Vijayapatha – ವಿಜಯಪಥ
Saturday, November 2, 2024
NEWSನಮ್ಮಜಿಲ್ಲೆನಮ್ಮರಾಜ್ಯ

KSRTC- ಮಾರ್ಗಮಧ್ಯೆ ಊಟಕ್ಕೆ ಬಸ್‌ ನಿಲ್ಲಿಸಿದಾಗ ಮತ್ತೊಂದು ಬಸ್‌ಗೆ ಹೋಗುವ ಮಹಿಳಾ ಪ್ರಯಾಣಿಕರು: ಇತ್ತ ನಿರ್ವಾಹಕರಿಗೆ ಅಮಾನತಿನ ಶಿಕ್ಷೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್‌ನಲ್ಲಿ ಮಾರ್ಗ ಮಧ್ಯೆ ಊಟಕ್ಕೆ ನಿಲ್ಲಿಸಿದ ವೇಳೆ ಬಸ್‌ನಲ್ಲಿ ಬಂದಿದ್ದ ಮೂವರಲ್ಲಿ ಒಬ್ಬರು ಇಳಿದು ಬೇರೆ ಬಸ್‌ನಲ್ಲಿ ಹೋಗಿದ್ದಾರೆ. ಇದೇ ವೇಳೆ ತಪಾಸಣಾ ಸಿಬ್ಬಂದಿ ಟಿಕೆಟ್‌ ಚೆಕ್‌ ಮಾಡಿದ್ದು ಒಬ್ಬರು ಇಲ್ಲ. ಆದರೂ ಮೂವರಿಗೆ ಟಿಕೆಟ್‌ ಕೊಟ್ಟಿದ್ದೀಯಾ ಎಂದು ಮೆಮೋ ಕೊಟ್ಟಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಆ ಮೆಮೋದ ಆಧಾರದ ಮೇರೆಗೆ ನಿರ್ವಾಹಕನನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಂದರೆ ನಿರ್ವಾಹಕರು ಸರಿಯಾಗಿ ಮಹಿಳೆಯರ ಉಚಿತ ಟಿಕೆಟ್‌ ವಿತರಣೆ ಮಾಡುವುದು ಇಲ್ಲಿ ಅವರಿಗೆ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

ಒಂದು ವೇಳೆ ಮಹಿಳೆಯರೇ ಟಿಕೆಟ್‌ ತೆಗೆದುಕೊಂಡು ಅದನ್ನು ಅವರು ಕಳೆದು ಕೊಂಡರೂ ಇಲ್ಲಿ ನಿರ್ವಾಹಕರಿಗೆ ಮೆಮೋ ನೀಡಿ ಬಳಿಕ ಅಮಾನತು ಮಾಡುವುದು ಹೆಚ್ಚಾಗುತ್ತಿದೆ. ಮಹಿಳೆಯರಿಗೆ ಉಚಿತ ಟಿಕೆಟ್‌ ಇದ್ದರೂ ಅದನ್ನು ಪಡೆದುಕೊಳ್ಳದವರಿಗೆ ದಂಡ ಹಾಕುವುದಿಲ್ಲ. ಆದರೆ, ನಿರ್ವಾಹಕರಿಗೆ ಮೆಮೋ ಕೊಟ್ಟು ಬಳಿಕ ಅಮಾನತಿನ ಶಿಕ್ಷೆ ವಿಧಿಸಲಾಗುತ್ತಿದೆ.

ಹೀಗೆ ಶಿಕ್ಷೆ ವಿಧಿಸುವುದು ನಿಗಮದ ಯಾವ ಕಾನೂನಿನಡಿ ಬರುತ್ತದೋ ಗೊತ್ತಿಲ್ಲ. ಒಟ್ಟಾರೆ, ನಿಗಮದ ಚಾಲನಾ ಸಿಬ್ಬಂದಿ ಗರಗಸಕ್ಕೆ ಸಿಕ್ಕ ಕಟ್ಟಿಗೆಯಂತಾಗಿದ್ದಾರೆ. ಇತ್ತ ಪ್ರಯಾಣಿಕರಿಂದಲೂ ಕಿರುಕುಳ ಅನುಭವಿಸಬೇಕು. ಅತ್ತ ಸಂಸ್ಥೆಯಿಂದಲೂ ಸಮಸ್ಯೆ ಎದುರಿಸಬೇಕು. ಇದನ್ನು ಕೇಳ ಬೇಕಾದ ಸಂಘಟನೆಗಳ ಮುಖಂಡರು ಈತ ನಮ್ಮ ಸಂಘಟನೆ ಪರವಾಗಿ ಇಲ್ಲ ಎಂಬ ಸಬೂಬು ಹೇಳಿ ನೌಕರರನ್ನು ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ.

ಇಲ್ಲಿ ನೋಡಿ ಮೊನ್ನೆ ಚಿಕ್ಕಮಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್‌ ಮಾರ್ಗ ಮಧ್ಯೆ ಊಟಕ್ಕೆಂದು 10-15 ನಿಮಿಷ ನಿಲುಗಡೆ ಮಾಡಿದೆ. ಈ ವೇಳೆ ಒಟ್ಟಿಗೆ ಮೂವರು ಟಿಕೆಟ್‌ ತೆಗೆದುಕೊಂಡಿದ್ದವರಲ್ಲಿ ಒಬ್ಬರು ಬೇರೊಂದು ಬಸ್‌ ಹತ್ತಿ ಹೋಗಿದ್ದಾರೆ. ಉಳಿದ ಇಬ್ಬರು ಅದೇ ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ.

ಈ ನಡುವೆ ಬಸ್‌ ಹೊರಟ ಸ್ವಲ್ಪ ದೂರದಲ್ಲೇ ಲೈನ್‌ಚೆಕ್‌ ಸಿಬ್ಬಂದಿ ಬಸ್‌ ಹತ್ತಿದ್ದು, ಟಿಕೆಟ್‌ ಚೆಕ್‌ ಮಾಡಿದ್ದಾರೆ. ಈ ವೇಳೆ ಒಂದು ಟಿಕೆಟ್‌ನಲ್ಲಿ ಮೂವರಿಗೆ ವಿತರಣೆ ಮಾಡಲಾಗಿದೆ ಎಂದು ಇದೆ. ಆದರೆ, ಇಲ್ಲಿ ಇರುವುದು ಇಬ್ಬರು ಮಾತ್ರ ಮತ್ತೊಬ್ಬರು ಎಲ್ಲಿ ಎಂದರೆ ಅವರು ಬೇರೊಂದು ಬಸ್‌ ಹಿಡಿದು ಹೋಗಿದ್ದಾರೆ ಎಂದು ನಿರ್ವಾಹಕರು ಹೇಳಿದ್ದಾರೆ.

ಈ ವೇಳೆ ಮಹಿಳೆಯರು ನಮಗೆಲ್ಲಿ ದಂಡಹಾಕುತ್ತಾರೋ ಎಂಬ ಭಯದಲ್ಲಿ ಇಲ್ಲ ನಾವು ಇಬ್ಬರೆ ಬಂದಿದ್ದು, ನಮ್ಮ ಪಕ್ಕದಲ್ಲಿ ಕುಳಿತಿದ್ದವರು ಯಾರು ಎಂದು ಗೊತ್ತಿಲ್ಲ ಅವರು ಬೇರೊಂದು ಬಸ್‌ಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೆ ತಪಾಸಣಾ ಸಿಬ್ಬಂದಿ ನಿರ್ವಾಹಕನಿಗೆ ಮೆಮೋ ನೀಡಿದ್ದು, ಈಗ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ.

