತ ಅನುಭವದಾರರನ್ನು ಒಕ್ಕಲೆಬ್ಬಿಸುವ ಕಾಯಿದೆ 1974 ರ ಸಕ್ಷಮ ಪ್ರಾಧಿಕಾರಗಳ ನ್ಯಾಯಾಲಯವು, ಪ್ರಕರಣವನ್ನು ಇತ್ಯರ್ಥಪಡಿಸಿ ಕ್ಯಾಂಟೀನ್‌ನ ಬಾಡಿಗೆದಾರರಾದ ದೇವರಾಜ ಮೋಹಲ್ಲಾದ ಗರಡಿ ರಸ್ತೆ ನಿವಾಸಿ ಪ್ರಭಾವತಿ ಅವರಿಗೆ ಕಾಲೇಜ್ ಕ್ಯಾಂಟೀನ್ ಅನ್ನು ಈ ಕೂಡಲೇ ತೆರವುಗೊಳಿಸುವಂತೆ ಆದೇಶ ನೀಡಲಾಗಿದೆ.

ಇನ್ನು ಬಾಡಿಗೆ ಬಾಕಿ, ರೂಪಾಯಿ 2,43,800 (ಎರಡು ಲಕ್ಷದ ನಲವತ್ಮೂರು ಸಾವಿರದ ಎಂಟು ನೂರು) ಮತ್ತು ವಿದ್ಯುತ್ ಹಾಗೆಯೇ ನೀರಿನ ಬಾಕಿ, ರೂಪಾಯಿ 2,60,000 (ಎರಡು ಲಕ್ಷ ಅರವತ್ತು ಸಾವಿರ), ಅಂದರೆ ಒಟ್ಟು   5,03,800 ರೂ.ಗಳನ್ನು ಮೊತ್ತವನ್ನು ಕೂಡಲೇ ಪಾವತಿಸುವುದಲ್ಲದೇ, ಜಾಗದಿಂದ ಕೂಡಲೇ ತೆರವು ಮಾಡುವಂತೆ ನ್ಯಾಯಾದೀಶರು ಆದೇಶ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ , ದೂರನ್ನು ಆಧರಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಹಾರ ಗುಣಮಟ್ಟದ ಕುರಿತು ಪ್ರಶ್ನೆ ಮಾಡಲಾಗಿ, ಬಾಡಿಗೆದಾರರು ಕಾಲೇಜು ಪ್ರಾಂಶುಪಾಲರೊಂದಿಗೆ ಜಗಳ ಮಾಡಿದ್ದರು. ಅಲ್ಲದೇ, ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರಾಂಶುಪಾಲರಾದ ಡಾ.ರವಿ ಈ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಅಲ್ಲದೆ, ವಿದ್ಯಾರ್ಥಿಗಳು ಅವ್ಯವಸ್ಥೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಣಾಮ, ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ಅಂದಿನ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ವಿದ್ಯಾರ್ಥಿ ಪರವಾದ ನ್ಯಾಯಾಲಯದ ಈ ಆದೇಶವು ಗ್ರಾಮೀಣ ಭಾಗದಿಂದ ಕಲಿಯಲು ಬರುವ ಬಡ ಮತ್ತು ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ವರದಾನವಾಗಿದೆ, ಎಂಬುದು ಪ್ರಾಂಶುಪಾಲರಾದ ಡಾ.ಡಿ.ರವಿ ಅವರ ಅಭಿಪ್ರಾಯ.

ಪ್ರಕರಣ ಸಂಬಂಧ ಎಲ್ಲ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳು ವರದಿ ಮಾಡಿದ್ದರ ಪರಿಣಾಮ, ಸಮಸ್ಯೆಯು ಸಂಬಂಧಿಸಿದ ಮೇಲಧಿಕಾರಿಗಳಿಗೆ ವೇಗವಾಗಿ ಮುಟ್ಟಿದೆ ಎಂಬುದನ್ನು ಕಾಲೇಜ್ ಅಧ್ಯಾಪಕರು ಸ್ಮರಿಸಿದರು.

Leave a Reply

error: Content is protected !!
LATEST
KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ...