NEWSನಮ್ಮಜಿಲ್ಲೆ

KSRTC: ಬಸ್‌ನಲ್ಲಿ ಪ್ರಯಾಣಿಸುವುದಕ್ಕೆ ಬಿಡದೆ ಸಹೋದ್ಯೋಗಿಯನ್ನೇ ಇಳಿಸುವುದು ಆತನ ವೃತ್ತಿಯನ್ನೇ ಅವಮಾನಿಸಿದಂತೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚಿಕ್ಕಮಗಳೂರು – ಹಾಸನ – ಬೆಂಗಳೂರು ಮಾರ್ಗದಲ್ಲಿ ಓಡಾಡುವ ನಿಗಮದ ನೌಕರರಿಗೆ ತಡೆರಹಿತ ಬಸ್‌ಗಳಲ್ಲಿ ಓಡಾಡುವುದಕ್ಕೆ ಅವಕಾಶವಿಲ್ಲ ಎಂದು ನೌಕರನೇ ತನ್ನ ಸಹೋದ್ಯೋಗಿಯನ್ನು ಕೆಳಗಿಳಿಸಿದ ಘಟನೆ ಶುಕ್ರವಾರ ನಡೆದಿದ್ದು ಮನಸ್ಸಿಗೆ ಭಾರಿ ನೋವುಂಟು ಮಾಡಿದೆ.

ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಕೆಲ ನೌಕರರಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬ ನೌಕರನಿಗೆ ಆಗುವುದಿಲ್ಲ. ಇದರಿಂದ ನೌಕರರ ನಡುವೆಯೇ ತಿಕ್ಕಾಟ ಉಂಟಾಗುತ್ತಿದೆ. ಈ ಬಗ್ಗೆ ಕಳೆದ 2023ರ ಜುಲೈ 7ರಂದು ವಿಜಯಪಥ ವರದಿ ಮಾಡಿ ಅರಿವು ಮೂಡಿಸಿತ್ತು. ಆದರೆ, ಮಾ.29ರ ಶುಕ್ರವಾರ ಮತ್ತೆ ಸಹೋದ್ಯೋಗಿ ಒಬ್ಬರನ್ನು ಬಸ್‌ನಿಂದ ಕೆಳಗಿಳಿಸಿದ ಘಟನೆ ನಡೆದಿದೆ.

ಇದನ್ನು ಗಮನಿಸಿದ ನಿಮ್ಮನ್ನು ನೀವೆ ಹೀಯಾಳಿಸಿಕೊಂಡು ನಿಮ್ಮ ಸಹೋದ್ಯೋಗಿಯನ್ನೇ ಕೆಳಗಿಳಿಸುವುದು ನಿಮಗೆ ಎಷ್ಟರ ಮಟ್ಟಿಗೆ ಸರಿ ಎನಿಸುತ್ತದೆ? ಏಕೆ ಹೀಗೆ ಮಾಡುತ್ತೀರಿ. ಇನ್ನಾದರೂ ನಿಮ್ಮವರನ್ನು ನೀವು ಗೌರವಿಸುವುದನ್ನು ಕಲಿಯಿರಿ. ಹೀಗೆ ಮಾಡುವುದರಿಂದ ಸಾರ್ವಜನಿಕರ ಮುಂದೆ ಮಿಗಮದ ಗೌರವವು ಕುಂದುತ್ತದೆ.

ಸಾರ್ವಜನಿಕವಾಗಿ ಬಸ್‌ನಲ್ಲೇ ಮತ್ತೊಬ್ಬ ನೌಕರನನ್ನು ಏಕವಚನದಲ್ಲಿ ಕರೆದು ಕೆಳಗಿಳಿಯಪ್ಪ ಎಂದು ಹೇಳುವುದರಿಂದ ಸಾಮಾನ್ಯ ಜನರಿಗೆ ನಿಮ್ಮ ಬಗ್ಗೆ ಏನು ಸಂದೇಶ ಹೋಗುತ್ತದೆ, ನಿಮ್ಮನ್ನು ಯಾವ ರೀತಿ ನೋಡುತ್ತಾರೆ ಎಂಬುವುದರ ಪರಿಜ್ಞಾನ ಬೇಡವೇ. ಇನ್ನಾದರೂ ಇದನ್ನು ಬಿಡಿ ಸಹೋದ್ಯೋಗಿಗಳನ್ನು ಗೌರವಿಸುವುದನ್ನು ಮೊದಲು ಕಲಿಯಿರಿ.

