ಮಂಗಳೂರು: ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಶೀಘ್ರವೇ ಬಗೆಹರಿಸಲಾಗುತ್ತದೆ. ಅಸಮಾಧಾನಿತರನ್ನು ಕರೆದು ಹೈಕಮಾಂಡ್ ಮಾತನಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ನಾನು ಎಲ್ಲ ನಾಯಕರ ಜತೆ ಮಾತನಾಡಿದ್ದೇನೆ. ಅಸಮಾಧಾನಿತರ ಜತೆ ಹೈಕಮಾಂಡ್ ಮಾತನಾಡುತ್ತಿದೆ. ಶೀಘ್ರವೇ ಭಿನ್ನಮತ ಶಮನವಾಗಲಿದೆ ಎಂದರು.
ಇನ್ನು ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾಗಿದೆ. ಇನ್ನೂ 12 ಕ್ಷೇತ್ರಗಳು ಬಾಕಿ ಇವೆ. ಕೆಲವೆಡೆ ಆಕಾಂಕ್ಷಿಗಳು ಎಂಎಲ್ಸಿಗಳು ರಾಜೀನಾಮೆ ನೀಡಿದ್ದಾರೆ. ಉಳಿದ ಕ್ಷೇತ್ರಗಳಲ್ಲೂ ಅಚ್ಚರಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ 60 ರಿಂದ 65 ಕ್ಷೇತ್ರಗಳಿಗೆ ಅಭ್ಯರ್ಥಿಗಳೇ ಇಲ್ಲ. ಈಗ ಅಮದು ಮಾಡಿಕೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಕಾಂಗ್ರೆಸ್ಗೆ ಸಮರ್ಥ ಅಭ್ಯರ್ಥಿಗಳು ಇಲ್ಲ. ಅವರು ಅಧಿಕಾರಕ್ಕೆ ಬರಲ್ಲ. ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯವಾಗಿ ಇರುತ್ತದೆ. ಇನ್ನು ಪಕ್ಷದಲ್ಲಿ ಅಸಮಾಧಾನಗೊಂಡಿರುವವರ ಮನವೊಲಿಕೆ ಮಾಡುತ್ತೇವೆ ಎಂದರು.