ಶಿವಮೊಗ್ಗ/ ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್ನಿಂದ ಚಿನ್ನಾಭರಣವಿರುವ ಪರ್ಸ್ ಕಳ್ಳತನ ಪ್ರಕರಣಗಳು ಮುಂದುವರೊದಿದ್ದು, ಮಹಿಳೆಯೊಬ್ಬರ ಬ್ಯಾಗಿನಿಲ್ಲಿದ್ದ 5.72 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಖದೀಮರು ಕದ್ದು ಪರಾರಿಯಾಗಿರುವ ಮತ್ತೊಂದು ಘಟನೆ ನಡೆದಿದೆ.
ಮೊನ್ನೆಯಷ್ಟೆ ಮಂಡ್ಯ ಕೇಂದ್ರ ಬಸ್ ನಿಲ್ದಾಣದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ನೆರಲಕೆರೆ ಗ್ರಾಮದ ಮಹೇಶ್ ಎಂಬುವರ ಮಗಳ ಸುಮಾರು 2.80 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಅದು ಮಾಸುವ ಮನ್ನವೇ ಮತ್ತೆ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಕಳವಾಗಿದೆ.
ಎನ್.ಆರ್.ಪುರದ ಮುಡುಬ ಕೊಣಕೆರೆ ನಿವಾಸಿ ಶಶಿಕಲಾ ಅವರು ಶಿವಮೊಗ್ಗದಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ನ.23ರಂದು ಚಿತ್ರದುರ್ಗಕ್ಕೆ ಪ್ರಯಾಣಿಸಿದ್ದರು. ಆ ವೇಳೆಯೇ ಬ್ಯಾಗಿನಿಲ್ಲಿದ್ದ 5.72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿವೆ. ಅಂದಿನಿಂದ ಮಗಳ ಮನೆಯಲ್ಲಿದ್ದರು. ಬಳಿಕ ನ.26ರಂದು ಮದುವೆ ಸಮಾರಂಭಕ್ಕೆ ತಯಾರಾಗಲು ವ್ಯಾನಿಟಿ ಬ್ಯಾಗ್ ತೆಗೆದಾಗ ಪರ್ಸ್ ನಾಪತ್ತೆಯಾಗಿತ್ತು.
ಈ ವೇಳೆಯ ಚಿನ್ನಾಭರಣವಿದ್ದ ಪರ್ಸ್ ಕಳವಾಗಿರುವುದು ಗೊತ್ತಾಗಿದೆ, ಬಳಿಕ ಪೊಲೀಸ್ ಠಾಣೆಗೆ ಹೋಗಿ ಈ ಸಂಬಂಧ ದೂರು ನೀಡಿದ್ದಾರೆ.
ಆ ದೂರಿನಲ್ಲಿ ಶಶಿಕಲಾ ಕೆಂಪು ಬಣ್ಣದ ಪರ್ಸ್ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಇಟ್ಟಿದ್ದು, ಬಂಗಾರದ ಎರಡು ಸರಗಳು, ಎರಡು ಬಳೆ ಇದ್ದವು. ಅವುಗಳ ಮೌಲ್ಯ ಅಂದಾಜು 5.72 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗದಲ್ಲಿ ಬಸ್ ಹತ್ತುವ ವೇಳೆ ರಶ್ ಇತ್ತು. ಆಗ ವ್ಯಾನಿಟಿ ಬ್ಯಾಗ್ನ ಜಿಪ್ ತೆಗೆದು ಪರ್ಸ್ ಕಳ್ಳತ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಒಟ್ಟಾರೆ ಉಚಿತ ಬಸ್ ಪ್ರಯಾಣ ಸೇವೆ ಮಹಿಳೆಯರಿಗೆ ಆರಂಭವಾದ ದಿನದಿಂದ ಪ್ರತಿದಿನವೂ ಒಂದಲ್ಲವೊಂದು ರೀತಿಯಲ್ಲಿ ಮಹಿಳೆಯರು ಲಕ್ಷಾರ ರೂಪಾಯಿ ಬೆಲೆಬಾಳುವ ಬಂಗಾರದ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ.