NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ನಿಗಮಗಳ ಅಂತರ್‌ ನಿಗಮ ವರ್ಗಾವಣೆ ವಿಳಂಬ: ಸಮಸ್ಯೆಯಲ್ಲಿ ಸಿಲುಕಿರುವ ಹಲವು ನೌಕರರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಅಂತರ್‌ ನಿಗಮ ವರ್ಗಾವಣೆ ಕಳೆದ ಏಪ್ರಿಲ್‌ನಲ್ಲಿ ಆಗಬೇಕಿತ್ತು. ಆದರೆ ಈವರೆಗೂ ಆ ಬಗ್ಗೆ ನಿಗಮಗಳ ಅಧಿಕಾರಿಗಳು ಯಾವುದೇ ಆದೇಶ ಹೊರಡಿಸದಿರುವುದರಿಂದ ವರ್ಗಾವಣೆ ಬಯಸುತ್ತಿರುವ ನೌಕರರು ಸಮಸ್ಯೆಗೆ ಸಿಲುಕುವಂತಾಗಿದೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರು, ಶೇ.2ರಷ್ಟು ಅಂತರ್‌ನಿಗಮ ವರ್ಗಾವಣೆಯನ್ನು ಪ್ರತಿ ವರ್ಷ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಈ ಹಿಂದಿನ ವರ್ಷ ವರ್ಗಾವಣೆ ಮಾಡಲಾಗಿತ್ತು. ಆದರೆ, ವರ್ಗಾವಣೆಗೊಂಡ ಸ್ಥಳಕ್ಕೆ ಹಲವಾರು ತಿಂಗಳುಗಳ ಬಳಿಕ ಡ್ಯೂಟಿಗೆ ಸೇರಿಕೊಳ್ಳುವುದಕ್ಕೆ ಅಧಿಕಾರಿಗಳು ಅನುಮತಿಸಿದ್ದರು.

ಪ್ರಸ್ತುತ ವರ್ಗಾವಣೆಗೆ ಬಯಸುತ್ತಿರುವ ನೌಕರರಿಂದ ಕಳೆದ ಏಪ್ರಿಲ್‌ ಒಳಗಡೆಯೇ ಅರ್ಜಿ ಸಲ್ಲಿಸಲು ಸೂಚನೆ ನೀಡಬೇಕಿತ್ತು. ಆದರೆ, ಅದು ಈವರೆಗೂ ಆಗಿಲ್ಲ ಎಂದು ನೌಕರರು ಹೇಳುತ್ತಿದ್ದಾರೆ.

ಇನ್ನು ಈಗ ಶೇ.2ರಷ್ಟು ಮಾತ್ರ ಅಂತರ್‌ ನಿಗಮ ವರ್ಗಾವಣೆಗೆ ಅವಕಾಶವಿದೆ. ಇದನ್ನು ಶೇ.5ಕ್ಕೆ ಏರಿಸಿದರೆ ಒಳ್ಳೆಯದಾಗುತ್ತದೆ ಎಂದು ಕೆಲ ನೌಕರರು ಹೇಳುತ್ತಿದ್ದು, ಇದರಿಂದ ತುಂಬ ಅನುಕೂಲವಾಗಲಿದೆ. ಹೀಗಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಸಾರಿಗೆ ನೌಕರರು ಹೆಚ್ಚಿನ ಮಂದಿ ಉತ್ತರ ಕರ್ನಾಟಕದವರೆ ಇರುವುದರಿಂದ ಅಂತರ್‌ನಿಗಮ ವರ್ಗಾವಣೆ ಬಯಸುವ ನೌಕರರು ಹೆಚ್ಚಾಗಿ KKRTC, NWKRTC ನಿಗಮಗಳಿಗೆ ವರ್ಗಾವಣೆಬೇಕು ಎಂದು ಕೇಳುತ್ತಿದ್ದಾರೆ. ಆದರೆ, KSRTC ಮತ್ತು BMTCಗೆ ವರ್ಗಾವಣೆ ಬಯಸುವವರ ಸಂಖ್ಯೆ ತುಂಬ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಒಟ್ಟಾರೆ, ಕೊರೊನಾ ಬಂದಾಗಿನಿಂದ ಮತ್ತು ಬಿಜೆಪಿ ಸರ್ಕಾರದಲ್ಲಿ ನೌಕರರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದರಿಂದ ಮನನೊಂದ ಹತ್ತಾರು ನೌಕರರು ಆತ್ಮಹತ್ಯೆ ಮಾಡಿಕೊಂಡರು, ಇನ್ನು ಕೆಲವರನ್ನು ಮುಷ್ಕರ ಮತ್ತಿತರ ಕಾರಣಗಳಿಂದ ವಜಾ ಮಾಡಲಾಗಿದೆ. ಅವರಲ್ಲಿ ಕೆಲವರು ಮರು ನೇಮಕಗೊಂಡು ಕರ್ತತ್ಯ ನಿರ್ವಹಿಸುತ್ತಿದ್ದರೆ. ಇನ್ನು ಕೆಲವರು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

ಇದಿಷ್ಟೇ ಅಲ್ಲದೆ ಕೆಲ ನೌಕರರು ನಿವೃತ್ತಿಗೊಂಡಿದ್ದು ಆ ಸ್ಥಳಗಳಿಗೆ ಈವರೆಗೂ ಯಾವುದೇ ನೇಮಕಾತಿ ನಡೆಯದೆ ಇರುವುದರಿಂದ ವರ್ಗಾವಣೆ ಬಯಸುತ್ತಿರುವ ನೌಕರರಿಗೆ ಸಮಸ್ಯೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವರು ಗಮನಹರಿಸಿ ಶೀಘ್ರದಲ್ಲೇ ನಮಗೆ ವರ್ಗಾವಣೆ ಅವಕಾಶ ಕಲ್ಪಿಸಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