NEWSನಮ್ಮಜಿಲ್ಲೆಬೆಂಗಳೂರು

ಬ್ರ್ಯಾಂಡ್ ಬೆಂಗಳೂರಿನ ಬ್ರ್ಯಾಂಡೆಡ್ ಭ್ರಷ್ಟಾಚಾರ :  ಎಎಪಿ ಆರೋಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ನಗರ ಆರೋಗ್ಯ, ಸ್ವಚ್ಛತೆಯನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ವೇತನದಲ್ಲಿನ 500 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಇಎಸ್‌ಐ ಮತ್ತು ಪಿಎಫ್ ಹಣವನ್ನು ಕಳೆದ 5 ವರ್ಷಗಳಿಂದ ಭರಿಸದೆ ಬಾಕಿ ಉಳಿಸಿಕೊಂಡಿದ್ದು ಇವರ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಬಿಬಿಎಂಪಿ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿರು.

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಇಂದು ಮಾತನಾಡಿದ ಅವರು, ಪೌರಕಾರ್ಮಿಕರ ಬದುಕಿನಲ್ಲಿ ಸಂಚಕಾರವನ್ನು ತರುತ್ತಿದ್ದಾರೆ, ಇದೊಂದು ಆತಂಕಕಾರಿ ಬೆಳವಣಿಗೆ. ಬ್ರ್ಯಾಂಡ್ ಬೆಂಗಳೂರನ್ನು ಮಾಡಲು ಹೊರಟಿರುವ ಉಪಮುಖ್ಯಮಂತ್ರಿಗಳು, ಮೊದಲು ಪೌರಕಾರ್ಮಿಕರ ಮೂಲ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ದಾಖಲೆಗಳ ಸಮೇತ ಬಹಿರಂಗ ಪಡಿಸಿದರು.

ಬಿಬಿಎಂಪಿಯಲ್ಲಿ ಕಸ ನಿರ್ವಹಣೆಗೆ ಮಾತ್ರ ಪೌರಕಾರ್ಮಿಕರ ಸಂಖ್ಯೆ ಒಟ್ಟು 32,000. ಆಶ್ಚರ್ಯಕರ ಸಂಗತಿ ಎಂದರೆ 700 ಪೌರಕಾರ್ಮಿಕರು ಮಾತ್ರ ಕಾಯಂ ಹೊಂದಿದ್ದಾರೆ. 16,000 ಪೌರ ಕಾರ್ಮಿಕರಿಗೆ ಪಾಲಿಕೆಯು ನೇರ ವೇತನವನ್ನು ಮಾತ್ರ ನೀಡುತ್ತಿದೆ. 16,000 ಕಾರ್ಮಿಕರು ಗುತ್ತಿಗೆ ಏಜೆನ್ಸಿಗಳ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಪೌರಕಾರ್ಮಿಕರಿಗೆ ಸದಾ ಮೂರು ತಿಂಗಳ ಸಂಬಳ ಸದಾ ಬಾಕಿ ಉಳಿದಿರುತ್ತದೆ. ಬಿಬಿಎಂಪಿಯು ತನ್ನ ಕಾರ್ಮಿಕರ ಭವಿಷ್ಯದ ಹಾಗೂ ಆರೋಗ್ಯದಂತಹ ಅತಿ ಮುಖ್ಯ ವಿಚಾರದಲ್ಲಿ ಗುತ್ತಿಗೆದಾರರುಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಈ ಈ ರೀತಿಯ ನೂರಾರು ಕೋಟಿ ರೂ.ಗಳ ಅವ್ಯವಹಾರಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಪಶ್ಚಿಮ ವಲಯದ ಗುತ್ತಿಗೆದಾರರ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಭುವನೇಶ್ವರಿ ಎಂಟರ್ಪ್ರೈಸಸ್, ಹಠಾರಿ ಸೆಕ್ಯೂರಿಟಿ ಸರ್ವಿಸಸ್, ನೋವೇಲಿ, ಸೆಕ್ಯೂರಿಟಿ ಸರ್ವಿಸಸ್, ಡೈರೆಕ್ಟ್ ವೆಲ್ ಸೆಕ್ಯೂರಿಟಿ ಸರ್ವಿಸಸ್, ಡಿಟೆಕ್ಟ್ ವೆಲ್ ಸೆಕ್ಯೂರಿಟಿ ಸರ್ವಿಸಸ್, ಕುಮಾರ್ ಸಿ. ಸೇರಿದಂತೆ ಇನ್ನುಳಿದ ವಲಯಗಳ ಗುತ್ತಿಗೆದಾರರು ಇಎಸ್ಐ, ಪಿಎಫ್ ಹಣ ಕಟ್ಟಿರುವ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಸಲ್ಲಿಸೇ ಇಲ್ಲ. ಬಿಬಿಎಂಪಿಯು ಸಹ ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರು.

ಇನ್ನು ಲಭ್ಯ ಮಾಹಿತಿಯ ಪ್ರಕಾರ ಆರ್.ಆರ್.ನಗರ ವಲಯದಲ್ಲಿ ಮಾತ್ರವೇ 2018/ 19 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಪ್ರಕಾರ 14 ವಾರ್ಡ್‌ಗಳ ಪೈಕಿ ಕೇವಲ 9 ವಾರ್ಡ್ ಗಳಲ್ಲಿ ಆಯ್ದ ಕೆಲವೇ ತಿಂಗಳುಗಳು ಮಾತ್ರ ಇಎಸ್ಐ /ಪಿಎಫ್ ಅನ್ನು ಪಾವತಿ ಮಾಡಿದ್ದಾರೆ. 7 ಕೋಟಿಯ 14 ಲಕ್ಷದ 31,668 ರೂ.ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.

