ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳು ಅಂದರೆ ಶೇ.90ರಷ್ಟು ಜನರಿಗೆ ತುಂಬಾ ಇಷ್ಟ. ಇನ್ನು ಅದರಲ್ಲಿ ಇರುವ ಕೆಲವೇ ಕೆಲವು ಬೆರಳೆಣಿಕೆಯ ನಿರ್ವಾಹಕರ ವರ್ತನೆ ನೋಡಿದರೆ ಭಾರಿ ಹಿಂಸೆ ಅನಿಸುತ್ತದೆ.
ಆದರೆ, ನಾನು ಕಂಡ ಒಬ್ಬ ನಿಷ್ಠಾವಂತ ಕಂಡಕ್ಟರ್ ಬಗ್ಗೆ ಹೇಳಲೇಬೇಕು. ಊರು ಗೊತ್ತಿಲ್ಲ, ಆದ್ರೆ ತುಳು ಭಾಷೆ ಚೆನ್ನಾಗಿ ಮಾತಾಡ್ತಾರೆ, ಕನ್ನಡ, ಹಿಂದಿ ಎಲ್ಲಾನು ಅವರಿಗೆ ಗೊತ್ತಿದೆ, ಮಂಗಳೂರು – ಮಡಿಕೇರಿ – ಮೈಸೂರು – ಬೆಂಗಳೂರು ಮಾರ್ಗದ ಬಸ್‌ನಲ್ಲಿ ಕಂಡ ಒಬ್ಬ ಅಪರೂಪದ ಕಂಡಕ್ಟರ್ ಇವರು.
ಸದಾ ನಗುಮುಖದ, ಹಸನ್ಮುಖಿ. ಪ್ರತಿಯೊಬ್ಬರನ್ನು ತಮ್ಮವರಂತೆ ಕಾಣುವ ಮನಸ್ಥಿತಿ, ಎಲ್ಲರಿಗೂ ಬಸ್‌ನಲ್ಲಿ ಸೀಟ್ ಸಿಗಬೇಕು ಅಂತ ಸೀಟ್ ಅರೇಂಜ್‌ಮೆಂಟ್, ಪ್ರತಿಯೊಬ್ಬರಿಗೂ ಟಿಕೆಟ್ ಆಗಿದ್ಯಾ ಅಂತ ಮುಂದಿನಿಂದ ಹಿಂದಿನ ತನಕ ಕೇಳಿಕೊಂಡು ಬರುವರು. ರೀತಿ, ಎಲ್ಲರ ಆಧಾರ್ ಕಾರ್ಡ್ ಚೆಕ್ ಮಾಡಿ ಕೆಲಸಕ್ಕೆ ಮೋಸ ಮಾಡದೇ ಟಿಕೆಟ್ ಕೊಡುವ ರೀತಿ, ಹಾಗೇನೇ ಬಸ್ ಇಳಿದು ಹೋಗುವಾಗ ಚಿಲ್ಲರೆ/ ಚೇಂಜ್ ಮರೆತು ಹೋಗ್ತಾರೆ ಅಂತ ಎಲ್ಲರ ಟಿಕೆಟ್ ಆದ್ಮೇಲೆ ಅವರೇ ಕೇಳಿಕೊಂಡು ಬಂದು ಕೊಡುವ ರೀತಿ.
ಇನ್ನು ಅಪರೂಪಕ್ಕೆ ಬಸ್‌ನಲ್ಲಿ ಬಂದವರು ವಾಕರಿಕೆ ಮಾಡುತ್ತಿದ್ದರೆ ಅವವರಿಗೆ ಸೀಟ್ ಅರೇಂಜ್ಮೆಂಟ್ ಮಾಡುವ ರೀತಿ. ಸಿಕ್ಕಾಪಟ್ಟೆ ಗಲಾಟೆ ಮಾಡೋರ್ಗೆ ಅಂದ್ರೆ ನಾರ್ತ್ ಇಂಡಿಯನ್ಸ್‌ಗೆ ಸಪರೇಟ್ ಸೀಟ್ ಮಾಡಿ ಯಾರಿಗೂ ಹರ್ಟ್ ಆಗ್ಬಾರ್ದು ಅನ್ನೋ ತರ ನಡ್ಕೊಳ್ಳುವ ರೀತಿ.
ಎಕ್ಸ್‌ಪ್ರೆಸ್ ಆಗಿದ್ದರೂ ಕೂಡ ಎಲ್ಲ ಕಡೆ ಬಸ್ ನಿಲ್ದಾಣ ಬರುವ ಮೊದಲೇ ಎಚ್ಚರಿಸುವ ರೀತಿ, ಮೊದಲು ಹತ್ತಿದವರಿಗೆ ಸ್ಟ್ಯಾಂಡಿಂಗ್ ಇದ್ದವರಿಗೆ ಸೀಟ್ ಸಿಗಬೇಕು ಅಂತ ನೆಕ್ಸ್ಟ್ ಸ್ಟಾಪ್ ಅಲ್ಲಿ ಯಾರು ಕೂಡ ಕೆಳಗಡೆ ಇರುವವರಿಗೆ ಸೀಟ್ ರಿಸರ್ವ್ ಮಾಡಬಾರದು ಅಂತ ಹೇಳಿ ಮೊದಲು ಬಂದ ಪ್ರಯಾಣಿಕರಿಗೆ ಕೊಡುವ ಆದ್ಯತೆ. ಇವೆಲ್ಲ ನೋಡಿದಾಗ ಇವರ ತಾಳ್ಮೆಗೆ ಒಂದು ಸಲ್ಯೂಟ್ ಕೊಡಲೇಬೇಕು.
ಇನ್ನು ಸಿಕ್ಕಾಪಟ್ಟೆ ರಶ್ ಇದ್ದರೂ ಕೂಡ ತಾಳ್ಮೆಯಿಂದ ಎಲ್ಲರಿಗೂ ಸಹಾಯ ಮಾಡುವ ಇವರ ಮನಸ್ಥಿತಿಗೆ ದೊಡ್ಡ ಸಲಾಂ. ಇಂತಹ ಕಂಡಕ್ಟರ್‌ಗಳು ಎಲ್ಲ ಬಸ್ ಅಲ್ಲಿ ಇರಬೇಕು. ಜರ್ನಿ ಆಯಾಗಿರುತ್ತದೆ ಎಂದು ಮಿಲೆನಿಯರ್ ಕಾವ್ಯಾ ಪುತ್ತೂರು ಎಂಬುವವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ನೋಡಿ ಈ ಕಾವ್ಯಾ ಅವರಿಗೆ ಈ ನಿರ್ವಾಹಕರು ಯಾರು ಎಲ್ಲಿಯವರು ಎಂದು ಗೊತ್ತಿಲ್ಲ. ಆದರೂ ಅವರ ಬಗ್ಗೆ ಇಷ್ಟೊಂದು ಒಳ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆ ಕಂಡಕ್ಟರ್ ಯಾರು ಎಂದರೆ ಮಂಗಳೂರು ವಿಭಾಗದ ಮೂರನೇ ಘಟಕದ ಕಂಡಕ್ಟರ್ ಜಯಂತ ಪೂಜಾರಿ ನಡುಬೖಲು ಎಂಬುವರು.
ಇನ್ನು ಈ ನಿರ್ವಾಹಕರಂತೆ ಬಹುತೇಕ ಎಲ್ಲ ನಿರ್ವಾಹಕರು ಇದ್ದಾರೆ. ಆದರೆ ಅವರು ಬೆಳಕಿಗೆ ಬಂದಿಲ್ಲ ಅಷ್ಟೆ. ಆದರೆ ಜಯಂತ ಪೂಜಾರಿ ನಡುಬೖಲು ಅವರು ಈ ಮೇಡಂ ಅವರ ಕಣ್ಣಿಗೆ ಬಿದ್ದಿದ್ದರಿಂದ ಅವರಿಗೆ ಬರವಣಿಗೆ ಇದ್ದಿದ್ದರಿಂದ ಅವರ ಬೆಳಕಿಗೆ ಬಂದಿದ್ದಾರೆ. ಇದೇ ರೀತಿ ಉಳಿಯ ನಿರ್ವಾಹಕರು ಕೂಡ ಎಲೆ,ರೆ ಕಾಯಿಯಂತೆಯೇ ನಿಮ್ಮ ನಿಷ್ಠವಂತ ಡ್ಯೂಟಿಮಾಡಿ ತಾವಾಗಿಯೇ ಒಂದುದಿನ ಹೊಳೆಯುತ್ತೀರಿ…
Related

You Might Also Like
KSRTC ನೌಕರರ ಸಾಮಾನ್ಯ ಮರಣ ಪ್ರಕರಣಕ್ಕಿದ್ದ 10 ಲಕ್ಷ ರೂ. ಪರಿಹಾರ ಮೊತ್ತ 14 ಲಕ್ಷ ರೂ.ಗಳಿಗೆ ಏರಿಸಿ ಎಂಡಿ ಆದೇಶ
ಪರಿಷ್ಕರಿಸಿದ 14 ಲಕ್ಷ ರೂ. ಪರಿಹಾರ ಮೊತ್ತ ಸೆಪ್ಟೆಂಬರ್ 1-2025ರಿಂದ ಜಾರಿ ಬೆಂಗಳೂರು: 10 ಲಕ್ಷ ರೂ.ಗಳಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕುಟುಂಬ...
