CrimeNEWSದೇಶ-ವಿದೇಶ

ದುಬಾರಿ​ ಶೌಚಾಲಯಕ್ಕಾಗಿ ಬಟ್ಟೆ ಹರಿಯುವ ಮಟ್ಟಿಗೆ ಕಿತ್ತಾಡಿದ ಯುವತಿಯರು

ವಿಜಯಪಥ ಸಮಗ್ರ ಸುದ್ದಿ

ಪಿಟ್ಸ್‌ಬರ್ಗ್‌: ಪ್ಲಶ್​ ಮಾಡುವ ಶೌಚಾಲಯವೇ ಬೇಕು ಎಂಬುವ ವಿಚಾರಕ್ಕೆ ನಾಲ್ವರು ಯುವತಿಯರು ಮನ ಬಂದಂತೆ ಹೊಡೆದಾಡಿಕೊಂಡ ಘಟನೆ ಅಮೆರಿಕದ ಪಿಟ್ಸ್‌ಬರ್ಗ್‌ ಬಳಿಯ ಮೋರ್ಗನ್ ವಾಲನ್​ನಲ್ಲಿ ನಡೆದಿದೆ. ಸದ್ಯ ಈ ಯುವತಿಯರು ಹೊಡೆದಾಡಿಕೊಂಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಇಲ್ಲಿವರೆಗೆ 1.40 ಕೋಟಿಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.

ಯುವತಿಯರು ಶೌಚಾಲಯಕ್ಕೆ ಹೋಗಲು ಕ್ಯೂನಲ್ಲಿ ನಿಂತಿದ್ದಾರೆ. ಈ ವೇಳೆ ಯುವತಿಯೊಬ್ಬರು ಅದೇ ಕ್ಯೂನಲ್ಲಿ ಮುಂದೆ ನಿಲ್ಲಲು ಹೋಗಿದ್ದಾರೆ. ಆಗ ಇನ್ನೊಬ್ಬ ಯುವತಿ ಇದನ್ನು ಪ್ರಶ್ನೆ ಮಾಡಿದ್ದಾಳೆ. ಇಬ್ಬರ ನಡುವಿನ ಮಾತಿನ ಚಕಮಕಿ ನಡೆದು ಅದು ತಾರಕಕ್ಕೇರಿದ್ದು ಮೊದಲು ಒಬ್ಬರಿಗೊಬ್ಬರು ತಳ್ಳಾಡಿಕೊಂಡಿದ್ದಾರೆ. ಹಾಗೇ ತಳ್ಳುತ್ತಾ ಶೌಚಾಲಯದ ಒಳಗೆ ಹಾಕಿ ಯುವತಿಗೆ ಇನ್ನೊಬ್ಬ ಯುವತಿ ಪಂಚ್ ಮಾಟ್ಟಿದ್ದಾರೆ.

ಈ ವೇಳೆ ಬೇರೊಬ್ಬ ಯುವತಿ ಎಂಟ್ರಿಕೊಟ್ಟು ಇಬ್ಬರಿಗೂ ಬಾರಿಸಿದ್ದಾಳೆ. ಈ ಜತೆಗೆ ಮತ್ತೊಬ್ಬ ಯುವತಿ ಸೇರಿಕೊಂಡು ಇಬ್ಬರಿಗೂ ಗೂಸಾ ಕೊಟ್ಟಿರುವುದು ಸದ್ಯ ಎಲ್ಲೆಡೆ ವೈರಲ್‌ ಆಗಿದೆ.

ಇನ್ನು ಕೊನೆಗೆ ಮತ್ತೊಂದು ಯುವತಿ ಬಂದು ಆ ಇಬ್ಬರಿಗೆ ಮನ ಬಂದಂತೆ ಹೊಡೆದಿದ್ದು, ಕೂದಲು ಹಿಡಿದು ಎಳೆದು ಬಿಸಾಕಿದ್ದಾಳೆ. ಪಂಚ್​ ಮಾಡುತ್ತಾ ಬಟ್ಟೆ ಹರಿದು ಹಾಕಿದ್ದಾಳೆ. ಕಾಲಲ್ಲಿ ಕೂಡ ಒದ್ದಿದ್ದಾಳೆ. ಹೀಗೆ ನಾಲ್ವರು ಯುವತಿಯರು ಸಿಕ್ಕಾಪಟ್ಟೆ ಗಲಾಟೆ ಮಾಡಿಕೊಂಡಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...