NEWSನಮ್ಮರಾಜ್ಯವಿಡಿಯೋ

KSRTC ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯರಿಬ್ಬರು ಟಿಕೆಟ್‌ ಪಡೆದ ಬಳಿಕ ಅರ್ಧದಲ್ಲೇ ಬಸ್‌ ಇಳಿಯಲು ಹೊರಟರು!!

ವಿಜಯಪಥ ಸಮಗ್ರ ಸುದ್ದಿ
  • ಬಸ್‌ಗಳಲ್ಲಿ ಉಚಿತ ಪ್ರಯಾಣ- ಅರ್ಧಕ್ಕೆ ಇಳಿದು ಹೋಗುವ ಮಹಿಳೆಯರಿಂದ ಕಂಡಕ್ಟರ್‌ಗಳಿಗೆ ಅಮಾನತಿನ ಶಿಕ್ಷೆ!!
  • ತಾವು ಟಿಕೆಟ್‌ ಪಡೆದ ನಿಲ್ದಾಣಕ್ಕೂ ಮೊದಲೆ ಅರ್ಧದಾರಿಯಲ್ಲೇ ಬಸ್‌ ಇಳಿದು ಹೋದರೆ ಕಂಡಕ್ಟರ್‌ಗೆ ಕಾರಣ ಕೇಳಿ ಮೆಮೋ ಕೊಟ್ಟು ಅಮಾನತು ಮಾಡಲಾಗುತ್ತದೆ. ಈ ಬಗ್ಗೆ ಮಹಿಳೆಯರು ಯೋಚಿಸಬೇಕಿದೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಮಾಡಿಕೊಡಲಾಗಿದೆ. ಇದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಚೈತನ್ಯ ನೀಡುತ್ತಿದೆ. ಆದರೆ, ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಉಚಿತ ಟಿಕೆಟ್‌ ಪಡೆಯಬೇಕು. ಅದು ಕೂಡ ಅವರು ಎಲ್ಲಿಯವರೆಗೆ ಪ್ರಯಾಣಿಸುತ್ತಾರೋ ಅಲ್ಲಿಯವರೆಗೆ ಅಂತ ಅರಿವು ಮೂಡಿಸಬೇಕು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇನ್ನು ಒಂದು ವೇಳೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅರ್ಧಕ್ಕೆ ತಮ್ಮ ಪ್ರಯಾಣ ಮೊಟಕುಗೊಳಿಸಿ ವಾಪಸ್‌ ಹೋಗುವಂತಾದರೆ, ಅದಕ್ಕೆ ಮಹಿಳೆಯರು ಹೊಣೆಯಲ್ಲ ಅದರಂತೆ ಬಸ್‌ನ ನಿರ್ವಾಹಕರು ಹೊಣೆಯಲ್ಲ. ಆದರೆ ಇಲ್ಲಿ ಇಬ್ಬರೂ ಮಾಡದ ತಪ್ಪಿಗೆ ಕಂಡಕ್ಟರ್‌ ಅಮಾನತಿನ ಶಿಕ್ಷೆಗೊಳಗಾಗುವ ಪರಿಸ್ಥಿತಿ ನಿರ್ಮಾಣವಗುತ್ತಿದೆ.

ಈ ಬಗ್ಗೆ ಸರ್ಕಾರ ಮತ್ತು ನಿಗಮಗಳ ಆಡಳಿತ ಮಂಡಳಿಗಳು ಅನಿವಾರ್ಯ ಸಂದರ್ಭದಲ್ಲಿ ಪ್ರಯಾಣ ಮಾಡುವ ಸ್ಥಳದ ಬದಲಿಗೆ ಅರ್ಧದಾರಿಯಲ್ಲೇ ಇಳಿದು ಹೋಗುವ ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟು, ಅವರು ಇಳಿದು ಹೋದ ಮೇಲೆ ನಿರ್ವಾಹಕರಿಗೆ ಕಾರಣ ಕೇಳಿ ತನಿಖಾಧಿಕಾರಿಗಳು ಮೆಮೊ ಕೊಡುವ ಪದ್ಧತಿ ಕೈ ಬಿಡಬೇಕು.

ಇನ್ನು ಕಂಡಕ್ಟರ್‌ಗಳು ಬಸ್‌ ಹತ್ತಿದ ವೇಳೆ ಮಹಿಳೆಯರಿಗೆ ಅವರು ಕೇಳಿದ ನಿಲ್ದಾಣಕ್ಕೆ ಟಿಕೆಟ್‌ ಕೊಟ್ಟಿರುತ್ತಾರೆ. ಆದರೆ ಅವರು ತಾವು ಟಿಕೆಟ್‌ ತೆಗೆದುಕೊಂಡ ನಿಲ್ದಾಣದಲ್ಲಿಯೇ ಇಳಿಯುತ್ತಾರೆಯೆ ಎಂದು ಅವರನ್ನು ಫಾಲೋಅಪ್‌ ಮಾಡುವುದಕ್ಕೆ ಆಗುವುದಿಲ್ಲ. ಕಾರಣ ನಿಗಮದ ಎಲ್ಲ ಅಧಿಕಾರಿಗಳಿಗೂ ಗೊತ್ತಿದೆ. ಒಬ್ಬ ನಿರ್ವಾಹಕ ಬಸ್‌ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಬಗ್ಗೆ ಗಮನ ಕೊಟ್ಟರು ಒಂದೇ ಬಾರಿಗೆ ಹತ್ತಾರು ಪ್ರಯಾಣಿಕರಿಗೆ ವಿವಿಧ ಸ್ಥಳಗಳಿಗೆ ಟಿಕೆಟ್‌ ಕೊಟ್ಟಿರುತ್ತಾರೆ. ಆದರೆ ಯಾರು ಎಲ್ಲಿಗೆ ತೆಗೆದುಕೊಂಡರು ಎಂದು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟಸಾಧ್ಯ ಎಂದು.

ಅಲ್ಲದೆ ಉದಾಹರಣೆಗೆ ಬೆಂಗಳೂರಿನಿಂದ ಮೈಸೂರಿಗೆ ಹೊರಡುವ ಬಸ್‌ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಹೀಗೆ ಹತ್ತಾರೂ ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸಿ ಪ್ರಯಾಣಿಕರ ಇಳಿಸಿ ಮತ್ತು ಹತ್ತಿಸಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಈ ವೇಳೆ ಕಂಡಕ್ಟರ್‌ ಎಲ್ಲ ಪ್ರಯಾಣಿಕರ ಬಗ್ಗೆ ಗಮನವಿದ್ದರು ಯಾರು ಎಲ್ಲಿ ಇಳಿಯುತ್ತಾರೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳುವುದು ಆಗದ ಕೆಲಸವಾಗಿದೆ.

ಹೀಗಾಗಿ ಈ ಬಗ್ಗೆ ಯಾರೋ ಒಂದಿಬ್ಬರು ಪ್ರಯಾಣಿಕರು ಅನಿವಾರ್ಯ ಕಾರಣಗಳಿಂದ ಅರ್ಧಕ್ಕೆ ಇಳಿದು ಹೋದರೆ ಆ ವೇಳೆ ತನಿಖಾಧಿಕಾರಿಗಳು ಬಂದರೆ ಕಂಡಕ್ಟರ್‌ಗಳಿಗೆ ಮೆಮೊ ಕೊಡುವ ಬದಲಿಗೆ ಕಾರಣ ತಿಳಿಯಬೇಕು ಎಂಬುವುದು ನೌಕರರ ಮನವಿಯಾಗಿದೆ.

ಈ ರೀತಿ ವಿವರಿಸುವುದಕ್ಕೆ ಕಾರಣವು ಇದೆ. ಇಂತಹ ಹಲವಾರು ಪ್ರಕರಣಗಳು ಈಗಾಗಲೇ ನಡೆದಿದ್ದು, ನಡೆಯುತ್ತಲೇ ಇವೆ. ಯಾವುದೇ ಕಂಡೀಶನ್ ಇಲ್ಲದೆ ಮಹಿಳಾ ಪ್ರಯಾಣಿಕರು ತಮ್ಮ ಇಚ್ಛಾನುಸಾರ ಪ್ರಯಾಣ ಮಾಡುತ್ತಿದ್ದಾರೆ. ಆದರೆ ತನಿಖಾಧಿಕಾರಿಗಳು ಪಾಪದ ನಿರ್ವಾಹಕರಿಗೆ ಕೇಸ್ ದಾಖಲೆ ಮಾಡುತ್ತಿರುವುದು ನೋವಿನ ಸಂಗತಿ. ಹೀಗಾಗಿ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಇಂತಹ ಪ್ರಕರಣ ನಡೆಯದ ರೀತಿ ಮಹಿಳಾ ಪ್ರಯಾಣಿಕರಿಗೆ ಅರಿವು ಮೂಡಿಸುವ ಜತೆಗೆ ನೌಕರರಿಗೆ ಆಗುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಇನ್ನು ಪ್ರಮುಖವಾಗಿ ಹೇಳಬೇಕೆಂದರೆ, ತಿಂಗಳಲ್ಲಿ ಎಷ್ಟು ಮಂದಿ ಮಹಿಳೆಯರು ಪ್ರಯಾಣಿಸುತ್ತಾರೆ ಎಂಬುದರ ಅಂದಾಜು ಸಿಕ್ಕಿರುವುದರಿಂದ ಈ ಅಂದಾಜಿನ ಪ್ರಕಾರ ಸರ್ಕಾರದಿಂದ ಅನುದಾನಪಡೆಯುವ ಕೆಲಸ ಮಾಡಿದರೆ ಸಾಕೇನೊ ಎನಿಸುತ್ತಿದೆ. ಹೀಗೆ ಮಾಡಿದರೆ ಮಹಿಳೆಯರು ಎಲ್ಲಿ ಬೇಕಾದರು ಹತ್ತಲಿ ಎಲ್ಲಿ ಬೇಕಾದರೂ ಇಳಿಯಲಿ ಅವರಿಗೆ ಟಿಕೆಟ್‌ ವಿತರಿಸುವ ಅವಶ್ಯವಿಲ್ಲ (ಆದರೆ ಮಹಿಳೆಯರ ID ಪ್ರೂಫ್‌ ಪರಿಶೀಲಿಸಲೇಬೇಕು) ಎಂಬ ನಿಯಮ ರೂಪಿಸಿದರೆ ಸಾಕು. ಇದರಿಂದ ಟಿಕೆಟ್‌ ರೋಲ್‌ವೆಚ್ಚದ ಜತೆಗೆ ನಿರ್ವಾಹಕರಿಗೆ ಆಗುತ್ತಿರುವ ಕೆಲಸದ ಒತ್ತಡವನ್ನು ತಪ್ಪಿಸಬಹುದಾಗಿದೆ.

Leave a Reply

error: Content is protected !!
LATEST
ವಿಜಯಪಥ ವರದಿ ಪರಿಣಾಮ-KSRTC ಚಾಲಕನಿಗೆ ಕೊಟ್ಟಿದ್ದ ಮೆಮೋ ವಾಪಸ್‌ ಪಡೆದು 20ದಿನಗಳ ರಜೆ ಮಂಜೂರು ಮಾಡಿದ ಡಿಸಿ ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ !