NEWSನಮ್ಮಜಿಲ್ಲೆನಮ್ಮರಾಜ್ಯ

ಗ್ಯಾರಂಟಿ ಘೋಷಣೆ ಓಕೆ ಆದರೆ  ಸ್ಪಷ್ಟತೆ ನೀಡದೆ ಅಡ್ಡಗೋಡೆ ಮೇಲೆ ದೀಪ ಏಕೆ : ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ 

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್‌ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಹೇಳಿದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಇಂದು ಘೋಷಣೆ ಮಾಡಿದ್ದು, ಈ ಸಂಬಂಧ ಸರಿಯಾದ ಸ್ಪಷ್ಟತೆ ನೀಡಿಲ್ಲ ಅಡ್ಡಗೋಡೆ ಮೇಲೆ ದೀಪವಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‍ನ ಗ್ಯಾರಂಟಿಗಳಲ್ಲಿ ಸ್ಪಷ್ಟತೆ ಇಲ್ಲ. ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತೆ. ಇವರು ಕೊಡೋದು ಈಗ 5 ಕೆಜಿ ಅನ್ನ ಭಾಗ್ಯದಲ್ಲಿ 10 ಕೆಜಿ ಅಂತಾ ಹೇಳ್ತಿಲ್ಲ. 10 ಕೆಜಿ ಆಹಾರ ಧಾನ್ಯ ಅಂತಾ ಸಿಎಂ ಹೇಳ್ತಾರೆ. ಈ 10 ಕೆಜಿಯಲ್ಲಿ ರಾಗಿ, ಜೋಳ ಮತ್ತು ಗೋಧಿ ಕೊಡ್ತೀರಾ..?. ಇದರ ಬಗ್ಗೆ ಸ್ಪಷ್ಟತೆ ಕೊಡ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇನ್ನು 2,000 ರೂ. ಮನೆ ಯಜಮಾನಿಗೆ ಕೊಡೋದರಲ್ಲಿಯೂ ಮಹಾಮೋಸ ಅಡಗಿದೆ. ಆನ್ ಲೈನ್ ಅರ್ಜಿಯಲ್ಲಿ ಅರ್ಧ ತೆಗೆದು ಹಾಕ್ತಾರೆ. ನಾವು ನಿಜವಾಗಲೂ ಬಡವರಿಗೆ ಅನುಕೂಲ ಮಾಡುತ್ತೇವೆ ಅಂದರೆ ಎಂಪವರ್ ಮೆಂಟ್ ಇರಬೇಕು. ಆನ್ ಲೈನ್ ಅರ್ಜಿ ಕರೆದು ಅರ್ಧ ತೆಗೆದು ಮೋಸ ಮಾಡ್ತಾರೆ.

ಅದನ್ನು ಬಿಟ್ಟು ಪಿಡಿಒಗಳು ಇದ್ದಾರೆ ಅವರ ಮುಖಾಂತರ ಬಹಳ ಸರಳವಾಗಿ ಮಾಡಬಹುದಿತ್ತು. ಈವಾಗ ಆಗಸ್ಟ್‌ನಿಂದ ಕೊಡುತ್ತೇವೆ ಅಂತಾರೆ. ಜೂನ್, ಜುಲೈದು ಸೇರಿಸಿಕೊಡ್ತಾರಾ ಸ್ಪಷ್ಟತೆ ಇಲ್ಲ. ಜೂನ್, ಜುಲೈದು ಸೇರಿಸಿ ಕೊಟ್ಟರೆ ಪ್ರಾಮಾಣಿಕತೆ ಅಂತಾ ಹೇಳಬಹುದಿತ್ತು. ಈ ತಿಂಗಳಿಂದಲೇ ಕೊಡಬಹುದಿತ್ತು. ಆದರೆ ಎರಡು ತಿಂಗಳು ಯಾಮಾರಿಸ್ತಾ ಇದ್ದಾರೆ ಎಂದು ಹೇಳಿದರು.

ಇನ್ನು ಉಚಿತವಾಗಿ ಬಸ್ ಪ್ರಯಾಣ ಮಾಡುವ ಬಗ್ಗೆ ಹೇಳಿದ್ದಾರೆ. ರಾಜ್ಯದ ಒಳಗಡೆನೇ ಅಂದಿದ್ದಾರೆ. ಎರಡನೆಯದು ಯಾವ್ಯಾವ ಬಸ್ ಅಂತಾ ಹೇಳದೇ ಕೆಂಪು ಬಸ್ ಅಂತಾ ಹೇಳಿದ್ದಾರೆ ಬರೀ ಯಾಮಾರಿಸಿದ್ದಾರೆ. ಇದರಲ್ಲೂ ಗೊಂದಲ ಸೃಷ್ಟಿಸಿದ್ದಾರೆ. ಯುವ ನಿಧಿ ಯೋಜನೆಯಲ್ಲಿ 2022 ಮತ್ತು 2023 ಕಳೆದ ವರ್ಷ ಪಾಸ್ ಆದವರಿಗೆ, ನಿರುದ್ಯೋಗಿಗಳಿಗೆ ಡಿಗ್ರಿ ಪಡೆದವರಿಗೆ ಕೊಡುತ್ತೇವೆ ಅಂದಿದ್ದಾರೆ. ನಾನು ಹೇಳೋದು ಡಿಗ್ರಿ ಆದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗ್ತಾರೆ. ಮೂರು ವರ್ಷದಿಂದ ನಿರುದ್ಯೋಗದಲ್ಲಿ ಇರೋರಿಗೆ ಕೊಡ ಬೇಕಿತ್ತು. ಸಮರ್ಪಕವಾಗಿ ಪುನರ್ ಚಿಂತನೆ ಮಾಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು.

ಇದಕ್ಕೆಲ್ಲ ಹಣವನ್ನು ಎಲ್ಲಿಂದ ತರುತ್ತೀರಾ, ಆದಾಯ ಹೇಗೆ, ಯಾವುದಾದರೂ ಯೋಜನೆ ನಿಲ್ಲಿಸುತ್ತೀರಾ..?, ತೆರಿಗೆ ಹೆಚ್ಚಿಸುತ್ತೀರಾ, ನೀರಾವರಿ ನಿಲ್ಲಿಸ್ತೀರಾ?. ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳನ್ನು ನಿಲ್ಲಿಸ್ತೀರಾ..?, ಯಾವ ಯೋಜನೆ ಸ್ಟಾಪ್ ಮಾಡಿ ವೆಚ್ಚ ಭರಿಸ್ತೀರಾ..?, ವೆಚ್ಚ ಹೇಗೆ ಅಂತಾನೇ ಹೇಳಿಲ್ಲ.

ಇನ್ನು ಕೇಂದ್ರದ ಯೋಜನೆಗಳನ್ನ ನಿಲ್ಲಿಸ್ತೀರಾ ಜನತೆಗೆ ಕೇಳೋ ಅಧಿಕಾರ ಇದೆ. ಜನರ ಧ್ವನಿಯಾಗಿ ನಾವು ಕೇಳ್ತಾ ಇದ್ದೇವೆ. ನನ್ನ ತೆರಿಗೆ ಹಣ ಎಲ್ಲಿ ಹೋಗ್ತಾ ಇದೆ. ನನ್ನ ದುಡ್ಡಿನಿಂದ ರಾಜ್ಯಕ್ಕೆ ಒಳ್ಳೆದಾಗುತ್ತಾ ಇದೆಯಾ..? ಎಲ್ಲ ಪ್ರಶ್ನೆ ಮಾಡಬೇಕಾಗುತ್ತೆ ಎಂದು ಹೇಳಿದರು.

50 ಸಾವಿರ ಕೋಟಿ ರೂಗಳಿಗಿಂತ ಹೆಚ್ಚು ಬೇಕು ಅಂತಾ ಮೊದಲೇ ಹೇಳಿದ್ದಾರೆ. ವೆಚ್ಚ ಹೇಗೆ, ಆದಾಯ ಹೇಗೆ ಅಂತಾ ಹೇಳಬೇಕು ಅದನ್ನ ಹೇಳಿಲ್ಲ. ಕರ್ನಾಟಕಕ್ಕೆ ಆರ್ಥಿಕ ಹಿನ್ನಡೆ ಆಗುತ್ತೆ. ಸರಿಯಾಗಿ ಆದಾಯ ತರದೇ ಇದ್ದರೆ ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಲಿದೆ. ಯಾವ ರೀತಿ ನಿಭಾಯಿಸ್ತಾರೆ ಎಂಬುದು ನೋಡಬೇಕಾಗಿದೆ. ಕೋವಿಡ್ ನಂತಹ ದೊಡ್ಡ ಕಾಲವನ್ನು ಎದುರಿಸಿಕೊಂಡು ಆರ್ಥಿಕ ಪ್ರಗತಿಯನ್ನ ನಿಭಾಯಿಸಿಕೊಂಡು ಬಂದಿದ್ದೇವೆ. ನಾವು 2 ವರ್ಷ ಲೋನ್ ತೆಗೆದುಕೊಳ್ಳದೇ ಆರ್ಥಿಕ ಪ್ರಗತಿ ಸಾಧಿಸಿದ್ದೇವೆ ಎಂದರು.

ಆರ್ಥಿಕ ಸ್ಥಿತಿ ಹದಗೆಡಿಸಿಕೊಂಡು ಉಚಿತ ಕೊಡೋದು ಸರಿಯಲ್ಲ. ಆರ್ಥಿಕ ಪರಿಸ್ಥಿತಿ ಹದಗೆಡಿಸಿಕೊಂಡು ಉಚಿತ ಕೊಡೋದಕ್ಕೆ ನನ್ನ ತಕರಾರು ಇದೆ. ಯಾವ್ಯಾವ ಯೋಜನೆಗಳನ್ನ ಸ್ಟಾಪ್ ಮಾಡುತ್ತಾರೆ. ಕಿಸಾನ್ ಸಮ್ಮಾನ್, ನೀರಾವರಿ ಯೋಜನೆ ಸ್ಟಾಪ್ ಮಾಡುತ್ತೇವೆ ಅಂತಿದ್ದಾರೆ.

ಟೈಂ ಪಾಸ್ ಮಾಡಿ ಟೈಂ ಅಂಡ್ ಮನಿ ಮ್ಯಾನೇಜ್ಮೆಂಟ್ ಮಾಡ್ತಾ ಇದ್ದಾರೆ, ಇದು ಸ್ಥಿರತೆ ಇರಲ್ಲ. ಲೋಕಸಭಾ ಚುನಾವಣೆ ಅಷ್ಟೋತ್ತಿಗೆ ಏನಾಗುತ್ತೋ ಏನೋ ಗೊತ್ತಿಲ್ಲ. ಲೋಕಸಭಾ ಚುನಾವಣೆ ವರೆಗೂ ಯೋಜನೆ ಇರುತ್ತಾ ಆಮೇಲೆ ಸ್ಟಾಪ್ ಆಗುತ್ತಾ ಇಲ್ವ ಅಂತಾ ನೋಡೋಣ. ಅವರಿಗೆ ಇರುತ್ತೆ ಇವರಿಗೆ ಇರಲ್ಲ ಅಂತಾ ಹೇಳ್ತಾ ಇದ್ದಾರೆ. ಎಲ್ಲಿಯವರೆಗೂ ತೆಗೆದುಕೊಂಡು ಹೋಗ್ತಾರೆ ಅಂತಾ ನೋಡೋಣ ಎಂದು ಬೊಮ್ಮಾಯಿ ತಿಳಿಸಿದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