ರಾಮನಗರ: ಮಾ.25ರಿಂದ ಮುಂದಿನ ಆದೇಶದ ವರೆಗೆ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ತಾಲೂಕುಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷೆ ಎಂ.ಎಸ್. ಅರ್ಚನಾ ಆದೇಶ ಹೊರಡಿಸಿದ್ದಾರೆ.
ರಾಮಗನರ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಗೆ ಪ್ರತಿದಿನ 2000 ರಿಂದ 3000 ಜನರು ಗೂಡಿನ ಮಾರಾಟಕ್ಕಾಗಿ ಮತ್ತು ಗೂಡು ಖರೀದಿಗಾಗಿ ಜನರು ಆಗಮಿಸುತ್ತಿದ್ದಾರೆ. ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಮಾರುಕಟ್ಟೆ ಒಳ ಹಾಗೂ ಹೊರ ಆವರಣವನ್ನು ಬ್ಲೀಚಿಂಗ್ ಪೌಡರ್ ದೋಳಿಕರಿಸಿ, ಸ್ವಚ್ಛತೆಯನ್ನು ಕಾಪಾಡಲಾಗುತ್ತಿದೆ ಎಂದರು.
ಪ್ರತಿ ಎರಡು ದಿನಗಳಿಗೊಮ್ಮೆ ಪ್ರತಿ ಘಟಕವನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಕದಿಂದ ಸೋಂಕು ನಿವಾರಣೆ ಮಾಡಲಾಗುತ್ತಿದೆ. ಈ ಮಾರುಕಟ್ಟೆಗೆ ರೇಷ್ಮೆಗೂಡಿನ ವಹಿವಾಟಿಗಾಗಿ ಬರುವರೈತರು ಹಾಗೂ ರೀಲರ್‌ಗಳಿಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಸಹ ನಿರ್ಲಕ್ಷ್ಯ ವನ್ನು ತೋರುತ್ತಿರುವುದು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕು ಪೀಡಿತ ಜಿಲ್ಲೆಗಳಿಂದ ರೈತರು ಗೂಡು ತರುತ್ತಿರುತ್ತಾರೆ. ಇಂತವರು ಮಾರುಕಟ್ಟೆ ಗೂಡಿನ ವಹಿವಾಟಿಗಾಗಿ ಆಗಮಿಸುತ್ತಿರುವುದರಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮಾರುಕಟ್ಟೆಯ ಗೂಡಿನ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಳಿತಗೊಳಿಸಲಾಗಿದೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.