NEWSನಮ್ಮಜಿಲ್ಲೆನಮ್ಮರಾಜ್ಯ

ಶಕ್ತಿಯೋಜನೆಗೆ ಗ್ರಹಣ: ಶೇ.60ರಷ್ಟು ಮಾತ್ರ ಹಣ ಬಿಡುಗಡೆ ಮಾಡುತ್ತೇವೆ ಅಷ್ಟೇ: ಹಿಂಗಂದ್ರಾ ಸಿಎಂ ಸಿದ್ದರಾಮಯ್ಯ..!!?

ಅನುದಾನ ಬಿಡುಗೆಡೆ ಮಾಡಿ ಎಂದ ನಿಗಮದ ಅಧಿಕಾರಿಗಳನ್ನೇ ಜಾಡಿಸಿದ ಸಿಎಂ

ವಿಜಯಪಥ ಸಮಗ್ರ ಸುದ್ದಿ
  • ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ ಸಾರಿಗೆ ನಿಗಮಗಳು l ಬಸ್‌ನಲ್ಲಿ ಪ್ರಯಾಣಿಸಿದ ಎಲ್ಲ ಮಹಿಳೆಯರ ಹಣ ಕೊಡಲು ಸಾಧ್ಯವಿಲ್ಲ 

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಇದೇ 2023ರ ಜೂನ್‌ 11ರಿಂದ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇದು ಒಳ್ಳೆ ಬೆಳವಣಿಗೆಯೇ ಇದರಲ್ಲಿ ಯಾವುದೇ ತಕರಾರಿಲ್ಲ. ಆದರೆ ವಿಧಾನಸಭೆ ಚುನಾವಣೆ ವೇಳೆ ಈ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಪ್ರಯಾಣಿಸುವ ಮಹಿಳೆಯರ ಟಿಕೆಟ್‌ ಮೌಲ್ಯದ ದರವನ್ನು ನಾವು ಅಂದರೆ ಸರ್ಕಾರ ಕೊಡಲಿದೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಇಂದು ಯೋಜನೆಯನ್ನು ಜಾರಿ ಮಾಡಿದೆ.

ಹೀಗಾಗಿ ಮಹಿಳೆಯರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಆದರೆ, 100 ಮಹಿಳೆಯರು ಪ್ರಯಾಣ ಮಾಡಿದರೆ 60 ಮಂದಿಗೆ ಮಾತ್ರ ಟಿಕೆಟ್‌ ಮೌಲ್ಯದ ಹಣವನ್ನು ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಖಿಕವಾಗಿ ಸಾರಿಗೆ ಅಧಿಕಾರಿಗಳಿಗೆ ಹೇಳಿದ್ದಾರೆ ಎಂಬ ಬಗ್ಗೆ ಖಚಿತ ಮೂಲಗಳಿಂದ ವಿಜಯಪಥಕ್ಕೆ ಮಾಹಿತಿ ಲಭ್ಯವಾಗಿದೆ.

