ನ್ಯೂಡೆಲ್ಲಿ: 2023ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಇಂದು 75 ಶಿಕ್ಷಕರಿಗೆ ಪ್ರದಾನ ಮಾಡಲಾಗುತ್ತಿದೆ. ಇದಕ್ಕೂ ಮುನ್ನ ಅಂದರೆ ಸೋಮವಾರ ಪ್ರಧಾನಿ ಮೋದಿಯವರು ಪ್ರಶಸ್ತಿ ವಿಜೇತ ಶಿಕ್ಷಕರ ಜತೆ ಸಂವಾದ ನಡೆಸಿದರು.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತ ಶಿಕ್ಷಕರ ಜತೆ ಸಂವಾದ ನಡೆಸಿದ ಮೋದಿ ಅವರು ಎಲ್ಲರಿಗೂ ಸ್ವಾಗತ ಕೋರಿದರು. ಈ ವೇಳೆ ತಾಯಿ ನಮಗೆ ಜನ್ಮ ನೀಡಿದ್ರೆ, ಗುರು ನಮಗೆ ಜೀವನ ನೀಡುತ್ತಾರೆ ಎಂದು ಹೇಳಿದ್ದಾರೆ. ಜತೆಗೆ ಶಿಕ್ಷಕರು ಕೇಳಿದ ಪ್ರಶ್ನೆಗಳಿಗೆ ಮೋದಿ ಸಮಾಧಾನಕರವಾಗಿಯೇ ಉತ್ತರ ನೀಡಿದರು.
ಇನ್ನು ದೇಶ ನಿರ್ಮಾಣದಲ್ಲಿ ಶಿಕ್ಷಕರ ಕೆಲಸ ಪ್ರಮುಖವಾಗಿದೆ. ನೀವು ಇಡೀ ದೇಶವನ್ನೇ ಬದಲಾವಣೆ ಮಾಡಬಹುದು. ಟೀಚರ್ಸ್ ನಿತ್ಯ ಮಕ್ಕಳಿಗೆ ಕ್ಯೂರಿಯಾಸಿಟಿ ಕೊಡುತ್ತಿರಬೇಕು. ಅವರಿಗೆ ಪ್ರೋತ್ಸಾಹ ಹೆಚ್ಚಿಗೆ ನೀಡಬೇಕು ಎಂದು ಹೇಳಿದರು.
ಶಾಲೆಯಲ್ಲಿ ಮಕ್ಕಳ ಓದು, ಬರಹ ಹೇಗಿರುತ್ತೆ ಎಂಬುದರ ಬಗ್ಗೆ ಚರ್ಚೆ ಮಾಡಿದರು. ಸಮಾಲೋಚನೆಯ ನಡುವೆ ಆಗಾಗ ನಗುವಿನ ಅಲೆ ತೇಲಿ ಬಂತು. ಸಭೆಯಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ಇದ್ದರು.
ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75 ಶಿಕ್ಷಕರಿಗೆ 2023ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಇನ್ನು ಭಾರತದ ಮಾಜಿ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರ ಹುಟ್ಟುಹಬ್ಬದ ಆಚರಣೆಯನ್ನು ದೇಶಾದ್ಯಂತ ಶಿಕ್ಷಕರ ದಿನಚರಣೆ ಎಂದು ಆಚರಣೆ ಮಾಡಲಾಗುತ್ತದೆ. ಇವರು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸೆಪ್ಟೆಂಬರ್ 5 ರಂದು ಜನಿಸಿದ್ದರು.
Teachers play a key role in building our future and inspiring dreams. On #TeachersDay, we salute them for their unwavering dedication and great impact. Tributes to Dr. S. Radhakrishnan on his birth anniversary.
Here are highlights from the interaction with teachers yesterday… pic.twitter.com/F1Zmk4SSnf
— Narendra Modi (@narendramodi) September 5, 2023