ನೀವು ಒಗ್ಗಟ್ಟಾಗಿಲ್ಲದೆ ಇರುವುದರಿಂದ ಕಳೆದ 2021ರ ಜನವರಿಯಲ್ಲಿ ಆಗುತ್ತಿದ್ದ ಸಮಾನ ವೇತನ ಹಳ್ಳ ಹಿಡಿಯಿತು. ಇದರಿಂದ ಸುಮಾರು 82 ಸಾವಿರ ವೇತನಪಡೆಯಬೇಕಾದವರು ಇಂದು ಕೇವಲ 42-43 ಸಾವಿರ ರೂಪಾಯಿ ಪಡೆಯುವುವಂತಾಗಿದೆ. ಅಂದರೆ ನಿಮಗೆ ಸರಿಯಾದ ಸೌಲಭ್ಯ ಪಡೆಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಬೇರೆ ಯಾರು ಅಲ್ಲ ಹೇಳಿಕೆ ಮಾತು ಕೇಳುವ ನೀವೆ.

ಹಾಸನ ನೌಕರರೊಬ್ಬರ ಹೇಳಿಕೆ: ನಾನು ಕೂಡ ನಾನ್‌ಸ್ಟಾಪ್ ಹಾಸನ – ಬೆಂಗಳೂರು ನಡುವೆ ಕೆಲಸ ಮಾಡಿದ್ದೇನೆ. ನಾನು ನಮ್ಮ ಸಹೋದ್ಯೋಗಿಗಳನ್ನು ನಾಲ್ಕರಿಂದ ಐದು ಜನ ಪ್ರತಿ ಟ್ರಿಪ್ಪಿನಲ್ಲೂ ಕರೆದುಕೊಂಡು ಬಂದಿದ್ದೇನೆ. ಇನ್ನು ಈ ಬಗ್ಗೆ ನಮ್ಮ ನಾಲ್ಕೂ ನಿಗಮಗಳಿಂದ ಕರೆದುಕೊಂಡು ಬರಬಾರದು ಎಂಬ ನಿಯಮವಿಲ್ಲ ಎಂದು ಅಧಿಕಾರಿಗಳೇ RTIನಡಿ ಮಾಹಿತಿ ನೀಡಿದ್ದಾರೆ.

ಇಷ್ಟಾದರೂ ದಾರಿ ಮಧ್ಯದಲ್ಲಿ ಚಾಲಕ -ನಿರ್ವಾಹಕರು ತಮ್ಮ ಸಹೋದ್ಯೋಗಿಗಳ ನಡುವೆಯೇ ಜಗಳವಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ನೀವು ಯಾವುದೇ ಸಂಘಅನೆಯಲ್ಲಿ ಗುರುತಿಸಿಕೊಳ್ಳಿ ಆದರೆ ಮೊದಲು ಸಹೋದ್ಯೋಗಿಗಳನ್ನು ಗೌರವಿಸುವುದ ಕಲಿಯಿಸಿ. ಇದರಿಂದ ನಿಮ್ಮ ಸೇವೆಗೂ ಘನತೆ ಹೆಚ್ಚಾಗುತ್ತದೆ.

ಅದನ್ನು ಬಿಟ್ಟು ಬಸ್‌ನಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ನೀವು ಫೋನ್‌ನಲ್ಲಿ ವಿಡಿಐಓ ಮಾಡಿ, ನಾನು ಯಾವುದೇ ಕಾರಣಕ್ಕೂ ಕರೆದುಕೊಂಡು ಹೋಗುವುದಿಲ್ಲ. ಇದು ನಾನ್‌ಸ್ವಾಟ್‌ ಬಸ್‌ ಎಂದು ಹೇಳುವುದು ಸರಿಯಲ್ಲ. ನಾವು ಸ್ಟಾಫ್‌ ಎಂದರೆ ತನಿಖಾಧಿಕಾರಿಗಳು ಐಡಿ ಕಾರ್ಡ್‌ ಕೇಳುತ್ತಾರೆಯೇ ವಿನಾಃ ನೀನು ಇದರಲ್ಲಿ ಏಕೆ ಪ್ರಯಾಣಿಸುತ್ತಿದ್ದೀಯೆ ಎಂದು ಕೇಳುವುದಿಲ್ಲ.

ಹೀಗಾಗಿ ಇನ್ನಾದರೂ ಎಚ್ಚೆತ್ತುಕೊಳ್ಳಿ ಸಹೋದ್ಯೋಗಿಗಳನ್ನು ಆತ್ಮೀಯತೆಯಿಂದ ನಡೆಸಿಕೊಳ್ಳಿ. ಅದನ್ನು ಬಿಟ್ಟು ಬೀದಿ ರಂಪಾಟ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಾರ್ವಜನಿಕರ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾಗಬೇಡಿ ಎಂಬುವುದು ವಿಜಯಪಥದ ಕಳಕಳಿ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