ಬೆಂಗಳೂರು: ಪ್ರಿಯಕರ ತನ್ನ ಪ್ರೇಯಸಿಯ ಹುಟ್ಟುಹಬ್ಬವನ್ನು ಆಚರಿಸಿ, ಖುಷಿಯಲ್ಲಿ ಕೇಕ್ ಕತ್ತರಿಸಿ ಬಳಿಕ ಆಕೆಯ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿರುವ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಲಗ್ಗೆರೆಯಲ್ಲಿ ನಿವಾಸಿ ನವ್ಯ (24) ಜನ್ಮದಿನದಂದೆ ತನ್ನ ಪ್ರಿಯಕರನಿಂದ ಹತ್ಯೆಯಾದ ಯುವತಿ. ಪ್ರಶಾಂತ್ ಎಂಬಾತನೇ ಕೊಲೆ ಮಾಡಿದ ಪ್ರೇಮಿ. ಇತ್ತೀಚೆಗೆ ನವ್ಯ ಬೇರೆಯವರ ಜತೆ ಚಾಟಿಂಗ್ ಮಾಡುತ್ತಾ ಇದ್ದಳು ಎಂದು ಪ್ರಶಾಂತ್ ಅನುಮಾನಿಸಿದ್ದನಂತೆ.
ಇದೇ ವಿಚಾರಕ್ಕಾಕೆ ಇಬ್ಬರ ಮಧ್ಯೆ ಪದೇಪದೇ ಜಗಳ ಆಗುತ್ತಿತ್ತು ಎಂದು ಹೇಳಲಾಗುತ್ತಿದ್ದು. ಇದೀಗ ಅನುಮಾನದ ಮೇಲೆ ಬರ್ತಡೇ ಆಚರಿಸಿ, ಬಳಿಕ ಚಾಕುವಿನಿಂದ ಅಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಪಾಪಿ ಪ್ರಿಯಕರ.
ಪೊಲೀಸ್ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯ, ಕಳೆದ ಆರು ವರ್ಷಗಳಿಂದ ಪ್ರಶಾಂತ್ನನ್ನ ಪ್ರೀತಿಸುತ್ತಿದ್ದಳು. ನವ್ಯ ಹಾಗೂ ಪ್ರಶಾಂತ್ ಇಬ್ಬರು ಕನಕಪುರ ಮೂಲದವರು ಹಾಗೂ ದೂರದ ಸಂಬಂಧಿಕರು ಕೂಡ ಆಗಿದ್ದಾರೆ.
ಕಳೆದ ಮಂಗಳವಾರ ನವ್ಯಳ ಬರ್ತಡೇ ಇತ್ತು. ಅಂದು ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ ಹುಟ್ಟುಹಬ್ಬ ಆಚರಣೆಗೆ ಪ್ಲಾನ್ ಮಾಡಿ ಅದರಂತೆ ರಾತ್ರಿ ಕೇಕ್ ಕಟ್ಟು ಮಾಡಿ ಕೇಕ್ ತಿನ್ನಿಸಿದ್ದಾನೆ. ಬಳಿಕ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ.
ಸದ್ಯ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆ ಈ ಸಂಬಂಧ ದೂರು ದಾಖಲಾಗಿದೆ.