ಲೈಂಗಿಕ ತೃಪ್ತಿಗಾಗಿ ಗಂಡ ಅಥವಾ ಹೆಂಡತಿ ಮನಸ್ಸು ಮಾಡಿದರೆ ಯಾವುದೇ ಸಮಯದಲ್ಲಿ ಒಂದಾಗಬಹುದು. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆ ಸ್ವಲ್ಪ ಎಚ್ಚರದಿಂದ ಇರಬೇಕು. ಕೇವಲ ಅನಾರೋಗ್ಯಕರ ವಾತಾವರಣ ಮತ್ತು ಅತ್ಯಂತ ಸೂಕ್ಷ್ಮವಾದ ಸಮಯ ಇದಾಗಿರುವುದರಿಂದ ತನ್ನ ಸಂಗಾತಿಯ ಜೊತೆ ಬೆರೆಯಲು ಕೆಲವೊಂದು ಆರೋಗ್ಯದ ವಿಚಾರ ಅಡ್ಡ ಬರಬಹುದು.
ಆದರೆ ಈ ಸಮಯದಲ್ಲಿ ಸ್ವಲ್ಪ ಆಲೋಚನೆ ಮಾಡಿ ಸಂಪೂರ್ಣ ಲೈಂಗಿಕ ತೃಪ್ತಿಗಾಗಿ ಈ ಕೆಳಗಿನ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಮೊದಲೇ ತೆಗೆದುಕೊಂಡರೆ ನಿಮ್ಮ ಸಂಗಾತಿಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಇದಕ್ಕಾಗಿ ತಜ್ಞ ವೈದ್ಯರ ಸಲಹೆ ಏನು ಎಂದು ನೋಡುವುದಾದರೆ…
ಸಂಭೋಗದಲ್ಲಿ ಸರಳತೆ ಇರಲಿ: ಕೆಲವು ಸಂಗಾತಿಗಳಿಗೆ ತಾವು ವಿವಿಧ ಭಂಗಿಯಲ್ಲಿ ಲೈಂಗಿಕ ಕ್ರಿಯೆಯನ್ನು ನಡೆಸಬೇಕೆಂಬ ಬಯಕೆ ಇರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ತುಂಬಾ ಎಚ್ಚರದಿಂದ ಇರಬೇಕು. ಗರ್ಭಿಣಿ ಮಹಿಳೆಗೆ ಬಹಳಷ್ಟು ಸೂಕ್ಷ್ಮ ಸಮಯ ಇದಾಗಿರುವುದರಿಂದ ಕೇವಲ ದೇಹದ ತೃಪ್ತಿಗಾಗಿ ಬಗೆ ಬಗೆಯ ಲೈಂಗಿಕ ಭಂಗಿಗಳನ್ನು ಪ್ರಯತ್ನಿಸಲು ಹೋಗಿ ಆರೋಗ್ಯಕ್ಕೆ ತೊಂದರೆ ತಂದುಕೊಳ್ಳಬಾರದು. ಹಾಗಾಗಿ ಸಂಭೋಗದಲ್ಲಿ ವೈಭೋಗ ಬೇಡ. ಕೇವಲ ನಿಮ್ಮ ದೇಹಕ್ಕೆ ಆರಾಮದಾಯಕ ಎನಿಸುವ ಭಂಗಿಗಳನ್ನು ಮಾತ್ರ ಪ್ರಯತ್ನಿಸಿ ಲೈಂಗಿಕ ತೃಪ್ತಿ ಕಂಡುಕೊಳ್ಳಿ.
ಬೆಳಗಿನ ಜಾವ ಲೈಂಗಿಕ ಕ್ರಿಯೆ ಬೇಡವೇ ಬೇಡ!: ಗರ್ಭಿಣಿ ಮಹಿಳೆಯರಿಗೆ ಬೆಳಗಿನ ಸಮಯದಲ್ಲಿ ಆರೋಗ್ಯ ಸರಿ ಇರುವುದಿಲ್ಲ. ಕೇವಲ ವಾಕರಿಕೆ ವಾಂತಿ ಮತ್ತು ಆರೋಗ್ಯದ ಅಸ್ವಸ್ಥತೆ ಜೊತೆಗೆ ದೇಹದ ಆಯಾಸ ಕೂಡ ಇರುತ್ತದೆ. ಹೀಗಾಗಿ ಬೆಳಗಿನ ಸಂದರ್ಭದಲ್ಲಿ ಅಪ್ಪಿತಪ್ಪಿಯೂ ಲೈಂಗಿಕ ಕ್ರಿಯೆ ನಡೆಸಬೇಡಿ. ಇದರಿಂದ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಇಡೀ ದಿನ ಸಮಸ್ಯೆ ಎದುರಿಸಬೇಕಾಗುತ್ತದೆ. So ನೀವು ಇಡೀ ದಿನ ಖುಷಿಯಾಗಿದ್ದು ನಿಮ್ಮ ಸಂಭೋಗದ ಸಮಯವನ್ನು ಸಂಜೆ ಅಥವಾ ರಾತ್ರಿ ಸಮಯಕ್ಕೆ ಮೀಸಲಿಡಿ.