ಇದೇ ಸಮಸ್ಯೆ ಕಡೂರು – ಬೀರೂರು ನಡುವೆ ನಿರ್ವಾಹಕರು ಅನುಭವಿಸುತ್ತಿದ್ದಾರೆ. ಇಲ್ಲಿ ಕಡೂರು – ಬೀರೂರಿಗೆ ಟಿಕೆಟ್‌ ವಿತರಿಸಬೇಕು. ಆದರೆ ಈ ಮಧ್ಯೆ ಚೆಕ್‌ ಪೋಸ್ಟ್‌ ಮತ್ತು ವಿಜಯಲಕ್ಷ್ಮೀ ಟಾಕೀಸ್‌ ಬಳಿ ಪ್ರಯಾಣಿಕರು ಇಳಿದು ಹೋಗುತ್ತಾರೆ. ಈ ಸ್ಥಳದಿಂದ ಮುಂದೆ ತಪಾಸಣಾ ಸಿಬ್ಬಂದಿ ಬಸ್‌ ಹತ್ತಿ ಟಿಕೆಟ್‌ ಚೆಕ್‌ ಮಾಡುತ್ತಾರೆ, ಈ ಎರಡು ಸ್ಟಾಪ್‌ಗಳಲ್ಲಿ ಇಳಿದು ಹೋಗಿದ್ದಾರೆ ಎಂದರೂ ಬಿಡದೆ ಹೆಚ್ಚುವರಿ ಟಿಕೆಟ್‌ ವಿತರಿಸಿದ್ದೀಯಾ ಎಂದು ನಿರ್ವಾಹಕರಿಗೆ ಮೆಮೋ ಕೊಟ್ಟು ಬಳಿಕ ಅಮಾನತು ಮಾಡಲಾಗುತ್ತಿದೆ.

ಇದರಿಂದ ಈಗಾಗಲೇ ಹತ್ತಾರೂ ಮಂದಿ ನಿರ್ವಾಹಕರು ಅಮಾನತುಗೊಂಡಿದ್ದು, ಅವರಲ್ಲಿ ಕೆಲವರು ಎಂಡಿ ಅನ್ಬುಕುಮಾರ್‌ ಅವರ ಗಮನಕ್ಕೆ ತಂದು ಮತ್ತೆ ಕರ್ತವ್ಯಕ್ಕೆ ಮರಳಿದರೆ ಇನ್ನು ಕೆಲ ನಿರ್ವಾಹಕರು ಅಮಾನತಿನ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಮಹಿಳಾ ಪ್ರಯಾಣಿಕರಿಗೆ ದಂಡ ಹಾಕುತ್ತಿಲ್ಲ: ಇತ್ತ ಮಹಿಳಾ ಪ್ರಯಾಣಿಕರು ಟಿಕೆಟ್‌ ತೆಗೆದುಕೊಂಡು ಅದನ್ನು ಕಳೆದುಕೊಂಡ ಮೇಲೆ ಅವರು ಅದನ್ನು ನಿರ್ವಾಹಕರ ಮೇಲೆ ಹಾಕಿ ಇವರು ನಮಗೆ ಟಿಕೆಟ್‌ ಕೊಟ್ಟೆ ಇಲ್ಲ ಎಂದು ಹೇಳಿ ಬಿಡುತ್ತಾರೆ. ಈ ವೇಳೆ ಅಂತಹ ಮಹಿಳೆಯರಿಗೆ ದಂಡ ಹಾಕದೆ ಅವರನ್ನು ಬಿಟ್ಟು ಕಳುಹಿಸುತ್ತಾರೆ. ಇತ್ತ ನಿರ್ವಾಹಕನಿಗೆ ಮೆಮೋ ಕೊಟ್ಟು ಬಳಿಕ ಅಮಾನತು ಮಾಡುತ್ತಾರೆ.

ಇದರಿಂದ ನಿರ್ವಾಹಕರು ಹೇಗೆ ಕೆಲಸ ಮಾಡಬೇಕು ಎಂಬ ಸಮಸ್ಯೆಯ ನಡುವೆ ಸಿಲುಕಿ ಮಾನಸಿಕವಾಗಿ ಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ಸರಿ ಪಡಿಸಬೇಕಾದ ಅಧಿಕಾರಿಗಳು, ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇವರ ಈ ಬೇಜವಾಬ್ದಾರಿಯಿಂದ ನಿರ್ವಾಹಕರು ಅಮಾನತಿನ ಶಿಕ್ಷೆ ಅನುಭವಿಸುವಂತಾಗಿದೆ.

ಇನ್ನಾದರೂ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ನಿರ್ವಾಹಕರು ನಿಷ್ಠೆಯಿಂದ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳ ಮುಖಂಡರೂ ಕೂಡ ಎಲ್ಲ ನೌಕರರು ಒಂದೆ ಎಂದು ಅವರಿಗೆ ಅಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯಬೇಕಿದೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