CrimeNEWSನಮ್ಮಜಿಲ್ಲೆನಮ್ಮರಾಜ್ಯ

ಹೆಣ್ಣು ಮಕ್ಕಳಿಗೆ 18 ವರ್ಷದವರೆಗೆ ಜೀವನಾಂಶ ಕೊಟ್ಟರೆ ಸಾಕು: ಹೈ ಕೋರ್ಟ್‌ ಆದೇಶ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೆಣ್ಣು ಮಕ್ಕಳಿಗೆ ಮದುವೆ ಆಗುವವರೆಗೂ ತಂದೆಯೇ ಜೀವನಾಂಶ (Family alimony) ಕೊಡಬೇಕಾಗಿಲ್ಲ. ಅವರಿಗೆ 18 ವರ್ಷದವರೆಗೆ ಜೀವನಾಂಶ ಕೊಟ್ಟರೆ ಸಾಕು ಎಂಬ ವಿಶೇಷ ತೀರ್ಪನ್ನು ಕರ್ನಾಟಕ ಉಚ್ಚ ನ್ಯಾಯಾಲಯ (Karnataka High court) ನೀಡಿದೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ (The Protection of Women from Domestic Violence Act, 2005)ರಡಿ ದಾಖಲಾದ ಪ್ರಕರಣದ ವಿಚಾರಣೆ ಬಳಿಕ ಕೋರ್ಟ್‌ ಈ ತೀರ್ಪು ನೀಡಿದೆ. ವ್ಯಕ್ತಿ ತನ್ನ ಹೆಂಡತಿಯಿಂದ ವಿಚ್ಛೇದ ಪಡೆದುಕೊಂಡಿದ್ದರು. ಆ ವೇಳೆ ತೀರ್ಪಿನ ಸಂದರ್ಭದಲ್ಲಿ ಸೆಷನ್ಸ್‌ ನ್ಯಾಯಾಲಯ ಹೆಂಡತಿಗೆ ಮತ್ತು ಇಬ್ಬರು ಪುತ್ರಿಯರಿಗೆ ಜೀವನಾಂಶ ನೀಡುವಂತೆ ಸೂಚಿಸಿತ್ತು.

ಅಂದು ಆದೇಶ ಹೊರಡಿಸಿದ್ದ ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಪುತ್ರಿಯರಿಗೆ ತಿಂಗಳಿಗೆ 4 ಸಾವಿರ ರೂಪಾಯಿ ಮತ್ತು ಪತ್ನಿಗೆ ಒಂದು ಲಕ್ಷ ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶ ನೀಡಿತ್ತು. ಈ ಜೀವನಾಂಶ ಕಡಿಮೆಯಾಯಿತು ಎಂದು ಪತ್ನಿ ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ ಅದೇ ಆದೇಶವನ್ನು ಕಾಯಂಗೊಳಿಸಿದ್ದು, ಪುತ್ರಿಯರಿಗೆ 18 ವರ್ಷದವರೆಗೆ ಜೀವನಾಂಶ ನೀಡಿದರೆ ಸಾಕು ಎಂದು ಹೇಳಿದೆ.

ಏನಿದು ಪ್ರಕರಣ, ಏನಾಗಿತ್ತು?: ಬೆಂಗಳೂರಿನ ರವಿಗೌಡ (53) ಮತ್ತು ಉಮಾ (48) ಎಂಬುವರು 1998ರಲ್ಲಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಪುತ್ರಿಯರು ಇದ್ದಾರೆ. ರವಿ ವರದಕ್ಷಿಣೆಗೆ ತರುವಂತೆ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪತಿ ವಿರುದ್ಧ ಉಮಾ, ಕ್ರೌರ್ಯ/ ಕೌಟುಂಬಿಕ ದೌರ್ಜನ್ಯ ಆರೋಪದಡಿ (ಐಪಿಸಿ ಸೆಕ್ಷನ್‌ 498ಎ) ದೂರು ನೀಡಿದ್ದರು.

ಅಲ್ಲದೆ ಪತಿ ತನಗೆ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕು. ಯಾವುದೇ ರೀತಿ ದೌರ್ಜನ್ಯ ಎಸಗಬಾರದು. ಪ್ರತ್ಯೇಕ ಮನೆ ಮಾಡಿಕೊಡಬೇಕು ಮತ್ತು ಜೀವನ ನಿರ್ವಹಣೆಗೆ 10 ಲಕ್ಷ ರೂ. ಜೀವನಾಂಶ ನೀಡಬೇಕು ಎಂದು ಕೋರಿ ಉಮಾ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣಾ ಕಾಯ್ದೆ-2005ರ’ ಸೆಕ್ಷನ್‌ 12ರ ಅಡಿಯಲ್ಲಿ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಪತ್ನಿಯ ಎಲ್ಲ ಆರೋಪವನ್ನು ಪತಿ ನಿರಾಕರಿಸಿದ್ದರು.

