ಬೆಂಗಳೂರು: ಮಾರ್ಚ್‌ನಲ್ಲಿ ನ್ಯೂಡೆಲ್ಲಿ ಮರ್ಕಜ್ ಹಝರತ್ ನಿಝಾಮುದ್ದೀನ್‌ನಲ್ಲಿ ತಬ್ಲೀಘಿ ಜಮಾತ್ ಸಮಾವೇಶಕ್ಕೆ ಹೋಗಿ ಬಂದವರು ಆರೋಗ್ಯ ತಪಾಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಔಕಾಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಸ್ಲಾಹುದ್ದೀನ್ ಜೆ ಗಡ್ಯಾಲ್ ತಿಳಿಸಿದ್ದಾರೆ.
ಸಮಾವೇಶಕ್ಕೆ, ಕರ್ನಾಟಕ ರಾಜ್ಯದಿಂದ ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ತಮ್ಮ ನಗರಗಳಿಗೆ ಹಾಗೂ ಮನೆಗಳಿಗೆ ಮರಳಿದ್ದಾರೆ. ಈ ಸದಸ್ಯರು ಕೋವಿಡ್ 19 ಸೋಂಕಿಗೆ ಒಳಗಾಗಿರುವ ಸಾಧ್ಯತೆ ಇದೆ.
ನ್ಯೂಡೆಲ್ಲಿಗೆ ಹೋಗಿದ್ದ ಎಲ್ಲರೂ ತಪ್ಪದೇ ಆರೋಗ್ಯ ಇಲಾಖೆಯ ಸಹಾಯವಾಣಿ 080-29711171ಗೆ ಸಂಪರ್ಕಿ ಅಥವಾ ಕೂಡಲೇ ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಟ್ಟದ ಆಸ್ಪತ್ರೆಗೆ ಭೇಟಿ ನಿಡಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಈ ಸದಸ್ಯರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಇಲಾಖೆಯ ಸಹಾಯವಾಣಿ ಆರೋಗ್ಯವನ್ನು 080-29711171ಗೆ ಸಂಪರ್ಕಿಸುವುದು ಅಥವಾ ಕೂಡಲೇ ಹತ್ತಿರದ ಜಿಲ್ಲಾ ಅಥವಾ ತಾಲೂಕು ಮಟ್ಟದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಮತ್ತು ಇದು ಸಮುದಾಯದ ಹಿತದೃಷ್ಟಿಯಿಂದ ಕೂಡಲೇ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಜಿಲ್ಲಾ ವಕ್ಫ್ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಆರೋಗ್ಯ ತಪಾಸಣೆಗೆ ಅಗತ್ಯವಾದ ನೆರವು ಒದಗಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080-46848600, 66692000, 9745697456 ಸಹಾಯವಾಣಿ -ಟಾಲ್ ಫ್ರೀ -104 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.