NEWSನಮ್ಮಜಿಲ್ಲೆ

ಸೋಂಕು ನಿವಾರಕ ದ್ರಾವಣ ಸಿಂಪಡಿ ಕೊರೊನಾ ನಿಯಂತ್ರಣಕ್ಕೆ ಕ್ರಮ

ತಿ.ನರಸೀಪುರ ರಸ್ತೆಗಳ ಸ್ವಚ್ಛಗೊಳಿಸಿದ ಪುರಸಭೆ, ಅಗ್ನಿಶಾಮಕ ದಳದ ಸಿಬ್ಬಂದಿ

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ಕೊರೋನ‌ ಹರಡುವಿಕೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ ಪುರಸಭೆಯು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಾದ ಲಿಂಕ್ ರಸ್ತೆ,ಕಾಲೇಜುರಸ್ತೆ, ನಂಜನಗೂಡು ರಸ್ತೆಗಳು ಸೇರಿದಂತೆ ಇನ್ನಿತರೆ ರಸ್ತೆಗಳನ್ನು ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ನಡೆಸಿರುವುದರಿಂದ ರಸ್ತೆ ಗಳಲ್ಲಿ ಸೋಂಕು ಇರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.ಇದರಿಂದಾಗಿ ಸಮಸ್ಯೆಯನ್ನು ಮೈ ಮೇಲೆ ಎಳೆದು ಕೊಳ್ಳುವುದು ಬೇಡ ಎಂಬ ಮುನ್ನೆಚ್ಚರಿಕೆಯಲ್ಲಿ ಇಂದು ಮುಖ್ಯಾಧಿಕಾರಿ ಆರ್.ಅಶೋಕ್  ಮಾರ್ಗದರ್ಶನದಲ್ಲಿ ಎಲ್ಲ ರಸ್ತೆಗಳನ್ನು  ಹಾಗೂ  ನ್ಯಾಯಾಲಯದ ಆವರಣ,ಎಪಿಎಂಸಿ ಆವರಣವನ್ನು ಹೈಪೋ ಕ್ಲೋರೇಟ್ ಸಲ್ಯೂಷನ್ ದ್ರಾವಣದಿಂದ ಸ್ವಚ್ಛತೆ ಮಾಡಲಾಗುತ್ತಿದೆ ಎಂದು ಕಾರ್ಯಾಚರಣೆಯಲ್ಲಿದ್ದ ಪುರಸಭಾ ಆರೋಗ್ಯಾಧಿಕಾರಿ ಚೇತನ್ ಕುಮಾರ್ ಹಾಗೂ ಪರಿಸರ ಅಭಿಯಂತರೆ ಮೈತ್ರಾವತಿ  ತಿಳಿಸಿದರು.

ಕಂದಾಯಾಧಿಕಾರಿ ಪುಟ್ಟಸ್ವಾಮಿ, ಕಿರಿಯ ಆರೋಗ್ಯ ಸಹಾಯಕ‌ ಮಹೇಂದ್ರ, ಸಿಬ್ಬಂದಿ ರವಿ,ಗೋಪಾಲ್, ಪುಟ್ಟಸ್ವಾಮಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಎ ಚ್.ಎಸ್.ಯೋಗೇಶ್, ಕುಮಾರ್ ಅಜಯ್,  ನಾಗರಾಜು,ಪಾಟೀಲ್, ಶಿವಬಸಪ್ಪ ಇದ್ದರು.

ಸ್ಥಳಾಂತರ ಗೊಳ್ಳದ ತರಕಾರಿ ಮಾರುಕಟ್ಟೆ

ಕೊರೋನಾ ಹರಡುವಿಕೆಯ ತಡೆಗಾಗಿ ಪಟ್ಟಣದ ಲಿಂಕ್ ರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳಲ್ಲಿ ನಡೆಯುತ್ತಿದ್ದ ತರಕಾರಿ ವ್ಯಾಪಾರವನ್ನು ಪಟ್ಟಣದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವಂತೆ ನಿನ್ನೆ ನಡೆದ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಆದೇಶ ಹೊರಡಿಸಿದ್ದರಾದರೂ ತಹಸೀಲ್ದಾರ್ ರ ಆದೇಶಕ್ಕೆ ಸೊಪ್ಪು ಹಾಕದ ತರಕಾರಿ ವ್ಯಾಪಾರಿಗಳು ಸ್ಥಳಾಂತರಕ್ಕೆ ಒಪ್ಪದ್ದರಿಂದ ಸಾರ್ವಜನಿಕರು ಪರದಾಡಿದರು.

ಎಪಿಎಂಸಿಯಲ್ಲಿ ತರಕಾರಿ ಬಿಡ್ ಮಾಡುವ ಏಜೆಂಟರು ಹಾಗೂ ಬೀದಿ ಬದಿ ವ್ಯಾಪಾರಿಗಳ ನಡುವೆ ಒಮ್ಮತ ಮೂಡಿಸಲು ತಾಲ್ಲೂಕು ಆಡಳಿತ ವಿಫಲವಾದ್ದರಿಂದ ತೊಂದರೆ ಎದುರಾಯಿತು.

ತರಕಾರಿ ಬಿಡ್ ಮಾಡುವ ವ್ಯಾಪಾರಿಗಳು ಬಿಡ್ ಮಾಡುವ ಜೊತೆಗೆ ನಾವೂ ಅಲ್ಲಯೇ ವ್ಯಾಪಾರ ಮಾಡುತ್ತೇವೆ ಎಂದು ಪಟ್ಟು ಹಿಡಿದರೆ,ರಸ್ತೆ ಬದಿ ವ್ಯಾಪಾರಿಗಳು ಬಿಡ್ ಮಾಡಿದ ನಂತರ ಚಿಲ್ಲರೆ ವ್ಯಾಪಾರಿಗಳಾದ ನಮಗೆ ಮಾತ್ರ ತರಕಾರಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ. ಬಗೆಹರಿಸಬೇಕಾದ ತಾಲೂಕು ಆಡಳಿತ ಕೈ ಚೆಲ್ಲಿ ಕುಳಿತಿದ್ದರಿಂದ ಇಂದು ತರಕಾರಿ ಖರೀದಿಗೆ ಬಂದವರು ಬರಿಗೈಲಿ ತೆರಳುವಂತಾಯಿತು.

ಸಭೆ ಮುಂದೂಡಿಕೆ

29 ರ ಭಾನುವಾರ ರೇಣುಕಾ ಸಭಾ ಭವನದಲ್ಲಿ ನಡೆಯ ಬೇಕಿದ್ದ ಶ್ರೀ ರೇಣುಕಾ ಜಯಂತಿ  ಕಾರ್ಯಕ್ರಮವನ್ನು  ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು   ವೀರಶೈವ ಸೇವಾ ಸಮಾಜದ ಕಾರ್ಯದರ್ಶಿ ವೀರೇಶ್ ತಿಳಿಸಿದ್ದಾರೆ.

[carousel_slide id=’3650′]

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು