ಬನ್ನೂರು: ಹೋಬಳಿಯ ಬೀಡನಹಳ್ಳಿ ಗ್ರಾಮದ ಬೀಡನಹಳ್ಳಿ ಶನೇಶ್ವರಸ್ವಾಮಿಯ ಗುಡ್ಡಪ್ಪ ಹಾಗೂ ಹೊಂಬಾಳಮ್ಮನವರ ದಿ. ನಿಂಗೇಗೌಡ ಅವರ ಪುತ್ರ ಉಮೇಶ್ (51) ಅವರು ಇಂದು ಮುಂಜಾನೆ ನಿಧನರಾದರು.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿಯ ತಮ್ಮ ನಿವಾಸದಲ್ಲಿ ಸೋಮವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.
51 ವರ್ಷ ವಯಸ್ಸಿನ ಉಮೇಶ್ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗಳಿಗೂ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಮೃತರು ತಾಯಿ ಮಹದೇವಮ್ಮ, ಪತ್ನಿ ಪುಷ್ಪಾ, ಪುತ್ರ ಶಿವಪ್ರಸಾದ್, ಪುತ್ರಿ ದಿವ್ಯ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮೇ 8 ಮಧ್ಯಾಹ್ನ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು.