ಮೈಸೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಪ್ರಯಾಣಕ್ಕೆ ಬಸ್ಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕಾದ ನಾರಿಯರು ಮಾತ್ರ ಬಡದಾಡಿಕೊಳ್ಳುತ್ತಿರುವುದು ಸಭ್ಯ ಮಹಿಳೆಯರಿಗೆ ಇರಿಸುಮುರಿಸು ಉಂಟುಮಾಡುತ್ತಿದೆ.
ಹೌದು! ಇಂದು ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತಿವೆ ತಳ್ಳಾಟ, ನೂಕಾಟ ಸೇರದಂತೆ ಜಡೆ ಜಗಳ ಸಹ ನಡೆಯುತ್ತಿದೆ. ಕೆಲವು ಭಾಗಗಳಲ್ಲಿ ತಳ್ಳಾಟ, ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ. ಅಷ್ಟೇ ಅಲ್ಲದೇ ಇದೀಗ ಫ್ರೀ ಬಸ್ನಲ್ಲಿ ಸೀಟ್ಗಾಗಿ ಮಾರಾಮಾರಿ ಕೂಡ ನಡೆದೇ ಬಿಟ್ಟಿದೆ.
ಕಳಿತುಕೊಳ್ಳುವ ವಿಚಾರವಾಗಿ ಮಹಿಳೆಯರಿಬ್ಬರ ನಡುವೆ ಹೊಡೆದಾಟವಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯೂ ಮೈಸೂರು ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದ್ದು ಜಗಳ ಬಿಡಿಸಲು ಪುರುಷರು ಕೂಡ ಹರಸಾಹಸ ಪಟ್ಟಿದ್ದಾರೆ.
ಆಷಾಡ ಮಂಗಳವಾರ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ತೆರಳಲೆಂದು ಮಹಿಳೆಯೊಬ್ಬರು ಕಿಟಕಿ ಮೂಲಕ ಸೀಟಿಗೆ ಕರವಸ್ತ್ರ ಹಾಕಿ ಕಾಯ್ದಿಸಿದ್ದಾರೆ. ಅದನ್ನು ಗಮನಿಸಿದ ಮತ್ತೋರ್ವ ಮಹಿಳೆ ಸೀಟಿನ ಮೇಲೆ ಹಾಕಲಾಗಿದ್ದ ಕರ್ಚೀಫ್ ಅನ್ನು ತೆಗೆದು ಬಿಸಾಡಿದ್ದಾರೆ.
ಬೀಸಡಿದ್ದು ನೋಡಿದ ಮಹಿಳೆ ಈ ವಿಚಾರವಾಗಿ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವಿನ ಜಡೆ ಹಿಡಿದು ಎಳೆದಾಡುವ ಮಟ್ಟಕ್ಕೆ ಹೋಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ನೀರೆಯರು ಹೊಡೆದಾಡಿಕೊಳ್ಳುವ ಮಟ್ಟವನ್ನು ತಲುಪಿದ್ದಾರೆ. ಘಟನೆಯನ್ನು ತಡಯುವುಕ್ಕ ಹಲವರು ಪ್ರಯತ್ನಪಟ್ಟಿದ್ದಾರ. ಆ ವಿಡಿಯೋ ಸದ್ಯ ವೈರಲ್ ಆಗಿದ್ದು, ನಿಜವಾದ ನಾರಿ ಶಕ್ತಿ ಅನಾವರಣ ಆಯಿತು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ..#KannadaNews #BreakingNews #KannadaLiveTv #LatestNews #KarnatakaNews #viralvideo#fighting @CMofKarnataka pic.twitter.com/AhrzHvzSyx
— ಸತೀಶ್ ಕಂದಗಲ್ ಪುರ (@sathisho2555) June 20, 2023