ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರ ಸಿಬ್ಬಂದಿಗಳು ಕೌನ್ಸೆಲಿಂಗ್‌ನಲ್ಲಿ ಅವರ ಸ್ವ-ಇಚ್ಛೆಯ ಮೇರೆಗೆ ವಿಲೀನಗೊಳ್ಳಲು ಆಯ್ಕೆ ಮಾಡಿಕೊಂಡಿರುವ ನಿಗಮಗಳಿಗೆ ಶಾಶ್ವತವಾಗಿ ವರ್ಗಾವಣೆ ಮಾಡಿ ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಯುತ ಸಮಿತಿ ಅಧ್ಯಕ್ಷರಾದ ವಿ.ಅನ್ಬುಕುಮಾರ್ ಆದೇಶ ಹೊರಡಿಸಿದ್ದಾರೆ.
ಅಧಿಕಾರಿ, ನೌಕರ ಸಿಬ್ಬಂದಿಗಳು ಕೌನ್ಸೆಲಿಂಗ್‌ನಲ್ಲಿ ಅವರ ಸ್ವ-ಇಚ್ಛೆಯ ಮೇರೆಗೆ ವಿಲೀನಗೊಳ್ಳಲು ಆಯ್ಕೆ ಮಾಡಿಕೊಂಡಿರುವ ಮೊದಲನೆ ಆದ್ಯತೆಯ ನಿಗಮವನ್ನು ಮಾತ್ರ ಪರಿಗಣಿಸಿ ಅವರನ್ನು ಶಾಶ್ವತ ಹಂಚಿಕೆ ಹಾಗೂ ವಿಲೀನ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ ಬಿಎಂಟಿಸಿಯ 17 ಅಧಿಕಾರಿಗಳು, ಎನ್‌ಡಬ್ಲ್ಯುಕೆಆರ್‌ಟಿಸಿಯ 16 ಅಧಿಕಾರಿಗಳು ಹಾಗೂ ಕೆಕೆಆರ್‌ಟಿಸಿಯ 9 ಅಧಿಕಾರಿಗಳನ್ನು ಶಾಶ್ವತವಾಗಿ ಅವರು ಬಯಸಿದ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ. ಅದರಂತೆ ಬಿಎಂಟಿಸಿಯ 49 ಮೇಲ್ವಿಚಾರಕ ಸಿಬ್ಬಂದಿ, ಎನ್‌ಡಬ್ಲ್ಯುಕೆಆರ್‌ಟಿಸಿಯ 23 ಮೇಲ್ವಿಚಾರಕ ಸಿಬ್ಬಂದಿ ಹಾಗೂ ಕೆಕೆಆರ್‌ಟಿಸಿಯ 14 ಮೇಲ್ವಿಚಾರಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.
ಇವರನ್ನು ಹೊರತುಪಡಿಸಿ ಈ ಆದೇಶದಲ್ಲಿ ಬಿಎಂಟಿಸಿಯ ಇಬ್ಬರು ಅಧಿಕಾರಿಗಳು ಹಾಗೂ 4ಮಂದಿ ಮೇಲ್ವಿಚಾರಕ ಸಿಬ್ಬಂದಿಯನ್ನು ಎನ್‌ಡಬ್ಲ್ಯುಕೆಆರ್‌ಟಿಸಿಯ 5ಮಂದಿ ಅಧಿಕಾರಿಗಳನ್ನು ಹಾಗೂ ಕೆಕೆಆರ್‌ಟಿಸಿಯ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಮೇಲ್ವಿಚಾರಕ ಸಿಬ್ಬಂದಿಯ ವರ್ಗಾಗಣೆಯನ್ನು ಕೈ ಬಿಡಲಾಗಿದೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ.
ಒಟ್ಟಾರೆ ಬಿಎಂಟಿಯಿಂದ 72 ಮಂದಿ ಅಧಿಕಾರಿಗಳು/ ನೌಕರರು ಶಾಶ್ವತ ವರ್ಗಾವಣೆ ಬಯಸಿ ಅರ್ಜಿಸಿದ್ದು, ಅವರಲ್ಲಿ 17 ಮಂದಿ ಅಧಿಕಾರಿಗಳನ್ನು (Officers) ಹಾಗೂ 49 ಮೇಲ್ವಿಚಾರಕ ಸಿಬ್ಬಂದಿ (Supervisory staff)ಗಳನ್ನು ಮಾತ್ರ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ. ಉಳಿದ 6 ಮಂದಿಯ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.
ಅದರಂತೆ ಎನ್‌ಡಬ್ಲ್ಯುಕೆಆರ್‌ಟಿಸಿಯಿಂದ ಒಟ್ಟು 44 ಅಧಿಕಾರಿಗಳು/ ಮೇಲ್ವಿಚಾರಕ ಸಿಬ್ಬಂದಿ ಶಾಶ್ವತ ವರ್ಗಾವಣೆ ಬಯಸಿ ಅರ್ಜಿಸಿದ್ದು, ಅವರಲ್ಲಿ 16 ಮಂದಿ ಅಧಿಕಾರಿಗಳನ್ನು (Officers) ಹಾಗೂ 23 ಮೇಲ್ವಿಚಾರಕ ಸಿಬ್ಬಂದಿ (Supervisory staff)ಗಳನ್ನು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದೆ. ಉಳಿದ 5 ಮಂದಿ ಅಧಿಕಾರಿಗಳ ವರ್ಗಾವಣೆಯನ್ನು ತಡೆ ಹಿಡಿಯಲಾಗಿದೆ.
ಇನ್ನು ಕೆಕೆಆರ್‌ಟಿಸಿಯಿಂದ ಒಟ್ಟು 27 ಅಧಿಕಾರಿಗಳು/ ಮೇಲ್ವಿಚಾರಕ ಸಿಬ್ಬಂದಿ ಶಾಶ್ವತ ವರ್ಗಾವಣೆ ಬಯಸಿ ಅರ್ಜಿಸಿದ್ದು, ಅವರಲ್ಲಿ 9 ಮಂದಿ ಅಧಿಕಾರಿಗಳನ್ನು (Officers) ಹಾಗೂ 14 ಮೇಲ್ವಿಚಾರಕ ಸಿಬ್ಬಂದಿ (Supervisory staff)ಗಳನ್ನು ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ ವರ್ಗಾವಣೆ ಮಾಡಲಾಗಿದ್ದು, 27ರ 4 ಮಂದಿಯ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.
ಇನ್ನುಳಿದಂತೆ ಶಾಶ್ವತ ವರ್ಗಾವಣೆ ಮಾಡಲಾಗಿರುವ ಅಧಿಕಾರಿ/ಮೇಲ್ವಿಚಾರಕರ ಪಟ್ಟಿಯನ್ನು ಈಗಾಗಲೇ ಸಂಬಂಧಪಟ್ಟ ನಿಗಮಗಳ ಅಧಿಕಾರಿಗಳಿಗೆ ಕಳುಹಿಸಲಾಗಿದ್ದು, ಅದರ ಜತೆಗೆ ಈ ಪಟ್ಟಿಯಲ್ಲಿ, ಬಿಡುಗಡೆಗೊಳಿಸದಿರಲು ತಿಳಿಸಿರುವ ಅಧಿಕಾರಿ/ಮೇಲ್ವಿಚಾರಕ ಸಿಬ್ಬಂದಿಗಳು ಇದ್ದು ಅವರು ಆದ್ಯತೆ ಬದಲಾವಣೆ ಮಾಡುವಂತೆ ಕೋರಿದ್ದು, ಅವರನ್ನು ಖುದ್ದಾಗಿ ಕೌನ್ಸೆಲಿಂಗ್ ಮಾಡಲು ಅಧಿಕಾರಯುತ ಸಮಿತಿ ತೀರ್ಮಾನಿಸಿದೆ.
ಆದುದರಿಂದ Officers not to Relieve /Supervisory staff not to Relieve ಎಂದು ತಿಳಿಸಿರುವ ಅಧಿಕಾರಿ/ ಮೇಲ್ವಿಚಾರಕ ” ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಬಾರದು. ಅವರನ್ನು ಹೊರತುಪಡಿಸಿ ತಮ್ಮ ನಿಗಮದಿಂದ ಮೂರು ನಿಗಮಗಳಿಗೆ ಶಾಶ್ವತವಾಗಿ ಹಂಚಿಕ ಹಾಗೂ ವಿಲೀನಗೊಂಡ ಅಧಿಕಾರಿ/ ಮೇಲ್ವಿಚಾರಕ ಸಿಬ್ಬಂದಿಗಳನ್ನು 31.07.2023 ರೊಳಗೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಯುತ ಸಮಿತಿ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಶಾಶ್ವತವಾಗಿ ವರ್ಗಾವಣೆಗೊಂಡ ಅಧಿಕಾರಿಗಳು ಮತ್ತು ಮೇಲ್ವಿಚಾರಕರ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: Autonomous Relieving letter 26-07-2023-1