ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಸಂಚಾರ ಮೇಲ್ವಿಚಾರಕರಿಗೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸಂಸ್ಥೆಯು ನೀಡಿರುವ ಸಮವಸ್ತ್ರವನ್ನು ಧರಿಸದೆ ಸಂಸ್ಥೆಯ ಗೌರವ -ಘನತೆಗೆ ಧಕ್ಕೆ ಬರುವಂತೆ ರಾಜಾರೋಷವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಇಲ್ಲಿನ ಬಹುತೇಕ ಅಧಿಕಾರಿಗಳು ಸಮವಸ್ತ್ರ ಇಲ್ಲದೆ ಡ್ಯೂಟಿಗೆ ಹಾಜರಾಗುತ್ತದ್ದಾರೆ ಇದಕ್ಕೆ ತಾಜಾ ನಿದರ್ಶನ ಎಂದರೆ ಹೊನ್ನಾಳಿ ಘಟಕದ ಘಟಕ ವ್ಯವಸ್ಥಾಪಕರು ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ ಎಂದೇ ಹೇಳ ಬಹುದು.
ಕಾರಣ ಘಟಕದಲ್ಲಿ ಘಟಕ ವ್ಯವಸ್ಥಾಪಕರು ಸಮವಸ್ತ್ರ ಇಲ್ಲದೆ ಕರ್ತವ್ಯ ನಿವರಹಿಸುತ್ತಿರುವ ವಿಭಾಗದ ಸಂಚಾರ ಮೇಲ್ವಿಚಾರಕರಿಗೆ ಯಾವುದೇ ತಾಕೀತು ಮಾಡದೇ ಕಂಡರೂ ಕಾಣದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ಈವರೆಗೂ ಯಾವುದೇ ರೀತಿಯ ನೋಟಿಸ್ ನೀಡುವುದಾಗಲಿ ಸೂಕ್ತ ಶಿಸ್ತು ಕ್ರಮ ಜರುಗಿಸಿರುವುದಿಲ್ಲ ಮಾಡಿಲ್ಲ.
ಈ ಸಂಚಾರ ಮೇಲ್ವಿಚಾರಕರುಗಳು ಹೊನ್ನಾಳಿ ಘಟಕಕ್ಕೆ ನೀಯೋಜನೆಗೊಂಡಾಗಿನಿಂದಲೂ ಸಮವಸ್ತ್ರವನ್ನು ಧರಿಸದೆ ಇಲ್ಲಿಯವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಘಟಕದಲ್ಲಿ ಘಟಕ ವ್ಯವಸ್ಥಾಪಕರ ಕೊಠಡಿಯ ಬಳಿಯೇ ಸಮವಸ್ತ್ರ ಧರಿಸದೆ ಇದ್ದರೂ ಕಂಡು ಕಾಣದಂತೆ ಡಿಎಂ ವರ್ತಿಸುತ್ತಿದ್ದಾರೆ.
ಈ ಸಂಚಾರ ಮೇಲ್ವಿಚಾರಕರಿಗೆ ಯಾರು ಹೇಳುವವರು ಕೇಳುವವರು ಇಲ್ಲದಂತಾಗಿದೆ. ಅಲ್ಲದೆದ ಸಂಸ್ಥೆಯು ಹೊರಡಿಸಿರುವ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ. ಇನ್ನು ಶಿವಮೊಗ್ಗ ವಿಭಾಗದ ಅಧಿಕಾರಿಗಳು ಹೊನ್ನಾಳಿ ಘಟಕಕ್ಕೆ ಭೇಟಿ ನೀಡಾದರೂ ಸಹ ಸಮವಸ್ತ್ರವನ್ನು ಧರಿಸದೆ ಇರುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ವಿಪರ್ಯಾಸವೇ ಸರಿ.
ನೋಡಿ ಸ್ವಾಮಿ ಯಾವುದೇ ಚಾಲನಾ ಸಿಬ್ಬಂದಿಗಳು ಸಮವಸ್ತ್ರ ಧರಿಸದೆ ಕರ್ತವ್ಯ ನಿರ್ವಹಿಸುತ್ತಿದ್ದರೆ ಮೇಮೋ ನೀಡಿರುವ ಅಧಿಕಾರಿಗಳೀಗೇಕೆ ಇದು ಕಾಣಿಸುತ್ತಿಲ್ಲ, ತಿಳಿಯದಾಗಿದೆ. ಶಿವಮೊಗ್ಗ ವಿಭಾಗದಲ್ಲಿ ಅಧಿಕಾರಿಗಳ ವರ್ಗಕ್ಕೆ ಒಂದು ನ್ಯಾಯ ಚಾಲನಾ ಸಿಬ್ಬಂದಿ ವರ್ಗದವರಿಗೆ ಒಂದು ನ್ಯಾಯ ಎಂಬಂತೆ ಕಾಣುತ್ತಿದೆ.
ಸಮವಸ್ತ್ರವನ್ನು ಧರಿಸದೆ ಕರ್ತವ್ಯ ನಿರತ ಸಂಚಾರ ಮೇಲ್ವಿಚಾರಕರಿಗೆ ಫೀಲ್ಡ್ ವರ್ಕ್‌ಗಳಲ್ಲಿ ನೀಯೋಜನೆಗೊಳಿಸಿ ಇವರ ವಿರುದ್ಧ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ವಿಭಾಗದ ನೌಕರರು ನಿಗಮದ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.