ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಟೈಯರ್ ಸ್ಫೋಟಗೊಂಡು ರಸ್ತೆಯ ತಡೆಗೋಡೆಗೆ ಗುದ್ದಿ ಜಖಂಗೊಂಡಿರುವ ಘಟನೆ ತಾಲೂಕಿನ ಮೆಣಸಿಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ನಿನ್ನೆ ಸಂಜೆ ನಡೆದಿದೆ.
ಘಟನೆ ವೇಳೆ ಚಾಲಕ ಚಾಲಕ ಮುನಿಶ್ಯಾಮಪ್ಪ ಅವರ ಸಮಯ ಪ್ರಜ್ಞೆಯಿಂದ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ನಿಯಂತ್ರಣಕ್ಕೆ ಬಂದಿದ್ದರಿಂದ ಆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಬಸ್ ಸೂಲಿಕುಂಟೆ-ದೊಡ್ಡಬಳ್ಳಾಪುರ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಬರುತ್ತಿತ್ತು. ಈ ವೇಳೆ ಟೈಯರ್ ಸ್ಫೋಟಗೊಂಡಿದ್ದು ಅವಘಡ ಸಂಭವಿಸಿದೆ.
ಟೈಯರ್ ರೀ ಬಿಲ್ಡ್ ಆಗಿದ್ದು, ಬಸ್ಸಿನ ಟೈಯರ್ ಸ್ಫೋಟಗೂಳ್ಳಲು ಕಾರಣ ಎಂದು ಸ್ಥಳೀಯರು ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಟೈಯರ್ ಸ್ಫೋಟಗೊಂಡ ತಕ್ಷಣವೇ ಚಾಲಕ ತಡೆಗೋಡೆಯ ಕಡೇ ಬಸ್ ಚಲಿಸದಿದ್ದರೆ ಭಾರಿ ಅನಾಹುತವೆ ಆಗುತ್ತಿತ್ತು ಎಂದು ತಿಳಿಸಿದ್ದಾರೆ.
ಇನ್ನು ಒಂದು ವೇಳೆ ತಡೆಗೋಡೆ ಇಲ್ಲದಿದ್ದಲ್ಲಿ ಬಸ್ ಹಳ್ಳಕ್ಕೆ ಬೀಳುತ್ತಿತ್ತು. ಒಂದು ವೇಳೆ ಹಳ್ಳಕ್ಕೆ ಬಸ್ ಬಿದ್ದಿದ್ದರೆ ಎಂಥ ಅನಾಹುತ ಆಗುತ್ತಿತ್ತು ಎಂದು ನೆನಪಿಸಿಕೊಂಡು ಮೈ ನಡುಗುತ್ತದೆ. ಇದರಿಂದ ಅಪಾರ ಸಾವು ನೋವು ಆಗುವ ಸಾಧ್ಯತೆ ಇತ್ತು. ಸದ್ಯ ಚಾಲಕನ ಸಮಯ ಪ್ರಜ್ಞೆಯಿಂದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಚಾಲಕನ ಸಮಯ ಪ್ರಜ್ಞೆಯನ್ನು ಪ್ರಯಾಣಿಕರೆ ಪ್ರಶಂಸಿದ್ದಾರೆ.

Related
