ಶಿಮ್ಲಾ: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಅಣ್ಣಿ ನಗರದಲ್ಲಿ ಗುಡ್ಡಕುಸಿತಕ್ಕೆ 7 ಕಟ್ಟಡಗಳು ನೋಡು ನೋಡುತ್ತಿದ್ದಂತೆ ಧರೆಗುರುಳಿರುವ ಘಟನೆ ಇಂದು ನಡದಿದೆ.
ಈ ಕಟ್ಟಡಗಳಲ್ಲಿದ್ದವರನ್ನು 3 ದಿನಗಳ ಹಿಂದಷ್ಟೇ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಸುರಿದ ಭೀಕರ ಮಳೆ ಮತ್ತು ಅರಿಂದ ಉಂಟಾದ ಪ್ರವಾಹಕ್ಕೆ ತತ್ತರಿಸಿದ್ದ ಹಿಮ ನಾಡಿನಲ್ಲಿ ಪದೇ ಪದೇ ಭೂಕುಸಿತದಂತಹ ಅನಾಹುತಗಳು ಸಂಭವಿಸುತ್ತಲೇ ಇವೆ. ಹಿಮಾಚಲ ಪ್ರದೇಶದಲ್ಲಿ ಪ್ರಕೃತಿ ವಿಕೋಪದ ದುರಂತಗಳು ನಿಲ್ಲುತ್ತಲೇ ಇಲ್ಲ.
ಹಿಮಾಚಲ ಪ್ರದೇಶದ ಹಲವೆಡೆ ಸಂಭವಿಸಿದ ಭೂಕುಸಿತಕ್ಕೆ ಹಲವು ಮನೆಗಳು ಸಂಪೂರ್ಣ ಧರಶಾಹಿ ಆಗಿವೆ. ಈ ಬಾರಿಯ ಮಳೆರಾಯನ ಆರ್ಭಟ, ಭೂಕುಸಿತಕ್ಕೆ ಸುಮಾರು 238 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಮತ್ತೆ ಕುಲು ಜಿಲ್ಲೆಯ ಈ ಕಟ್ಟಡಗಳು ನೆಲಸಮವಾಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಣ್ಣ ಮುಂದೆಯೇ ಮನೆಗಳೆಲ್ಲ ಕುಸಿದು ಬೀಳುತ್ತಿರೋದನ್ನ ನೋಡಿದ ಮಂದಿ ಬೆಚ್ಚಿ ಬಿದ್ದಿದ್ದಾರೆ.
Massive landslide in #Kullu .. many feared trapped.. prayers for the people living here. #HimachalDisaster
(Video shared by a local reporter VD Sharma) pic.twitter.com/JdT6T0IK04
— Rishika Baruah (@rishika625) August 24, 2023
ಕುಲು ಮತ್ತು ಮಂಡಿ ನಗರಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಜಾಮ್: ಮನೆಗಳು ಕುಸಿದು ಬೀಳುತ್ತಿರೋ ದೃಶ್ಯಗಳು ಒಂದು ಕಡೆಯಾದ್ರೆ ಮತ್ತೊಂದೆ ಹೆದ್ದಾರಿಗಳ ಮೇಲೂ ಭೂಕುಸಿತ ಉಂಟಾಗಿ 800ಕ್ಕೂ ಅಧಿಕ ರಸ್ತೆಗಳು ಬಂದ್ ಆಗಿವೆ. ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು ಹಿಮಾಚಲ ಪ್ರದೇಶದ ಕುಲು ಮತ್ತು ಮಂಡಿ ನಗರಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆ ಜಾಮ್ ಆಗಿದೆ. ಸುಮಾರು 10 ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಆಗಿದೆ.
ಇನ್ನು ಕಿಲೋ ಮೀಟರ್ ಗಟ್ಟಲೇ ವಾಹನಗಳು ನಿಂತಲ್ಲೇ ನಿಂತಿರೋ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಜಾಮ್‌ನಲ್ಲಿ ತಿನ್ನಲು ಆಹಾರ, ಕುಡಿಯಲು ನೀರು ಇಲ್ಲದೆ ಡ್ರೈವರ್‌ಗಳು ಪರದಾಡುತ್ತಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಹಾಗೂ ಕುಲುವಿನಲ್ಲಿ ಈಗಲೂ ಮಳೆ ಮುಂದುವರಿದಿದೆ. ಮನೆ, ಆಸ್ಪತ್ರೆ ಸೇರಿದಂತೆ ಹಲವು ಕಟ್ಟಡಗಳು ಜಲಾವೃತಗೊಂಡಿವೆ.
Another Scary visuals from Anni in the Kullu district of Himachal Pradesh show several buildings collapsing. #HimachalDisaster #HimachalPradesh #Kullu
#HimachalPradesh #Flood #India #HimachalDisaster #HimachalPradeshRains #HimachalFloods #Himachal #Shimla #Prigozhin… pic.twitter.com/uCBvTwLEF6
— Ratnesh Mishra 🇮🇳 (@Ratnesh_speaks) August 24, 2023