ಮಂಡ್ಯ: ವಿಚಾರಣೆ ನೆಪದಲ್ಲಿ ಮಂಡ್ಯದ ಪೂರ್ವ ಠಾಣಾ ಪೊಲೀಸರು ಮಹಿಳೆ ಮೇಲೆ ತೀವ್ರ ಹಲ್ಲೆ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು ಮಹಿಳೆ ಪರ ಇಂದು ಹೋರಾಟ ಮಾಡುವುದಕ್ಕೆ ನಿರ್ಧರಿಸಿದ್ದಾರೆ.
ರೂಪಾದೇವಿ ಎಂಬ ಮಹಿಳೆಯ ಹಸುವೊಂದು ದಾರಿಯಲ್ಲಿ ತೆರಳುತ್ತಿದ್ದ ಮಹಿಳಾ ಪೇದೆಯ ಸ್ಕೂಟರ್ಗೆ ಅಡ್ಡ ಬಂದಿದ್ದರಿಂದ ಮಹಿಳಾ ಪೇದೆ ವನಜಾಕ್ಷಿ ಬಿದ್ದು ಗಾಯಗೊಂಡಿದ್ದರು. ಬಳಿಕ ಪೇದೆ ವನಜಾಕ್ಷಿ ಸ್ಕೂಟರ್ನಿಂದ ಬಿದ್ದು ಗಾಯಗೊಂಡಿರುವುದಕ್ಕೆ ಪರಿಹಾರ ಕೊಡಬೇಕು ಎಂದು ರೂಪಾದೇವಿಗೆ ಒತ್ತಡ ಹಾಕುತ್ತಿದ್ದಾರೆ.
ಈ ವೇಳೆ ಹಣ ನೀಡದಿದ್ದಕ್ಕೆ ವಿಚಾರಣೆ ನೆಪದಲ್ಲಿ ರೂಪಾದೇವಿಯನ್ನು ಠಾಣೆಗೆ ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡು ಮಹಿಳಾ ಪೇದೆ ವನಜಾಕ್ಷಿ ಹಲ್ಲೆ ಮಾಡಿರುವುದನ್ನು ಜಿಲ್ಲೆಯ ಹೋರಾಟಗಾರರು ಖಂಡಿಸಿದ್ದು, ಮಹಿಳೆ ರೂಪಾದೇವಿ ಪರ ಹಾಗೂ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.