ಅಂದರೆ, ಸಾರಿಗೆಯ ನಾಲ್ಕೂ ನಿಗಮಗಳಿಗೆ ಬರಬೇಕಿರುವ ಮಹಿಳೆಯರ ಪ್ರಯಾಣದ ದರದ ಟಿಕೆಟ್‌ ಮೌಲ್ಯದಲ್ಲಿ ಶೇ.60ರಷ್ಟು ಮಾತ್ರ ಸರ್ಕಾರ ಕೊಡಲಿದೆ. ನಾವು ಇದನ್ನು ಕೊಡುತ್ತಿರುವುದೇ ಹೆಚ್ಚು ಎಂದೂ ಕೂಡ ಸಿಎಂ ಸಿದ್ದರಾಮಯ್ಯ ಏರು ಧ್ವನಿಯಲ್ಲೇ ಬರಬೇಕಿರುವ ಅನುದಾನವನ್ನು ಬಿಡುಗಡೆ ಮಾಡಿ ಎಂದು ಕೇಳಿದ ನಿಗಮದ ಅಧಿಕಾರಿಗಳಿಗೇ ಜಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೆಸರೇಳಲಿಚ್ಚಿಸದ ಅಧಿಕಾರಿಯೊಬ್ಬರು ಈ ಬಗ್ಗೆ ವಿಜಯಪಥಕ್ಕೆ ತಿಳಿಸಿದ್ದು, ನಾವು ರಾಜ್ಯದ 4 ಸಾರಿಗೆ ನಿಗಮಗಳಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಆವಕಾಶ ಮಾಡಿಕೊಡುತ್ತೇವೆ ಎಂದು ಹೇಳಿದ್ದೆವಾ? ಇಲ್ವಲ್ಲ. ಇವರು ಚುನಾವಣೆ ಗೆಲ್ಲುವುದಕ್ಕೆ ರಾಜ್ಯದ ಜನರಿಗೆ ಆಶ್ವಾಸನೆ ನೀಡಿ ಅದನ್ನು ಜಾರಿಗೆ ತಂದು ಈಗ ನಿಗಮಗಳ ಬಸ್‌ಗಳಲ್ಲಿ ಓಡಾಡುವ ಮಹಿಳೆಯರ ಟಿಕೆಟ್‌ ಮೌಲ್ಯದಲ್ಲಿ ಶೇ.60ರಷ್ಟು ಮಾತ್ರ ಕೊಡುತ್ತೇವೆ ಎಂದರೆ ಏನರ್ಥ ಎಂದು ಕೇಳುತ್ತಿದ್ದಾರೆ.

ಇನ್ನು ಈ ಹಿಂದೆ ಕಡಿಮೆ ಜನರು ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದರು ಆಗ ಬಸ್‌ ಇಂಜಿನ್‌ ಹೆಚ್ಚು ಒತ್ತಡವಿಲ್ಲದೆ ಚಾಲನೆಯಾಗುತ್ತಿತ್ತು. ಈಗ ಹೆಚ್ಚು ಜನ ಪ್ರಯಾಣಿಸುತ್ತಿರುವುದರಿಂದ ಬಸ್‌ ಇಂಜಿನ್‌ಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಜತೆಗೆ ಡೀಸೆಲ್‌ ಕೂಡ ಹೆಚ್ಚಾಗಿ ಕುಡಿಯಲಿದೆ. ಭಾರ ಹೆಚ್ಚಿದಷ್ಟು ಬಸ್‌ನ ಇತರೆ ಬಿಡಿ ಭಾಗಗಳು ಬೇಗ ಹಾಳಾಗುತ್ತವೆ. ಈ ಎಲ್ಲ ಸಮಸ್ಯೆಗಳಿದ್ದರೂ ಸಿಎಂ ಈ ರೀತಿ ಕಳೆದ ಜೂನ್‌ನಿಂದ ಸರಿಯಾಗಿ ಹಣ ಬಿಡುಗಡೆ ಮಾಡದೆ ಇರುವುದರಿಂದ ಸಂಸ್ಥೆಗಳು ಇನ್ನಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಲಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ನಾಡಿನ ಜರಿಗೆ ಅನುಕೂಲವಾಗುತ್ತಿದೆ ಎಂದು ಹೇಳಬಹುದು. ಆದರೆ, ಇನ್ನೊಂದು ಕಡೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ. ಅದರಲ್ಲೂ ರಾಜ್ಯದ ಸಾರಿಗೆ ನಿಗಮಗಳು ಸರ್ಕಾರದ ಶಕ್ತಿ ಯೋಜನೆಯಿಂದ ಚೇತರಿಕೆಯತ್ತ ದಾಪುಗಾಲು ಇಡುತ್ತಿವೆ ಎಂದು ಖುಷಿ ಪಡಬೇಕು ಎಂದುಕೊಳ್ಳುವ ಹೊತ್ತಿಗೆ ಸಿಎಂ ಮೌಖಿಕವಾಗಿ ತಿಳಿಸಿರುವ ವಿಷಯ ಭಾರಿ ಆಘಾತವನ್ನು ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಮಹಿಳಾ ಪ್ರಯಾಣಿಕರ ಅನುದಾನವೇ ಕೋತವಾದಮೇಲೆ ಇನ್ನು ಸಾರಿಗೆಯ ನಾಲ್ಕೂ ನಿಗಮಗಳ 1.25ಲಕ್ಷ ಅಧಿಕಾರಿಕಾರಿಗಳು ಮತ್ತು ನೌಕರರಿಗೆ ಕೊಡಬೇಕಿರುವ ಸುಮಾರು 2 ಸಾವಿರ ಕೋಟಿ ರೂ.ಗಳನ್ನು ಈ ಸರ್ಕಾರ ಬಿಡುಗಡೆ ಮಾಡುತ್ತದೆಯೇ ಎಂಬ ಪ್ರಶ್ನೆ ನಿಗಮಗಳಲ್ಲಿ ಕಾಡುತ್ತಿದೆ.

ಇನ್ನು ಈ ಎಲ್ಲವನ್ನು ಗಮನಿಸಿದರೆ ರಾಜ್ಯದಲ್ಲಿ ಹೆಚ್ಚು ದಿನಗಳವರೆಗೆ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿತ್ತಾರೆ ಎಂದು ಹೇಳುವುದು ಕೂಡ ಸಾಧ್ಯವಾಗುವುದಿಲ್ಲವೇನೋ ಎನಿಸುತ್ತಿದೆ.

 

 

Leave a Reply

error: Content is protected !!
LATEST
2086 ಮಂದಿ ಸರ್ಕಾರಿ ನೌಕರರ ಬಳಿಯು ಇವೆ ಬಿಪಿಎಲ್ ಕಾರ್ಡ್‌ಗಳು ! KKRTC ಬಸ್‌ನಲ್ಲಿ ಮರೆತುಹೋಗಿದ್ದ ₹3 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿ ಮಾನವೀಯತೆ ಮೆರೆದ ಕಂಡಕ್ಟರ್‌ ಅಡ್ಡಾದಿಡ್ಡಿ ಲಾರಿ ಓಡಿಸಿದ ಕೋಪದಲ್ಲಿ ಚಾಲಕನ ಹತ್ಯೆಗೈದ ಐವರ ಬಂಧನ ಪಿಡಿಒ ಹುದ್ದೆಗೆ ಸಿದ್ದಪಡಿಸಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ : ಅಭ್ಯರ್ಥಿಗಳಿಂದ ಪ್ರತಿಭಟನೆ ಹೈಪರ್‌ಸಾನಿಕ್ ಕ್ಷಿಪಣಿ ಪರೀಕ್ಷೆ ಸಕ್ಸಸ್‌ – ಈ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆ ಸ್ಯಾಂಡಲ್‌ವುಡ್‌ ಹಿರಿಯ ನಟ ಟಿ.ತಿಮ್ಮಯ್ಯ ಹೃದಯಾಘಾತದಿಂದ ನಿಧನ NWKRTCಯ 27ನೇ ಸಂಸ್ಥಾಪನಾ ದಿನ- 2023-24 ನೇ ಸಾಲಿನ ಅತ್ಯುತ್ತಮ ವಿಭಾಗ, ಉತ್ತಮ ಘಟಕ, ಅತ್ಯುತ್ತಮ ಅಧಿಕಾರಿಗಳಿಗೆ ಪುರಸ... KKRTC ಅಧಿಕಾರಿಗಳ ನಡೆಯಿಂದ ನೊಂದ ತಾಳಿಕೋಟೆ ಘಟಕ ಚಾಲಕನಿಂದ ದಯಾಮರಣಕ್ಕಾಗಿ ರಾಜ್ಯಪಾಲರಿಗೆ ಅರ್ಜಿ KSRTC: ₹30 ಸಾವಿರ ಲಂಚ ಪಡೆದ ಬಳಿಕ ಗುತ್ತಿಗೆ ಚಾಲಕರ ನೇಮಕ - 11 ತಿಂಗಳ ಬಳಿಕ ₹30 ಸಾವಿರದಿಂದ ₹18 ಸಾವಿರಕ್ಕೆ ಇಳಿದ ... ಅಕ್ರಮ ಹಣ ಸಂಪಾದನೆ: ಅಬಕಾರಿ ಉಪ ನಿರೀಕ್ಷಕನಿಗೆ 3 ವರ್ಷ ಕಠಿಣ ಶಿಕ್ಷೆ, ₹50 ಲಕ್ಷ ದಂಡ