NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ಘಟಕಕ್ಕೆ ಬಂದರೂ ಡ್ಯೂಟಿ ಸಿಗದಿದ್ದಾಗ ಕೆಲಸದ ಸಮಯ ಡಿಪೋದಲ್ಲೇ ಇದ್ದರೆ ಹಾಜರಾತಿ ಸಿಗುತ್ತದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಚಾಲನಾ ಸಿಬ್ಬಂದಿ ಘಟಕಕ್ಕೆ ಹಾಜರಾಗಿ ಅವರಿಗೆ ಡ್ಯೂಟಿ ಸಿಗದೆ ಹೋದರೆ ಅವರು, ಡಿಪೋದಲ್ಲೇ ಕೆಲಸದ ಸಮಯದಲ್ಲಿ ಇದ್ದರೆ ಅಂಥವರಿಗೆ ಹಾಜರಾತಿ (Attendance) ನೀಡಲಾಗುವುದು ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಹೌದು! ಚಾಲನಾ ಸಿಬ್ಬಂದಿಗಳಾದ ಚಾಲಕರು ಮತ್ತು ನಿರ್ವಾಹಕರು ಘಟಕಕ್ಕೆ ಹಾಜರಾಗಿ ಡ್ಯೂಟಿ ಕೊಡುವಂತೆ ಕೇಳಿದರು ಕೆಲ ಸಂದರ್ಭದಲ್ಲಿ ಕೆಲ ಚಾಲನಾ ಸಿಬ್ಬಂದಿಯನ್ನು ಕೆಲಸಕ್ಕೆ ಕಳುಹಿಸುವುದಿಲ್ಲ. ಈ ಸಂದರ್ಭದಲ್ಲಿ ಡ್ಯೂಟಿ ಸಿಗದ ನೌಕರರು ಘಟಕದಲ್ಲೇ ಡ್ಯೂಟಿ ಸಮಯವನ್ನು ಕಳೆದರೆ ಅವರಿಗೆ ಹಾಜರಾತಿ (Attendance) ಕೊಡಗುವುದು ಎಂದು ಡಿಸಿ ತಿಳಿಸಿದ್ದಾರೆ.

ಡಿಪೋಗೆ ಹಾಜರಾದರೂ ಕೆಲ ನೌಕರರಿಗೆ ಡ್ಯೂಟಿ ಸಿಗದ ಸಂದರ್ಭದಲ್ಲಿ ಅಂಥ ನೌಕರರಿಂದ ರಜೆಕೊಟ್ಟು ಹೋಗಿ ಎಂದು ಡಿಪೋ ವ್ಯವಸ್ಥಾಪಕರೋ ಇಲ್ಲ ಟಿಐ, ಎಟಿಎಸ್‌, ಟಿಸಿ ಇವರಲ್ಲಿ ಯಾರಾದರೊಬ್ಬರು ಹೇಳುತ್ತಾರೆ. ಈ ವೇಳೆ ನಾನು ಡ್ಯೂಟಿಗೆ ಹೋಗುವುದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು ಆ ನೌಕರನ ಮಾತು ಕೇಳಿಸಿಕೊಳ್ಳುವುದಿಲ್ಲ.

ನಮಗೆ ಅದೆಲ್ಲ ಗೊತ್ತಿಲ್ಲ ಇಂದು ನಿನಗೆ ಡ್ಯೂಟಿ ಸಿಕ್ಕಿಲ್ಲ ಎಂದರೆ ರಜೆಚೀಟಿ ಕೊಟ್ಟುಹೋಗು ಇಲ್ಲ ಗೈರುಹಾಜರಿ ತೋರಿಸಬೇಕಾಗುತ್ತದೆ ಎಂದು ಹೆದರಿಸುತ್ತಾರೆ. ಈ ವೇಳೆ ವಿಧಿಯಿಲ್ಲದೆ ಡ್ಯೂಟಿ ಸಿಗದ ನೌಕರರು ಅವಶ್ಯವಿಲ್ಲದಿದ್ದರೂ ರಜೆಚೀಟಿ ಕೊಟ್ಟು ಹೋಗುತ್ತಾರೆ.

ಹೀಗಾಗಿ ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವ ಸಲುವಾಗಿ ಗಣೇಶ ಚ.ಹಿತ್ತಲಮನಿ ಎಂಬುವರು ಕಳೆದ 29.12.2020ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆ 2025ರಡಿ ಈ ಬಗ್ಗೆ ಮಾಹಿತಿ ಕೇಳಿದ್ದರು.

ಗಣೇಶ ಚ.ಹಿತ್ತಲಮನಿ ಅವರು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ಕರ್ತವ್ಯ ಸಿಗದೆ ಹೋದಾಗ ಆ ದಿನದ ಹಾಜರಿಯನ್ನು ಹಾಜರಿ ಪುಸ್ತಕದಲ್ಲಿ ಏನೆಂದು ಪರಿಗಣಿಸುತ್ತೀರಿ ಎಂದು ಕೇಳಿದ್ದರು.

ಗಣೇಶ ಅವರು ಕೇಳಿದ ಮಾಹಿತಿಯನ್ನು ಕೊಟ್ಟಿರುವ ಡಿಸಿ ಅವರು ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕಾಗಿ ಘಟಕಕ್ಕೆ ಬಂದಾಗ ಕರ್ತವ್ಯ ಸಿಗದೆ ಇದ್ದಲ್ಲಿ ಅನುಸೂಚಿ ಪ್ರಾರಂಭವಾದಾಗಿನಿಂದ ಅನುಸೂಚಿ ಮುಗಿಯುವವರೆಗೂ ಘಟಕದಲ್ಲಿ ಹಾಜರಿದ್ದರೆ ಮಾತ್ರ ಹಾಜರಾತಿ ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಹೀಗಾಗಿ ಯಾವುದೇ ಚಾಲನಾ ಸಿಬ್ಬಂದಿಗೆ ತಾವು ಘಟಕಕ್ಕೆ ಹೋದಾಗ ಕರ್ತವ್ಯ ಸಿಗದೆ ಹೋದರೆ ಅಂಥವರು ಘಟಕದಲ್ಲೆ ಇದ್ದರೆ ಹಾಜರಾತಿ ಪಡೆಯಬಹುದು. ಒಂದು ವೇಳೆ ನೀವು ಘಟದಲ್ಲಿ ಇಲ್ಲದಿದ್ದರೆ ಗೈರುಹಾಜರಿ ತೋರಿಸುವುದಕ್ಕೆ ಡಿಎಂಗೆ ಅಧಿಕಾರವಿದೆ.

ಇಲ್ಲ ತಾವು ಘಟಕದಲ್ಲಿ ಇದ್ದರೂ ಡಿಎಂ ಗೈರು ಹಾಜರಿ ತೋರಿಸಿದರೆ ಆ ವೇಳೆ ನೀವು ನಿಗಮದ ನಿಯಮಗಳನ್ವಯ ಡಿಎಂ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಬಹುದು. ಒಂದು ವೇಳೆ ನೀವು ನೀಡಿದ ದೂರಿಗೆ ಮೇಲಧಿಕಾರಿಗಳು ಸ್ಪಂದಿಸದೆ ಹೋದರೆ ಕೋರ್ಟ್‌ ಮೆಟ್ಟಿಲೇರುವ ಮೂಲಕ ನೀವು ನ್ಯಾಯ ಪಡೆದುಕೊಳ್ಳಬಹುದು ಎಂದು ನಿಗಮದ ನಿವೃತ್ತ ಕಾನೂನು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಒಟ್ಟಾರೆ ನೌಕರರು ಕೆಲಸಕ್ಕೆ ಹಾಜರಾದ ವೇಳೆ ಡ್ಯೂಟಿ ಕೊಡದಿದ್ದರೆ ಇನ್ನು ಮುಂದೆ ಯಾವುದೇ ಚಾಲನಾ ಸಿಬ್ಬಂದಿ ರಜೆ ಚೀಟಿ ಕೊಡುವ ಅವಶ್ಯಕತೆಯಿಲ್ಲ, ಬದಲಿಗೆ ತಾವು ಕಾರ್ಯಾಚರಣೆ ಗೊಳಿಸುವ ಮಾರ್ಗದ ಸಮಯದವರೆಗೂ ಡಿಪೋದಲ್ಲೇ ಇದ್ದರೆ ನಿಮಗೆ ಹಾಜರಾತಿ ಸಿಗುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅಧಿಕಾರಿಯೇ ಸ್ಪಷ್ಟವಾಗಿ ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