NEWSದೇಶ-ವಿದೇಶ

‘ಚಂದ್ರ ಮುರಿದು ಬಿದ್ದ ತಾಣ’ ಎಂದೇ ಬಣ್ಣಿಸಲಾಗುವ ಪ್ರವಾಸಿಗರ ಸ್ವರ್ಗ ಲಡಾಖ್‌ಗೆ ದೆಹಲಿಯಿಂದ ಬಸ್‌ ಸೌಲಭ್ಯ

ವಿಜಯಪಥ ಸಮಗ್ರ ಸುದ್ದಿ

ಧರ್ಮಶಾಲಾ: ‘ಚಂದ್ರ ಮುರಿದು ಬಿದ್ದ ತಾಣ’ ಎಂದೇ ಬಣ್ಣಿಸಲಾಗುವ ಪ್ರವಾಸಿಗರ ಸ್ವರ್ಗ ಲಡಾಖ್‌ಗೆ ಇನ್ನು ಮುಂದೆ ದೆಹಲಿಯಿಂದ ಮನಾಲಿ ಮೂಲಕ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ಇನ್ನು ಆಯಾಸಪಟ್ಟುಕೊಂಡು ಬೈಕ್‌ರೈಡ್‌ ಮಾಡುವ ಅಗತ್ಯ ಬರುವುದಿಲ್ಲ.

ಹೌದು! ಈ ಪ್ರವಾಸಿ ತಾಳಕ್ಕೆ ದೇಶದ ನಾನಾಭಾಗಗಳಿಂದ ಜನರು ಬೈಕ್​ ರೈಡ್​ ಮೂಲಕ ಬರುತ್ತಾರೆ. ಹಿಮಾಲಯದ ಗಿರಿ ಶಿಖರಗಳಿಂದ ಕೂಡಿದ ವಿಶ್ವದ ಅತೀ ಎತ್ತರದ ಪ್ರಸ್ಥಭೂಮಿಯಾಗಿರುವ ಈ ತಾಣಕ್ಕೆ ಇದೀಗ ಬಸ್​ ಸಂಚಾರವೂ ಆರಂಭವಾಗಿದ್ದು ಪ್ರವಾಸಿಗರ ಖುಷಿ ಇಮ್ಮಡಿಗೊಳಿಸಿದೆ.

ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು (HRTC) ಈ ಸೇವೆಯನ್ನು ಆರಂಭಿಸಿದೆ. ವಿಶ್ವದ ಎತ್ತರದ ಪ್ರದೇಶ ಲೇಹ್​​ಗೆ ದೆಹಲಿಯಿಂದ ಮನಾಲಿ ಮೂಲಕ ಬಸ್​ ಸಂಚರಿಸುತ್ತಿದ್ದು, ಅದುಕೂಡ ನಿನ್ನೆಯಿಂದ ಅಂದರೆ ಜೂ.11ರಿಂದ ಆರಂಭವಾಗಿದೆ. ಎರಡೂ ಪ್ರದೇಶಗಳ ನಡುವಿನ ದೂರ 981 ಕಿಮೀ ಆಗಿದೆ. ಸುಮಾರು 33 ಗಂಟೆಗಳ ಪ್ರಯಾಣ ಇದಾಗಿದ್ದು, ಇದೇ ಮೊದಲ ಬಾರಿಗೆ ಪ್ರವಾಸಿಗರನ್ನು ಹೊತ್ತ ಮೊದಲ ಬಸ್​ ಸಂಚಾರ ಶುರು ಮಾಡಿದೆ.

ಪ್ರಯಾಣ ದರದ ಮಾಹಿತಿ: ಈ ಬಗ್ಗೆ ಎಚ್​ಆರ್​ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, ದೆಹಲಿಯಿಂದ ಮನಾಲಿ ಮೂಲಕ ಲೇಹ್​ಗೆ ಬಸ್​ ಸಂಚಾರ ಮಾಡುತ್ತಿದೆ. ಇದು ದೇಶದ ನಾಲ್ಕು ದೊಡ್ಡ ಪಾಸ್​ಗಳ (ಟನಲ್​) ಮೂಲಕ ಸಾಗುತ್ತದೆ. ಬರಾಲಾಚಾ ಪಾಸ್ (16,020 ಅಡಿ), ನಕಿಲ್ಲಾ ಪಾಸ್, ಲಾಚುಂಗ್ಲಾ ಪಾಸ್ (16,620 ಅಡಿ) ಮತ್ತು ತಂಗ್ಲಾಂಗ್ಲಾ ಪಾಸ್ (17,480 ಅಡಿ) ದಾಟಿ ಹಿಮಾಚಲದ ಮೂಲಕ ಲಡಾಖ್ ತಲುಪಲಿದೆ.

ಈ ಅದ್ಭುತ ಪ್ರಯಾಣಕ್ಕಾಗಿ ಪ್ರವಾಸಿಗರು ಕೇವಲ 1,627 ರೂಪಾಯಿ ಪಾವತಿಸಬೇಕಷ್ಟೆ. ದೆಹಲಿಯಿಂದ ಲೇಹ್​ವರೆಗಿನ ಮಾರ್ಗದಲ್ಲಿ ಪ್ರಯಾಣ ಸಂತಸವನ್ನು ಬಸ್‌ನಲ್ಲೇ ಕುಳಿತು ಅನುಭವಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಟು ಲೇಹ್ ಪ್ರಯಾಣ: ಈ ಸಮಯದಲ್ಲಿ ಲಡಾಖ್​​ಗೆ ಜನ ಸಾಗರವೇ ಹರಿದು ಬರುವುದರಿಂದ ದೆಹಲಿ ಟು ಲೇಹ್ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಹಿಮಾಚಲದ ಕೀಲಾಂಗ್‌ನಿಂದ ಲೇಹ್‌ಗೆ ಬಸ್​ ಆರಂಭವಾಗಿದೆ. ಕಳೆದ ಬಾರಿ ಈ ಸೇವೆಯನ್ನು ಜೂನ್ 8ರಂದು ಪ್ರಾರಂಭಿಸಲಾಗಿತ್ತು. ದೇಶದ ನಾಲ್ಕು ದೊಡ್ಡ ಪಾಸ್‌ಗಳ ಮೂಲಕ 981 ಕಿಲೋಮೀಟರ್ ದೂರ ಪ್ರಯಾಣ ಇದಾಗಿದ್ದು, ಈ ಬಸ್​ನಿಂದ ಪ್ರವಾಸಿಗರು ಸೇರಿದಂತೆ ಲೇಹ್​ಗೆ ತೆರಳುವ ಇತರರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಯಾಣ ಮಾರ್ಗದಲ್ಲಿ ಬದಲು: ಇನ್ನು ದೆಹಲಿ-ಮನಾಲಿ-ಲೇಹ್-ಲಡಾಖ್ ನಡುವಿನ ಬಸ್ ಸೇವೆಯ ಮಾರ್ಗ ಮತ್ತು ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ದೆಹಲಿಯಿಂದ ಹೊರಟ ಬಸ್ ಅಂಬಾಲಾ, ಚಂಡೀಗಢ, ಕಿರಾತ್‌ಪುರ, ಸುಂದರ್‌ನಗರ, ಮಂಡಿ, ಕುಲು, ಮನಾಲಿ, ಅಟಲ್ ಟನಲ್, ಕೀಲಾಂಗ್, ಬರ್ಲಾಚಾ ಪಾಸ್, ತಂಗ್ಲಾಂಗ್ಲಾ ಪಾಸ್, ಲಾಚುಂಗ್ ಪಾಸ್ ಮೂಲಕ ಲೇಹ್​ನಿಂದ ಲಡಾಖ್​ಗೆ ತಲುಪಲಿದೆ.

ದೆಹಲಿಯಿಂದ ಮಧ್ಯಾಹ್ನ 12.15ಕ್ಕೆ ಹೊರಡುವ ಈ ಬಸ್‌ ಚಂಡೀಗಢ ತಲುಪಿ ಬಳಿಕ ಸಂಜೆ 6.10ಕ್ಕೆ ಬಿಟ್ಟು ಸುಂದರನಗರಕ್ಕೆ ರಾತ್ರಿ 10 ಗಂಟೆಗೆ ಬಂದು ತಲುಪಲಿದೆ. ಇಲ್ಲಿಂದ ಮತ್ತೆ ಹೊರಟು ಮಧ್ಯಾಹ್ನ 2 ಗಂಟೆಗೆ ಮನಾಲಿ ಸೇರಲಿದೆ. ಮತ್ತೆ ಮನಾಲಿಯಿಂದ ಹೊರಟು ಬೆಳಗ್ಗೆ 5 ಗಂಟೆಗೆ ಕೀಲಾಂಗ್​ಗೆ ಬಂದು ಇಲ್ಲಿ ಸಿಬ್ಬಂದಿ ಬದಲಾಗಲಿದ್ದು, ಬಳಿಕ ಬೆಳಗ್ಗೆ 5.30ಕ್ಕೆ ಲೇಹ್‌ಗೆ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಗಿರಿಶಿಖರಗಳ ನಡುವೆ 981 ಕಿಮೀ ಪ್ರವಾಸ ಮಾಡುವ ಅವಕಾಶವನ್ನು ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯು ಕಲ್ಪಿಸಿದ್ದು, ‘ಚಂದ್ರ ಮುರಿದು ಬಿದ್ದ ತಾಣ’ಕ್ಕೆ ಹೋಗುವವರು ಮಿಸ್‌ ಮಾಡಿಕೊಳ್ಳದೆ ಅರಾಮದಾಯಕ್ಕ ಪ್ರಯಾಣ ಮಾಡಿ ಪ್ರವಾಸದ ಸವಿಯಲ್ಲಿ ಆನಂದದಿಂದ ಅನುಭವಿಸಿ ಎಂದು ನಮ್ಮ ಕಡೆಯಿಂದಲೂ ವಿಶ್‌ ಮಾಡುತ್ತಿದ್ದೇವೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...