ಈ ವಲಯ ಒಂದರಲ್ಲೇ 18,636 ಪೌರಕಾರ್ಮಿಕರು ಇದ್ದಾರೆಂದು ಲೆಕ್ಕ ನೀಡಿರುವುದು ತೀರ ಅವಾಸ್ತವ ಸಂಗತಿ. ಈ ಸಂಖ್ಯೆಯಲ್ಲಿಯೇ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬೃಹತ್ ಹಗರಣದ ಹಿಂದೆ ಬಲಾಢ್ಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ನೇರ ಕೈವಾಡವಿದೆ. ತನಿಖೆಯ ಮೂಲಕವೇ ಇದು ಹೊರಬೀಳಲು ಸಾಧ್ಯ ಎಂದು ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಅಲ್ಲಿನ ಕಾರ್ಮಿಕರಿಗೆ ಪಾಲಿಕೆಯಿಂದ ನೇರ ವೇತನ ಪಾವತಿ ಇದುವರೆಗೂ ಆಗಿಲ್ಲ. ಗುತ್ತಿಗೆದಾರರು ಕಟ್ಟಡ ಕಾರ್ಮಿಕರ ಸೆಸ್ ಅನ್ನು ಸಹ ಕಟ್ಟಿಲ್ಲ. ಇದರಿಂದಲೇ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವಿನ ಅಕ್ರಮ ಒಳ ಒಪ್ಪಂದದ ಸುಳಿವು ಸಿಗುತ್ತದೆ. ಈ ವಿಭಾಗದ ಕಾರ್ಮಿಕರು ಬಹುದಿನಗಳಿಂದ ಈ ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ.

ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಸಹ ಯಾವೊಂದು ನೋಟಿಸ್ ಅನ್ನು ಸಹ ಇದುವರೆಗೂ ಬಿಬಿಎಂಪಿ ಹಾಗೂ ಅಲ್ಲಿನ ಗುತ್ತಿಗೆದಾರರಿಗೆ ನೀಡದಿರುವುದು ಗಮನಿಸಿದರೆ ಕಾರ್ಮಿಕ ಇಲಾಖೆಯು ಕಾರ್ಮಿಕ ರಕ್ಷಣೆಗಾಗಿ ಇದೆಯೋ ಅಥವಾ ಗುತ್ತಿಗೆದಾರರ ರಕ್ಷಣೆಗೆ ಇದೆಯೋ ಎಂಬ ಅನುಮಾನ ಮೂಡುತ್ತದೆ ಎಂದು ತಿಳಿಸಿದರು.

ಪೌರ ಕಾರ್ಮಿಕರ ರಕ್ತವನ್ನು ಮಾರಿಕೊಂಡು ಬಿಬಿಎಂಪಿ ಹಾಗೂ ಅಲ್ಲಿನ ಗುತ್ತಿಗೆದಾರರು ಬಿಎಂ ಡಬ್ಲ್ಯೂ, ಆಡಿ, ಮರ್ಸಿಡಿಸ್ ಕಾರುಗಳಲ್ಲಿ ಓಡಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿರುವುದು ದುರ್ದೈವದ ಸಂಗತಿ ಎಂದು ನಾಗಣ್ಣ ತಿಳಿಸಿದರು.

ರಾಜ್ಯ ಉಪಾಧ್ಯಕ್ಷ ಹಾಗೂ ಬೆಂಗಳೂರು ನಗರ ಉಸ್ತುವಾರಿ ಮೋಹನ್ ದಾಸರಿ ಮಾತನಾಡಿ, ಈ ಎಲ್ಲ ಗುತ್ತಿಗೆದಾರರ ಬಿಲ್ ಪಾವತಿಯನ್ನು ತಡೆಹಿಡಿಯಬೇಕು. ಕೂಡಲೇ ಪೌರಕಾರ್ಮಿಕರುಗಳ ಭವಿಷ್ಯ ಹಾಗೂ ಆರೋಗ್ಯ ನಿಧಿಯನ್ನು ಧರಿಸಬೇಕು ಹಾಗೂ ಆರೋಪಿಗಳ ವಿರುದ್ಧ ಇಎಸ್ಐ ಕಾಯ್ದೆಯ ಸೆಕ್ಷನ್ 85 (A) ಪ್ರಕಾರ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಸರ್ಕಾರ ಶೀಘ್ರವಾಗಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪೌರಕಾರ್ಮಿಕರ ಸಂಘಟನೆಗಳ ಜೊತೆಗೂಡಿ ಬೃಹತ್ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಡಾಕ್ಟರ್ ಸತೀಶ್ ಕುಮಾರ್, ಜnಗದೀಶ್ ಚಂದ್ರ, ಮೃತ್ಯುಂಜಯ, ವಿಶ್ವನಾಥ್, ಕುಶಲ ಸ್ವಾಮಿ, ಉಷಾ ಮೋಹನ್ , ಸುಷ್ಮಾ ವೀರ್ ಸೇರಿದಂತೆ ಅನೇಕ ನಾಯಕರು ಇದ್ದರು.

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು