ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಹೆಸರಲ್ಲಿ ಅನೇಕ ಸಂಘಟನೆ ಕಟ್ಟಿಕೊಂಡು ನೌಕರರ ಹಿತ ಕಾಪಾಡುವಲ್ಲಿ ವಿಫಲವಾಗಿವೆ.
ಸಂಘಟನೆಗಳ ನಾಯಕರೇ ನೌಕರರ ನಿತ್ಯದ ಜೀವನವನ್ನು ಒಂದು ಸಾರಿ ತಮ್ಮ ಕಣ್ಣ ಮುಂದೆ ತಂದು ಕೊಳ್ಳಿ… ನಾವು ಮಾಡುವ ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿದೆಯಾ? ಜೀವನ ಸರಿಯಾಗಿ ನಡೆಯುತ್ತಿದೆಯಾ? ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವ? ನೌಕರರ ಕೌಟುಂಬಿಕ ಸಮಸ್ಯೆಗಳು ಏನು ಎಂಬ ಬಗ್ಗೆ ತಮಗೆ ಅರಿವಿದೆಯಾ?
ತಾವುಗಳು ಹತ್ತಾರು ಸಂಘಟನೆ ಕಟ್ಟಿಕೊಂಡು ತಮ್ಮಗಳಲ್ಲೇ ಪೈಪೋಟಿ ಮಾಡುತ್ತಾ, ತಮ್ಮಗಳ ಸಂಘಟನೆಗಳ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ನೌಕರರ ನೈಜ ಸಮಸ್ಯೆಯನ್ನೇ ಮರೆಯುತ್ತಿದ್ದೀರಾ ಅಲ್ವಾ? ನಿಮಗೆ ಇದೇ ಮುಖ್ಯ ವಾಗಿದೆ. ಇದು ನಿಮಗೇ ಸರಿ ಅನಿಸುತ್ತದೆಯೇ ಒಮ್ಮೆ ಯೋಚಿಸಿ.
ನಿಮ್ಮ ಸಂಘಟನೆ ಯಾವುದೇ ಆಗಿರಲಿ, ಬಲ ಎಷ್ಟೇ ಇರಲಿ, ಇದೊಂದು ಬಾರಿ ಎಲ್ಲರೂ ಸೋತು ಬಿಡಿ. ನೌಕರರ ಹಿತಕ್ಕಾಗಿ, ನೌಕರರ ಅನುದಿನದ ಬೇಡಿಕೆ ಈಡೇರಿಕೆಗಾಗಿ, ನೌಕರರ ನೊಂದಿರುವ ಮನಸಿಗಾಗಿ. ನೀವು ಇದೀಗ ಸೋತು ನೌಕರರ ಪರವಾಗಿ ನಿಂತುಬಿಡಿ.
ಆಗ ಮಾತ್ರ ನಿಮ್ಮ ಸಂಘಟನೆಗಳು ನೌಕರರ ಮನಸಲ್ಲಿ ಉಳಿಯುತ್ತವೆ ಜತೆಗೆ ನಿಮ್ಮ ಅಸ್ತಿತ್ವವೂ ಉಳಿಯುತ್ತದೆ. ಸರ್ಕಾರ ಕೂಡಾ ನಿಮ್ಮಗಳ ದ್ವಂದ ನಿಲುವನ್ನು ಉಪಯೋಗಿಸಿಕೊಂಡು ನೌಕರರ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ತಾ ಇದೆ.
ಬೇರೆ ಇಲಾಖೆಗಳು, ನಿಗಮಗಳ ವೇತನ ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಮತ್ತು ಆಡಳಿತ ಮಂಡಳಿ ಜತೆಗೆ ಮಾತನಾಡಿ, ಸರಿ ಸಮಾನ ವೇತನಕ್ಕಾಗಿ ಸಂಸ್ಥೆಯ ಬಹುತೇಕ ಅಧಿಕಾರಿಗಳು, ನೌಕರರ ಒಲವು ಇರುವಾಗ ಅದರ ಕಡೆಗೆ ತಾವೆಲ್ಲರೂ ಒಟ್ಟಾಗಿ ಒಪ್ಪಿ ಸರ್ಕಾರಕ್ಕೆ ಒತ್ತಾಯ ಮಾಡಿ.
ಅಕಸ್ಮಾತ್ ನಮ್ಮದೇ ನಡೆಯಬೇಕು ಅಗ್ರಿಮೆಂಟ್ ಆಗಲೇಬೇಕು ಅನ್ನೋ ಹಾಗಿದ್ರೆ ಸರಿ ಸಮಾನ ವೇತನಕ್ಕೆ ಸಮಾನ ರೀತಿ ಬರುವ ಅಗ್ರಿಮೆಂಟ್ ಮಾಡಿಸಿ ಕೊಡಿ. ಬಂದಿರುವ ಸುಸಮಯದಲ್ಲಿ ತಮ್ಮಗಳ ಸ್ವಾರ್ಥ ನಿಲುವು ನಿರ್ಧಾರ ಬದಿಗೊತ್ತಿ ಒಗ್ಗಟ್ಟಿನಲ್ಲಿ ನಿಂತರೆ ನಮ್ಮಯ ಎಲ್ಲ ಬೇಡಿಕೆಗಳು ಈಡೇರುತ್ತವೆ.
ನಾವೆಲ್ಲರೂ ಅತ್ಯಂತ ವಿನಮ್ರ ವಾಗಿ ಕೇಳೋದು ಇಷ್ಟೇ ಹಿಂದಿನದೆಲ್ಲ ಬಿಟ್ಟು ಸರ್ಕಾರದ ಜತೆಗೆ ಒಗ್ಗಟ್ಟಿನಲ್ಲಿ ತಮ್ಮಗಳ ಅಭಿಪ್ರಾಯ ಮಂಡಿಸಿ, ಈಡೇರಿಸುವಂತೆ ಒತ್ತಾಯಿಸುವುದು ಸೂಕ್ತ.
ಇನ್ನು ಅಧಿಕಾರಿಗಳ ಸಂಘಟನೆಗಳ ಮುಖಂಡರು ಕಳೆದ 2024ರ ಅಕ್ರೋಬರ್‌ನಲ್ಲಿ ಮತ್ತು ಅದರ ನಂತರ ಒಂದೆರಡು ಬಾರಿ ವೇತನ ಆಯೋಗದಂತೆ ವೇತನ ಕೊಡಿ ಎಂದು ಸರ್ಕಾರಕ್ಕೆ ಹಾಗೂ ಸಾರಿಗೆ ಸಚಿವರಿಗೆ ಮನವಿ ಕೊಟ್ಟಿದ್ದು ಬಿಟ್ಟರೆ ಮತ್ತೆ ಏನನ್ನು ಮಾಡಲಿಲ್ಲ. ಜತೆಗೆ ಮುಷ್ಕರವನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಲಿಲ್ಲ. ಇದರಿಂದ ಸರ್ಕಾರ ಇನ್ನಷ್ಟು ವಿಳಂಬಧೋರಣೆ ತಳಿಯುವುದಕ್ಕೆ ದಾರಿಯಾಯಿತು.
ಇನ್ನಾದರೂ ಅಧಿಕಾರಿಗಳ ಸಂಘಟನೆಗಳ ಮುಖಂಡರು ಈ ಬಗ್ಗೆ ಎಚ್ಚೆತ್ತು ನಾವೆಲ್ಲರೂ ಒಂದೆ ಎಂಬ ನಿಲುವಿನೊಂದಿಗೆ ಹೋದರೆ ಸರ್ಕಾರ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ ಈಗ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಜತೆಗೆ ಅದರ 16 ತಿಂಗಳ ವೇತನ ಹಿಂಬಾಕಿಯನ್ನು ಕೊಡಲು ಒಪ್ಪುತ್ತದೆ. ಇದಕ್ಕೆ ಸಂಘಟನೆಗಳ ಮುಖಂಡರು ಒಮ್ಮತದಿಂದ ನಡೆದುಕೊಳ್ಳಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.
Related

You Might Also Like
ಸಾರಿಗೆ ನೌಕರರು ಮುಷ್ಕರ ಹೂಡುವುದಾಗಿ ಕೊಟ್ಟ ಮುಷ್ಕರದ ನೋಟಿಸ್ ಸಂಬಂಧ ನಿರ್ದೇಶನ ಕೋರಿ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದ ಎಂಡಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಆ.5ರಿಂದ...
ಸಾರಿಗೆ ನೌಕರರ ಮುಷ್ಕರದ ಬಗ್ಗೆ ನನ್ನ ಅಭಿಪ್ರಾಯ-ಅನಿಸಿಕೆಗಳು
ಸಾರಿಗೆ ಮುಷ್ಕರ ಎಂಬುದು ಎಲ್ಲಾ ಅಧಿಕಾರಿಗಳು ಮತ್ತು ನೌಕರ ಸಿಬ್ಬಂದಿಗಳ ವೇತನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ.ಎಲ್ಲರೂ ಒಗ್ಗಟ್ಟಿನಿಂದ ಒಟ್ಟಾಗಿ ಮುಷ್ಕರ ಮಾಡಬೇಕಾಗಿದೆ. ಆದರೆ ನಮ್ಮ ನಿಗಮದಲ್ಲಿ ಅಧಿಕಾರಿಗಳು ಮತ್ತು ಆಡಳಿತ...
ಡಿ.31ರವರೆಗೆ ಸಾರಿಗೆ ನೌಕರರು ಮುಷ್ಕರ ಮಾಡದಂತೆ ಎಸ್ಮಾಜಾರಿ ಮಾಡಿದ ಸರ್ಕಾರ- ಎಸ್ಮಾ ಜಾರಿ ಮಾಡಿದರೆ ಮುಷ್ಕರಕ್ಕೆ ಅವಕಾಶವಿಲ್ಲವೇ? ತಜ್ಞರ ಹೇಳಿಕೆ ಏನು?
ಬೆಂಗಳೂರು: ತಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಬಾಗಿಲು ಬಡಿದು ಸುಸ್ತಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಜುಲೈ 29ರಿಂದ...
KSRTC ನೌಕರರ ವೇತನ ಹೆಚ್ಚಳ ಸಂಬಂಧ ಉಪವಾಸ ಸತ್ಯಾಗ್ರಹ ಮಾಡುವ ಕುರಿತು ಜು.18ರಂದು ಸುದ್ದಿಗೋಷ್ಠಿ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜು.29ರಿಂದ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ...
ಜು.29ರೊಳಗೆ KSRTC ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ: ಎಂಡಿಗೆ ಒಕ್ಕೂಟ ಮನವಿ
ಬೆಂಗಳೂರು: ಇಲ್ಲಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಇದೇ ಜುಲೈ...
ಬೀಡನಹಳ್ಳಿ: ಸಂಭ್ರಮದ ಚಾಮುಂಡೇಶ್ವರಿ ವರ್ಧಂತಿ – ಭಕ್ತರಿಗೆ ಅನ್ನಸಂತರ್ಪಣೆ
ಮೈಸೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದಲ್ಲಿ ಇಂದು (ಜು.17) ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆಯಲ್ಲಿ ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬೀಡನಹಳ್ಳಿ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಪೂಜಾ ಕೈಂಕರ್ಯಗಳು...
ಕೊಪ್ಪಳ: ಭಾರೀ ಮಳೆಗೆ ಕುಸಿದ ಮನೆ ಒಂದೂವರೆ ವರ್ಷದ ಮಗು ಸಾವು, 6 ಮಂದಿಗೆ ಗಾಯ
ಕೊಪ್ಪಳ: ಭಾರೀ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗುವೊಂದು ಮೃಪಟ್ಟಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮನೆ...
ದ.ಕ.ದಲ್ಲಿ ವರುಣನ ಅಬ್ಬರ- ಮಣ್ಣಗುಂಡಿ ಬಳಿ ಗುಡ್ಡಕುಸಿತ: BM ಹೆದ್ದಾರಿ ಬಂದ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದ ಹಿನ್ನೆಲೆ ಕಡಬ ತಾಲೂಕಿನ ಮಣ್ಣಗುಂಡಿ ಬಳಿ ಭೂಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಆದರೂ ಧರ್ಮಸ್ಥಳ,...
ಅತ್ತಹಳ್ಳಿಯ ಎ.ಸಿ.ಲಿಂಗೇಗೌಡರ ಪುತ್ರ ರಾಘವ ಲಿಂಗೇಗೌಡ ನಿಧನ
ಮೈಸೂರು: ನಗರದ ತಿ.ನರಸೀಪುರ ರಸ್ತೆಯ ಜಿ.ಎಲ್.ಗಾರ್ಡನ್ ನಿವಾಸಿ ಲಂಡನ್ನಲ್ಲಿ ಕೆಲಸದಲ್ಲಿದ್ದ ರಾಘವ ಲಿಂಗೇಗೌಡ (49) ಬುಧವಾರ ಸಂಜೆ ನಿಧನರಾದರು. ಮೂಲತಃ ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಅತ್ತಹಳ್ಳಿ...