NEWSನಮ್ಮರಾಜ್ಯಬೆಂಗಳೂರು

ಬಸ್‌ನಲ್ಲೇ ಹೆರಿಗೆ: ಮಾನವೀಯ ಸೇವೆಗೈದ KSRTC ಚಾಲನಾ ಸಿಬ್ಬಂದಿ ಸನ್ಮಾನಿಸಿದ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಬಸ್‌ನಲ್ಲೇ ಹೆರಿಗೆ ಮಾಡಿಸಿ ತಾಯಿ ಹಾಗೂ ಮಗು ಇಬ್ಬರ ಆರೋಗ್ಯದ ಬಗ್ಗೆ ಕಾಳಜಿವಹಿಸಿದ್ದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಅವರು ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ.

ಚನ್ನರಾಯಪಟ್ಟಣ-ಹಾಸನ ಮಾರ್ಗವಾಗಿ ಬಸ್‌ ಚಲಿಸುತಿತ್ತು ಈ ವೇಳೆ ಮಾರ್ಗಮಧ್ಯೆಯೇ ಮಹಿಳೆ ಬಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೀಗಾಗಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಲ್ಲಿ ಇಂದು ( ಮೇ 18) ಸನ್ಮಾನಿಸಿದ ಬಳಿಕ ಮಾತನಾಡಿದ ಜಿ.ಸತ್ಯವತಿ ಅವರು, ಇದೇ ಮೇ 15 ರಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಫಾತಿಮ (21) ಅವರಿಗೆ ಅತೀವ ಹೆರಿಗೆ ನೋವು ಕಾಣಿಸಿಕೊಂಡು, ಸಮೀಪದಲ್ಲಿ ಯಾವುದೇ ಆಸ್ಪತ್ರೆ ಇಲ್ಲದ ಸಂದರ್ಭದಲ್ಲಿ, ಸಕಾಲದಲ್ಲಿ ಮಾನವೀಯತೆ ಮೆರೆದು ಮಾರ್ಗ ಮಧ್ಯದಲ್ಲಿಯೇ ಬಸ್‌ನ್ನು ನಿಲ್ಲಿಸಿ, ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಜೀವ ಕಾಪಾಡಿದ್ದಾರೆ.

ನಮ್ಮ ಚಿಕ್ಕಮಗಳೂರು ವಿಭಾಗದ ಚಿಕ್ಕಮಗಳೂರು ಘಟಕದ ಚಾಲಕಿ-ಕಂ- ನಿರ್ವಾಹಕಿ ಎಸ್. ವಸಂತಮ್ಮ (ಬಿಲ್ಲೆ ಸಂಖ್ಯೆ 245) ಹಾಗೂ ಬಸ್ಸಿನ ಚಾಲಕ ಎಚ್‌.ಬಿ. ಕುಮಾರಸ್ವಾಮಿ, (ಬಿಲ್ಲೆ ಸಂಖ್ಯೆ. 199) ಅವರಿಗೆ ತಲಾ 5 ಸಾವಿರ ರೂ. ಹಾಗೂ 2 ಸಾವಿರ ರೂ. ನಗದು ಪುರಸ್ಕಾರ ನೀಡಿ ಸನ್ಮಾನಿಸಿ ಅಭಿನಂದಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.

ನಿಗಮದ ಚಾಲನಾ ಸಿಬ್ಬಂದಿಗಳು ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಉತ್ತಮ ನಡವಳಿಕೆ ತೋರಿ ಅವರ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ನಿರ್ವಾಹಕಿ ವಸಂತಮ್ಮ ಅವರು, ಯಾವುದೇ ರೀತಿಯಲ್ಲೂ ಹಿಂಜರಿಯದ ಧೈರ್ಯದಿಂದ ಸಕಾಲದಲ್ಲಿ ಮಹಿಳೆ ಮತ್ತು ಮಗುವನ್ನು ಕಾಪಾಡಲೇಬೇಕು ಎಂಬ ಸದುದ್ದೇಶದಿಂದ ಹತ್ತಿರದಲ್ಲಿ ಆಸ್ಪತ್ರೆ ಇಲ್ಲದ ಕಾರಣ ಅವರಿಗೆ ಬಸ್‌ನಲ್ಲಿಯೇ ಹೆರಿಗೆ ಮಾಡಿಸಿ ಮಗು ಮತ್ತು ತಾಯಿಯ ಪ್ರಾಣವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ತಿಳಿಸಿದರು.

ಈ ರೀತಿಯ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ನುರಿತ ವೈದ್ಯಕೀಯ ಸಿಬ್ಬಂದಿಗಳ ಉಸ್ತುವಾರಿ ಅಗತ್ಯವಿದ್ದಾಗ್ಯೂ ಸಹ, ವಸಂತಮ್ಮ ಅವರು ವಿವರಿಸಿದಂತೆ, ಸಮಯವಾಗಲಿ ಅಥವಾ ಆಸ್ಪತ್ರೆಯ ಸೌಲಭ್ಯವಾಗಲಿ, ಆ ಕ್ಷಣಕ್ಕೆ ಲಭ್ಯವಾಗದ ಕಾರಣ ಅವರ ಕಾಳಜಿ ಮತ್ತು ಕ್ರಮ ಅನುಕರಣೀಯ ಎಂದು ಶ್ಲಾಘಿಸಿದರು.

ಇನ್ನು ಈ ರೀತಿಯ ಎಷ್ಟೋ ಸಂದರ್ಭಗಳಲ್ಲಿ ಜನರು ನಮಗ್ಯಾಕೆ ಇದೆಲ್ಲ. ಜತೆಗೆ ನಮ್ಮ ಮೇಲೆ ಏನಾದರೂ ಅಪವಾದದ ಕ್ರಮ ತೆಗೆದುಕೊಂಡು ಬಿಟ್ಟರೆ ಅಲೆಯುವವರು ಯಾರು ಎಂದು ಎಂದು ಯೋಚಿಸಿ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಅದರಿಂದ ಅದೆಷ್ಟೋ ಆಮೂಲ್ಯ ಜೀವಗಳನ್ನು ಉಳಿಸಲು ಸಾಧ್ಯವಾಗುವುದಿಲ್ಲ ಎಂದ ಸತ್ಯವತಿ ಅವರು, ವಸಂತಮ್ಮ ಅವರು ಆ ರೀತಿಯ ಯಾವುದೇ ಯೋಚನೆ ಮಾಡದೆ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಸಂತಮ್ಮ ಅವರ ಅವರಿಗೆ ಸಾಥ್‌ ನೀಡಿದ ಸಹ ಪ್ರಯಾಣಿಕರು ಅಸ್ಸಾಂ ಮೂಲದ ಗರ್ಭಿಣಿ ತೀರ ಆರ್ಥಿಕ ಸಂಕಷ್ಟದಲ್ಲಿರುವುದನ್ನು ಗಮನಿಸಿ, ಪ್ರಯಾಣಿಕರಿಂದ ಹಣ ಸಂಗ್ರಹಿಸಿ ನೀಡಿರುವುದು ಅವರ ಅಂತಃಕರಣವನ್ನು ಬಿಂಬಿಸುತ್ತದೆ, ಇವರ ಈ ಕಾರ್ಯವು ಅನನ್ಯವೆಂದು ಹೇಳಿದ ಎಂಡಿ ಸತ್ಯವತಿ ಅವರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ (ಸಿಬ್ಬಂದಿ ಮತ್ತು ಜಾಗೃತ), ಚಿಕ್ಕಮಗಳೂರು ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಕಾರ್ಮಿಕ ಕಲ್ಯಾಣಾಧಿಕಾರಿಗಳೂ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
LATEST
ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ ಪೋಸ್ಟ್ ಆಫೀಸ್ ಸೇವೆಗಳು ಈಗ ಗ್ರಾಮ ಒನ್ ಕೇಂದ್ರಗಳಲ್ಲೂ ಲಭ್ಯ 5ವರ್ಷದೊಳಗಿನ ಮಕ್ಕಳಿಗೆ PCV ಲಸಿಕೆ ಹಾಕಿಸಿ: ಸುರಳ್ಕರ್ ವಿಕಾಸ್ ಕಿಶೋರ್ KSRTC: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರು ಘಟಕ 1-2ರ ಗುತ್ತಿಗೆ ಚಾಲಕರಿಂದ ದಿಢೀರ್‌ ಪ್ರತಿಭಟನೆ ಮೆಜೆಸ್ಟಿಕ್‌: KSRTC ಟಿಸಿಗಳಿಗೆ ಕಂಡಕ್ಟರ್‌ಗಳು ₹10 ಕೊಟ್ಟರಷ್ಟೆ ಲಾಗ್‌ಶೀಟ್‌ ಮೇಲೆ ಸಹಿ ಇಲ್ಲದಿದ್ದರೆ ಕ್ಲಾಸ್‌ !!? ಕನಸನ್ನು ನನಸಾಗಿಸಲು ಪ್ರಯತ್ನ ಮುಖ್ಯ: ಮಕ್ಕಳಿಗೆ ಡಿಸಿಎಂ ಶಿವಕುಮಾರ್ ಕಿವಿಮಾತು KSRTC: ಸಮಸ್ಯೆ  ಹೇಳಿಕೊಂಡು ಬರುವ ನೌಕರರ ಭೇಟಿ ಮಾಡದೆ ಸೂಟ್‌ಕೇಸ್‌ ತಂದವರೊಂದಿಗೆ ಹರಟೆ ಹೊಡೆಯುವ ಕೆಲ ಸಾಹೇಬರೆನಿಸಿಕೊ... ಆಟೋಟದಲ್ಲಿ ಕೂಟದ ಕಟ್ಟಾಳುಗಳು ಬ್ಯುಸಿ: ನೌಕರರು ನಂಬಿ 4ವರ್ಷ ಕಳೆದರೂ ಈಡೇರೇಯಿಲ್ಲ ಬೇಡಿಕೆ - ದಿಕ್ಕು ತಪ್ಪುತ್ತಿದೆಯೇ ... BMTC ಬಸ್‌-ಟ್ರಕ್‌-ಇನೋವಾ ಕಾರು ನಡುವೆ ಸರಣಿ ಅಪಘಾತ: ಇಬ್ಬರು ಮೃತ, ಬಸ್‌ ಚಾಲಕನ ಸ್ಥಿತಿ ಗಂಭೀರ KSRTC: ಕೂಟದ ಅಜೆಂಡ ದಿಕ್ಕು ತಪ್ಪುತ್ತಿದೆಯೇ - ಸರಿ ಸಮಾನ ವೇತನದ ಪಾಡೇನು?