ಪ್ರತೀ ರಸ್ತೆಗಳಿಗೂ ಜನಸ್ನೇಹಿ ಹೈಡ್ರೋಜನ್ ಸಿಂಪಡಣೆ : ಗುರುದತ್ ಹೆಗಡೆ
ಮೈಸೂರು: ಮಾ.28ರಿಂದ ನಗರದಲ್ಲಿರುವ 65 ವಾರ್ಡ್ ಗಳ ಪ್ರತೀ ರಸ್ತೆಗಳಿಗೂ ಜನಸ್ನೇಹಿ ಹೈಡ್ರೋಜನ್ ಸಿಂಪಡಿಸಲಾಗುತ್ತದೆ. ಈಗಾಗಲೇ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಅಗತ್ಯವಿರುವ ಸೇಪ್ಟಿ ಕಿಟ್ಟ್ ಗಳನ್ನು ನೀಡಲಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಎಂ.ಜಿ ರಸ್ತೆಯಲ್ಲಿರುವ ಮಾರುಕಟ್ಟೆಯನ್ನು ವಸ್ತು ಪ್ರದರ್ಶನ ಆವರಣಕ್ಕೆ ಸ್ಥಳಾಂತರಿಸಿದ್ದು, ಇದಕ್ಕೆ ವ್ಯಾಪಾರಿಗಳು, ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳವ ಮೂಲಕ ಸಹಕರಿಸಿಬೇಕು ಎಂದು ಮನವಿ ಮಾಡಿದರು.
ನಗರದಲ್ಲಿರುವ ನಿರ್ಗತಿಕರ ರಕ್ಷಣೆಗೆ ನೀಡುವ ಸಲುವಾಗಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಉದ್ಯೋಗವಿಲ್ಲದೆ ಹಣಕಾಸಿನ ತೊಂದರೆ ಉಂಟಾಗಿರುವ ಜನರಿಗೆ ನಗರ ಪಾಲಿಕೆ ವತಿಯಿಂದ 17 ಕಡೆ ಸಾಂತ್ವನ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ನಗರದೆಲ್ಲಡೆ ತಳ್ಳುವ ಗಾಡಿಯವರಿಗೆ ತರಕಾರಿ ಮಾರಲು ಪಾಸ್ ವಿತರಿಸಲಾಗಿದೆ. ನಗರದಲ್ಲಿರುವ ಎಲ್ಲಾ ಸೂಪರ್ ಮಾರ್ಕೆಟ್ ನಿಂದ ಅಗತ್ಯವಿರುವ ವಸ್ತುಗಳನ್ನು ಹೋಂ ಡೆಲವರಿ ಮಾಡಲು ನಗರ ಪಾಲಿಕೆ ಸೂಚಿಸಲಾಗಿದೆ ಎಂದು ತಿಳಿಸಿದರು.