ವಿಚಾರಣೆ ನಡೆಸಿದ್ದ ನಗರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ, ಹೆಣ್ಣು ಮಕ್ಕಳಿಬ್ಬರಿಗೂ ಮದುವೆಯಾಗುವ ತನಕ ಮಾಸಿಕ ತಲಾ ಐದು ಸಾವಿರ ರೂ. ಜೀವನಾಂಶ ನೀಡಬೇಕು. ದೌರ್ಜನ್ಯದಿಂದ ಪತ್ನಿಗೆ ಆಗಿರುವ ಹಾನಿಗೆ 5 ಲಕ್ಷ ರೂ. ಜೀವನಾಂಶ ನೀಡಬೇಕು ಎಂದು ರವಿಗೆ ಆದೇಶಿಸಿತ್ತು.

ಈ ಆದೇಶ ವಿರುದ್ಧ ರವಿ ಮೇಲ್ಮನವಿ ಸಲ್ಲಿಸಿದ್ದರು. ಆಗ ಕೋರ್ಟ್‌ ಪತ್ನಿಗೆ ನೀಡುವ ಜೀವನಾಂಶವನ್ನು ಒಂದು ಲಕ್ಷಕ್ಕೆ ಇಳಿಸಿತ್ತು. ಇದನ್ನು ಪ್ರಶ್ನಿಸಿ ಉಮಾ ಅವರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಕೋರ್ಟ್‌ ಉಮಾ ಅವರ ಅರ್ಜಿಯನ್ನು ವಜಾಗೊಳಿಸಿತು.

ಹೈಕೋರ್ಟ್‌ ಈ ಪ್ರಕರಣದಲ್ಲಿ ಹೇಳಿದ್ದೇನು?: ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ಅಡಿ ಪುತ್ರಿಯರು ವಯಸ್ಕರಾಗುವವರೆಗೆ (18 ವರ್ಷ) ಮಾತ್ರ ತಂದೆ ಜೀವನಾಂಶ ಪಾವತಿಸಲು ಅವಕಾಶವಿದೆಯೇ ಹೊರತು ಮದುವೆ ಆಗುವ ತನಕ ಅಲ್ಲ. ಮತ್ತು ಉದ್ಯೋಗ ನಿರತ ತಾಯಿ ಸಹ ಮಕ್ಕಳ ಜೀವನ ನಿರ್ವಹಣೆಗೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಅವಿವಾಹಿತ ಹೆಣ್ಣು ಮಕ್ಕಳೆಲ್ಲರೂ ಜೀವನಾಂಶಕ್ಕೆ ಅರ್ಹರಲ್ಲ. ಕೇವಲ ನೊಂದ ವ್ಯಕ್ತಿಗಳು ಅಥವಾ 18 ವರ್ಷದೊಳಗಿನ ಮಕ್ಕಳು ಜೀವನಾಂಶ ಕೋರಬಹುದಾಗಿದೆ. ಹಿಂದೂ ದತ್ತು ಹಾಗೂ ನಿರ್ವಹಣೆ ಕಾಯ್ದೆ ಸೆಕ್ಷನ್‌ 20(3)ರ ಪ್ರಕಾರ ಒಂದು ವೇಳೆ ವಯಸ್ಕರಾದ ನಂತರವೂ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ಸಂದರ್ಭದಲ್ಲಿ ಪುತ್ರಿಯರು ತಂದೆಯಿಂದ ಜೀವನಾಂಶ ಕೋರಲು ಸ್ವತಂತ್ರರಾಗಿರುತ್ತಾರೆ.

ಈ ಪ್ರಕರಣದಲ್ಲಿ ತಂದೆ-ತಾಯಿ ಶಿಕ್ಷಕರಾಗಿ ಉದ್ಯೋಗ ಮಾಡುತ್ತಿದ್ದಾರೆ. ಇದರಿಂದ ತಂದೆ ಮೇಲೆ ಮಾತ್ರ ಮಕ್ಕಳ ಜೀವನ ನಿರ್ವಹಣೆ ಜವಾಬ್ದಾರಿ ಇರುವುದಿಲ್ಲ. ತಾಯಿಯ ಮೇಲೂ ಜವಾಬ್ದಾರಿ ಇರುತ್ತದೆ. ಸೆಷನ್ಸ್‌ ನ್ಯಾಯಾಲಯದ ಆದೇಶದಂತೆ ತಂದೆ ನಾಲ್ಕು ಸಾವಿರ ನೀಡಿದರೆ, ಉಳಿದ ಮೊತ್ತವನ್ನು ತಾಯಿ ಭರಿಸಬೇಕಾಗುತ್ತದೆ.

ತಂದೆಯು ಅರ್ಜಿ ದಾಖಲಾದ ದಿನದಿಂದ ತೀರ್ಪು ಹೊರಬಿದ್ದ ದಿನದವರೆಗೆ ಪುತ್ರಿಯರಿಗೆ ಮಾಸಿಕ ನಾಲ್ಕು ಸಾವಿರ ರು. ಜೀವನಾಂಶ ಪಾವತಿಸಬೇಕು. ಒಂದೊಮ್ಮೆ ಹೆಚ್ಚಿನ ಜೀವನಾಂಶ ಬೇಕಾಗಿದ್ದರೆ, ಪುತ್ರಿಯರು ಹಿಂದು ದತ್ತು ಹಾಗೂ ನಿರ್ವಹಣೆ ಕಾಯ್ದೆಯಡಿ ಕೋರಬಹುದು ಎಂದು ಕೋರ್ಟ್‌ ಆದೇಶ ಹೊರಡಿಸಿದೆ.

Leave a Reply

error: Content is protected !!
LATEST
ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