KSRTC- ಪ್ರತಿಷ್ಠಿತ ವಿಶ್ವ ದಾಖಲೆ ಸೇರಿದ ಶಕ್ತಿ ಯೋಜನೆ: ಅತೀವ ಸಂತಸ, ಹೆಮ್ಮೆಯ ಕ್ಷಣ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ 2023ರ ಜೂನ್ 11ರಿಂದ ಜಾರಿಗೆ ಬಂದ ಶಕ್ತಿ ಯೋಜನೆ ಪ್ರತಿಷ್ಠಿತ ವಿಶ್ವ ದಾಖಲೆಗೆ ಸೇರ್ಪಡೆ (Golden Book...
KKRTC ವಿಜಯಪುರ: ಸಂಸ್ಥೆ ನಿಯಮವನ್ನೇ ಗಾಳಿಗೆ ತೂರಿ ಮತ್ತೆ ಮತ್ತೆ ನೌಕರರಿಂದ ಸ್ವಂತ ಕಾರನ್ನು ಸರ್ವಿಸ್ ಮಾಡಿಸಿಕೊಳ್ಳುತ್ತಿರುವ ಡಿಎಂ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅದರಲ್ಲೂ ವಿಜಯಪುರ ವಿಭಾಗದಲ್ಲಿ ಇವರ ಬಹುತೇಕ ಎಲ್ಲ ಘಟಕ ವ್ಯವಸ್ಥಾಪಕರು ಸೇರಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳೂ ಅಂಕುಶವಿಲ್ಲದ ಆನೆಯಂತಾಗಿದ್ದಾರೆ. ಅಂದರೆ...
ಕಾವೇರಿ ನದಿಗೆ 31,550 ಕ್ಯೂಸೆಕ್ ನೀರು ಬಿಡುಗಡೆ- ನದಿ ತಟದ ಜನರಿಗೆ ಸೂಚನೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು ಈ ಹಿನ್ನೆಲೆ ಹಳೇ ಮೈಸೂರು ಭಾಗದ ಜೀವನಾಡಿ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಹೀಗಾಗಿ ನದಿ...
BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್ ಪ್ರಯಾಣಿಕರು ಸೇಫ್
ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ...
ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಸಿಗುತ್ತಿದೆ ಮುಕ್ತಿ
ಬೆಂಗಳೂರು: ರಾಜ್ಯ ರಾಜಧಾನಿಯ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆಗೆ ಕೊನೆಗೂ ಇಂದು ಮುಕ್ತಿ ಸಿಗುತ್ತಿದೆ. ಹೌದು! ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಉದ್ಘಾಟನೆ ಆಗುತ್ತಿದೆ. ಇಂದು...
ಸರ್ಕಾರಿ ಬಸ್ ಗಾಜು ಒಡೆದು, ಚಾಲನಾ ಸಿಬ್ಬಂದಿ ಮೇಲೆ ಬೈಕ್ ಸವಾರನಿಂದ ಹಲ್ಲೆ
ಹುಬ್ಬಳ್ಳಿ: ಗದುಗಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸರ್ಕಾರಿ ಸಾರಿಗೆ ಬಸನ್ನು ನಗರದ ಗದಗ ರಸ್ತೆ ಬಳಿ ಬೈಕ್ ಸವಾರನೊಬ್ಬ ಅಡ್ಡಗಟ್ಟಿ ಬಸ್ ಗಾಜು ಒಡೆದು ಹಾಕಿರುವುದಲ್ಲದೆ ಚಾಲಕ ಹಾಗೂ...
ಕೊಟ್ಟ ಚಿನ್ನಾಭರಣ- ನಗದನ್ನು ವಾಪಸ್ ಕೊಡಿಸಿ ಎಂದರೆ 2 ಲಕ್ಷ ಲಂಚಕೊಡಿ ಎಂದ ಪೊಲೀಸರು: ಲೋಕಾಯುಕ್ತ ಖೆಡ್ಡಕ್ಕೆ ಬಿದ್ದರು
ಬೆಂಗಳೂರು: ಕೊಟ್ಟಿರುವ ಆಭರಣ ಮತ್ತು ನಗದನ್ನು ವಾಪಸ್ ಕೊಡಿಸಿ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ನಮಗೆ 2 ಲಕ್ಷ ರೂ. ಲಂಚ ಕೊಟ್ಟರೆ ವಾಪಸ್...
ಭೀಕರ ಅಪಘಾತ: ಲಾರಿಗೆ ಸರ್ಕಾರಿ ಬಸ್ ಡಿಕ್ಕಿ -ಮೂವರ ಸಾವು, 7ಮಂದಿಗೆ ಗಂಭೀರಗಾಯ
ಯಲ್ಲಾಪುರ: ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿೆಉವ ಘಟನೆ ಉತ್ತರಕನ್ನಡ...













