CrimeNEWSನಮ್ಮರಾಜ್ಯ

KSRTC: ಸಾರಿಗೆ ನೌಕರರ ವಂಚಿಸಿ ಕೋಟಿ ಕೋಟಿ ನುಂಗಿರುವ ಎಸ್‌.ಜೆ.ಮೇಟಿ ಇತರರ ವಿರುದ್ಧ ಕ್ರಮಕ್ಕೆ ನೌಕರರ ಸಂಘ ಪಟ್ಟು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ, ಈಶಾನ್ಯ ಮತ್ತು ಬಿಎಂಟಿಸಿ ನಿಗಮಗಳ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಸ್‌.ಜೆ.ಮೇಟಿ ಸೇರಿ ಇತರರು ಸುವರ್ಣ ಸಾರಿಗೆ ಹೆಸರಿನಲ್ಲಿ ಅಕ್ರಮ ಬಡಾವಣೆಯನ್ನು ನಿರ್ಮಿಸಿ ಸಂಸ್ಥೆಯ ನೌಕರರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದು ಈ ಭ್ರಷ್ಟರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ನಿಗಮದ ವ್ಯವಸ್ಥಾಪಕರಿಗೆ ಮನವಿ ಮಾಡಿದೆ.

ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಖ್ಯವಾಗಿ ವಂಚಕ ಎಸ್‌.ಜೆ.ಮೇಟಿ ಸೇರಿದಂತೆ ಇತರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ವಂಚನೆಗೆ ಒಳಗಾದ ನಮ್ಮ ಸಾರಿಗೆ ನೌಕರರಿಗೆ ನ್ಯಾಯದೊರಕಿಸಿಕೊಡಬೇಕು ಎಂದು ಸಂಸ್ಥೆಯ ಎಂಡಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಈಶಾನ್ಯ ಮತ್ತು ಬಿಎಂಟಿಸಿ ನಿಗಮಗಳ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ.ಮೇಟಿ, ಗೌರವ ಕಾರ್ಯದರ್ಶಿ ಬಸಯ್ಯನಂದಿಕೋಲ ಬಿ.ಎ., ಉಪಾಧ್ಯಕ್ಷ ಚುಂಚಯ್ಯ ಹಾಗೂ ಸಂಘದ ಎಲ್ಲ ನಿರ್ದೇಶಕರು ಮತ್ತು ಸ್ಥಳೀಯ ವ್ಯಕ್ತಿ ಪಿ.ಸಿ.ರಾಜೇಶ್ ಸೇರಿ ಸುವರ್ಣ ಸಾರಿಗೆ ಬಡಾವಣೆಯನ್ನು ಬೆಂಗಳೂರು ದಕ್ಷಿಣ ತಾಲೂಕಿನ ನರಸೀಪುರದ ಬಳಿ ನಿರ್ಮಿಸಿದ್ದಾರೆ.

ಅಕ್ರಮವಾಗಿ ನಿರ್ಮಿಸಿರುವ ಈ ಬಡಾವಣೆಯಲ್ಲಿ ಸಾರಿಗೆ ಸಂಸ್ಥೆಯ ಸುಮಾರು 58 ನೌಕರರಿಗೆ 30 x 40 ಮತ್ತು 20 x 30 ಅಡಿಗಳು ಸೈಟ್‌ಗಳನ್ನು ಹಂಚಿಕೆ ಮಾಡಿ ನೌಕರರಿಂದ ಲಕ್ಷಾಂತರ ರೂಪಾಯಿ ಪಡೆದು ಸಂಸ್ಥೆಯ ನೌಕರರಿಗೆ ಕೋಟಿಗಟ್ಟಲೆ ಹಣವನ್ನು ವಂಚಿಸಿ ಭ್ರಷ್ಟಾಚಾರ ಮಾಡಿದ್ದು ಬಹಿರಂಗವಾಗಿ ತಿಂಗಳುಗಳೇ ಕಳೆದಿವೆ ಆದರೂ ವಂಚಕರು ಏನು ಮಾಡೆ ಇಲ್ಲ ಎಂಬಂತೆ ರಾಜರೋಷವಾಗಿ ತಿರುಗಾಡುತ್ತಿದ್ದಾರೆ. ಅಲ್ಲದೆ ಸಂಸ್ಥೆಯಲ್ಲೇ ಇನ್ನೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕೂಡಲೇ ಈ ವಂಚಕರ ವಿರುದ್ಧ  ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ ನೌಕರರ ಸಂಘದ ಪದಾಧಿಕಾರಿಗಳು.

ಈ ಸುವರ್ಣ ಸಾರಿಗೆ ಬಡಾವಣೆಯ ಅಕ್ರಮವನ್ನು ಕರ್ನಾಟಕ ರಕ್ಷಣ ವೇದಿಕೆ, ಅಪ್ಪು ಸೇನೆ ಅಧ್ಯಕ್ಷ ವಿಜಯಕುಮಾರ್ ಎಂಬುವವರು ಬೆಂಗಳೂರು ದಕ್ಷಿಣ ತಾಲೂಕು, ತಹಸೀಲ್ದಾರ್‌ರವರ ಕಚೇರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ತಾಲೂಕು ತಹಸೀಲ್ದಾ‌ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿ ಕೇತೋಹಳ್ಳಿ ಗ್ರಾಮದ 3F 30. 4/1A, 13/13, 7/1, 4/1, 5, 13/1. 13/2, 14/2, 14/1, 14/4 ನಂಬರ್‌ಗಳಲ್ಲಿ ನಿರ್ಮಿಸಿರುವ ಸುರ್ವಣ ಸಾರಿಗೆ ಬಡಾವಣೆಯ ಜಾಗವು ಕೃಷಿ ಭೂಮಿಯಾಗಿದೆ (Green Zone).

ಅಲ್ಲದೆ ಇದರ ಪಕ್ಕದಲ್ಲೇ ಇರುವ ಸುಮಾರು ಎರಡು ಎಕರೆ ಸರ್ಕಾರಿ ಜಾಗವನ್ನು ಸಹ ಒತ್ತುವರಿ ಮಾಡಿ ಅಕ್ರಮ ಬಡಾವಣೆಯನ್ನು ನಿರ್ಮಿಸಿರುವುದು ತನಿಖೆಯ ಮೂಲಕ ತಿಳಿದು ಬಂದಿದೆ. ಹೀಗಾಗಿ ಈ ಸುವರ್ಣ ಸಾರಿಗೆ ಅಕ್ರಮ ಬಡಾವಣೆಯನ್ನು ತೆರವುಗೊಳಿಸಬೇಕೆಂದು ಬೆಂಗಳೂರು ತಹಸೀಲ್ದಾರರು ಆದೇಶವನ್ನು ಹೊರಡಿಸಿದ್ದಾರೆ.

ಇನ್ನು ಈ ಅಕ್ರಮ ಬಡಾವಣೆಯನ್ನು ನಿರ್ಮಿಸಿರುವ ಸಾರಿಗೆ ಗೃಹ ನಿರ್ಮಾಣ ಮಂಡಳಿಯ ಸಂಘದ ಅಧ್ಯಕ್ಷ ಎಸ್.ಜೆ.ಮೇಟಿ, ಗೌರವ ಕಾರ್ಯದರ್ಶಿ ಬಸಯ್ಯನಂದಿಕೋಲ ಬಿ.ಎ., ಉಪಾಧ್ಯಕ್ಷ ಚುಂಚಯ್ಯ ಹಾಗೂ ಸಂಘದ ಎಲ್ಲ ನಿರ್ದೇಶಕರು ಮತ್ತು ಸ್ಥಳೀಯ ವ್ಯಕ್ತಿ ಪಿ.ಸಿ.ರಾಜೇಶ್ ಸೇರಿದಂತೆ ಸಂಘದ ಎಲ್ಲ ಪದಾಧಿಕಾರಿಗಳ ವಿರುದ್ಧ ಬಿಎಂಟಿಎಫ್ ಪೊಲೀಸ್ ಇಲಾಖೆಯಿಂದ 16.11.2022 ರಂದು 192/ಎ ಸೆಕ್ಷನ್ ಕಾಯ್ದೆಯಡಿಯಲ್ಲಿ ಎಫ್‌ಐಆರ್ ನಂ. 130/2021 ರಂತೆ: ಕೇಸ್ ದಾಖಲಾಗಿದೆ.

ಕರ್ನಾಟಕ ರಕ್ಷಣ ವೇದಿಕೆ, ಅಪ್ಪು ಸೇನೆಯ ಅಧ್ಯಕ್ಷ ಆರ್.ವಿಜಯಕುಮಾರ್‌‌ ಅವರು ಅಕ್ರಮವಾಗಿ ನಿರ್ಮಿಸಿರುವ ಸುವರ್ಣ ಸಾರಿಗೆ ಬಡಾವಣೆಯಲ್ಲಿ ಸಾರಿಗೆ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸೈಟ್‌ಗಳನ್ನು ಹಂಚಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿ ಕೋಟಿಗಟ್ಟಲೆ ಅವ್ಯವಹಾರ ಮಾಡಿದ್ದಾರೆ ಎಂದು ಎಸ್‌.ಜೆ. ಮೇಟಿ ಇತರರ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ದೂರಿನ್ವಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ.ಮೇಟಿ, ಸಂಘದ ಇತರರು ಸೇರಿದಂತೆ ಸ್ಥಳೀಯ ವ್ಯಕ್ತಿ ಪಿ.ಸಿ.ರಾಜೇಶ್ ವಿರುದ್ಧ ಪೊಲೀಸ್‌ ಅಧಿಕಾರಿಗಳು ಕೇಸ್‌ ದಾಖಲಿಸಿಕೊಂಡಿದ್ದಾರೆ.

ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿಯು ಸಂಸ್ಥೆಯ ನೌಕರರನ್ನು ಒಳಗೊಂಡಂತೆ ರಚನೆಯಾಗಬೇಕಾಗಿದೆ. ಆದರೆ ಇದರಲ್ಲಿ ಉದ್ದೇಶಪೂರ್ವಕವಾಗಿ ಸಂಸ್ಥೆಯ ನೌಕರರಿಗೆ ವಂಚಿಸುವ ದುರುದ್ದೇಶದಿಂದ ಸಂಸ್ಥೆಯ ನೌಕರರಲ್ಲದ ಬೇರೆ, ಇಲಾಖೆಯ ನೌಕರ ಲಕ್ಷ್ಮಣ್ ಪಾತರೋಟ (ಸಹಾಯಕ ಇಂಜಿನಿಯರ್‌ ತಾಪಂ ನೆಲಮಂಗಲ)ನನ್ನು ಆಯ್ಕೆ ಮಾಡಿಕೊಂಡಿದ್ದಾನೆ ವಂಚಕ ಎಸ್‌.ಜೆ.ಮೇಟಿ. ಈ ಮೂಲಕ ಸಂಸ್ಥೆಯ ಘನತೆ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ ನೌಕರರ ಸಂಘದ ಪದಾಧಿಕಾರಿಗಳು.

ಇನ್ನು ಈ ಎಲ್ಲ ವಿಷಯಗಳನ್ನು ಟಿ.ವಿ.9 ಪ್ರಸಾರ ಮಾಡಿದ್ದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಸಾರಿಗೆ ಸಂಸ್ಥೆಗಳ ಘನತೆ ಗೌರವಕ್ಕೆ ಧಕ್ಕೆ ಉಂಟಾಗಿದ್ದು, ಈ ರೀತಿ ನಮ್ಮ ಸಂಸ್ಥೆಯ ಘನತೆ ಗೌರಕ್ಕೆ ಧಕ್ಕೆ ಉಂಟು ಮಾಡಿರುವ ಈ ಸಂಘದ ಎಲ್ಲ ನಿರ್ದೇಶಕರ ವಿರುದ್ಧ ಪ್ರಮಾಣಿಕವಾಗಿ ತನಿಖೆ ನಡೆಸಿ ಸೂಕ್ತ ಶಿಸ್ತು ಕ್ರಮ ಜರುಗಿಸುವ ಮೂಲಕ ಸುವರ್ಣ ಸಾರಿಗೆ ಅಕ್ರಮ ಬಡಾವಣೆಯಿಂದ ವಂಚಿತರಾಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಅನ್ಯಾಯಕ್ಕೆ ಒಳಗಾಗಿರುವ ನಮ್ಮ ಸಾರಿಗೆ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳಾದ ನಾವು ಮನವಿ ಮಾಡುತ್ತಿದ್ದೇವೆ ಎಂದು ಎಂಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ಪದಾಧಿಕಾರಿಗಳು ಎಂಡಿ ಅವರಿಗೆ ಸಲ್ಲಿಸಿರುವ ಮನವಿ ಪತ್ರ:  bmtc gruhanirmana

Leave a Reply

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?