ಯೋನಿಯ ಡಿಸ್ಚಾರ್ಜ್ ಮಾಮೂಲಿ: ಗರ್ಭಿಣಿ ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ನಿಮ್ಮ ಯೋನಿಯ ಭಾಗದಲ್ಲಿ ಸಾಕಷ್ಟು ದ್ರವ ಬಿಡುಗಡೆ ಆಗುತ್ತಿರುತ್ತದೆ. ಇದು ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ಅದೇ ರೀತಿ ವಿಪರೀತ ಒಣಗುವಿಕೆ ಸಹ ಕೆಲವು ಮಹಿಳೆಯರಿಗೆ ಕಂಡುಬರಬಹುದು. ಒಂದು ವೇಳೆ ಮಹಿಳೆಯರಿಗೆ ಹೀಗಾದರೆ ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ತುಂಬಾ ಅಪಾಯಕಾರಿ ಎಂದು ತೋರುತ್ತದೆ. ಈ ಸಮಯದಲ್ಲಿ ಕೇವಲ ನಿಮ್ಮ ಸಂಗಾತಿಯ ಜೊತೆ ರೋಮ್ಯಾನ್ಸ್ ಮಾತ್ರ ಇರುವುದು ಒಳ್ಳೆಯದು.
ಯೋನಿ ಊದಿಕೊಂಡಂತೆ ಇರುವುದು: ಹೌದು ಗರ್ಭಾವಸ್ಥೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ತಮ್ಮ ಯೋನಿಯ ಭಾಗ ಊದಿಕೊಂಡಂತೆ ಇದ್ದು, ಅದು ತಮ್ಮ ಸಂಗಾತಿಗೆ ಆಕರ್ಷಕವಾಗಿ ಕಾಣದೆ ಬೇಸರ ತರಿಸಬಹುದು. ಹಾಗಾಗಿ ಈ ಸಮಯದಲ್ಲಿ ಕೆಲವೊಂದು ಭಂಗಿಯಲ್ಲಿ ಲೈಂಗಿಕ ಕ್ರಿಯೆ ಸರಿಯಲ್ಲ. ಹಾಗಾಗಿ ಲೈಂಗಿಕ ಅಸ್ವಸ್ಥತೆಯನ್ನು ದೂರ ಮಾಡಿಕೊಳ್ಳಲು ಕೇವಲ ದೇಹಕ್ಕೆ ಆರಾಮದಾಯಕವಾದ ಭಂಗಿಗಳನ್ನು ಮಾತ್ರ ಪ್ರಯತ್ನಿಸುವುದು ಒಳ್ಳೆಯದು.
ಗಾಢವಾದ ಪರಿಮಳಭರಿತ ಸುಗಂಧ ದ್ರವ್ಯ ಆರೋಗ್ಯಕ್ಕೆ ಹಾನಿಕರ: ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರ ದೇಹದಿಂದ ಕೆಲವೊಂದು ದ್ರವಗಳು ಬಿಡುಗಡೆಯಾಗುವುದರಿಂದ ದೇಹ ದುರ್ವಾಸನೆಯಿಂದ ಕೂಡಿರುತ್ತದೆ. ಹಾಗಾಗಿ ಇದನ್ನು ಹೋಗಲಾಡಿಸಿಕೊಳ್ಳಲು ಬಳಸಲಾಗುವ ಸೆಂಟ್ ಅನಾರೋಗ್ಯಕರ ಅನುಭವವನ್ನು ಉಂಟು ಮಾಡಬಹುದು.
ಮೊದಲೇ ಬೆಳಗಿನ ಸಮಯದಲ್ಲಿ ಆರೋಗ್ಯದ ಅಸ್ವಸ್ಥತೆಯಿಂದ ಬಳಲುವ ಗರ್ಭಿಣಿ ಮಹಿಳೆಗೆ ಇದೊಂದು ಹೆಚ್ಚಿನ ಹೊರೆ ಎನಿಸಬಹುದು. ಜೊತೆಗೆ ನಿಮ್ಮ ಸಂಗಾತಿಗೂ ನಿಮ್ಮ ಮೇಲೆ ಇದರಿಂದ ಬೇಸರ ಎನಿಸಬಹುದು. ಹಾಗಾಗಿ ಸಾಧ್ಯವಾದಷ್ಟು ನೈಸರ್ಗಿಕ ಎಣ್ಣೆಗಳನ್ನು ಮಾತ್ರ ಬಳಕೆ ಮಾಡಿ. ವಿಶೇಷವಾಗಿ ನೀವು ಲೈಂಗಿಕ ಕ್ರಿಯೆಗೆ ತೊಡಗುವಾಗ ಬಳಕೆ ಮಾಡಿದರೆ ಒಳ್ಳೆಯದು.
ಇನ್ನು ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಗರ್ಭಾವಸ್ಥೆಯ ಸಮಯದಲ್ಲಿ ಮಿಲನವಾಗುವ ದಂಪತಿಗಳು ಸೇರುವುದಕ್ಕೂ ಮೊದಲು ವೈದ್ಯರಿಂದ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಕಾರಣ ಮುಂದಾಗುವ ತೊಂದರೆಯನ್ನು ತಪ್ಪಿಸುವ ಜತೆಗೆ ಗರ್ಭಿಣಿಯರ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
Related
You Might Also Like
ಬೆಳಗಾವಿ: ಸಚಿವರ ಕಾರು ಅಪಘಾತ- ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತ
ಬೆಳಗಾವಿ: ಕಾರಿಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ...
BMTC ಕಂಡಕ್ಟರ್: 1ನೇ ಮದುವೆ ಮುಚ್ಚಿಟ್ಟು ಯುವತಿ ಜತೆ ಲವ್ವಿಡವ್ವಿ – ಬಳಿಕ ತಾಳಿ ಕಟ್ಟಿ ಗರ್ಭಿಣಿ ಮಾಡಿ ವಲ್ಲೆ ಎನ್ನುತ್ತಿರುವ ಕಿರಾತಕ
ಬೆಂಗಳೂರು: ಎಂ.ಎಸ್.ಪಾಳ್ಯದಿಂದ-ಯಲಹಂಕ ಮಾರ್ಗದಲ್ಲಿ ಟಿಕೆಟ್ ಕೊಡುತ್ತಲೇ ಮುಗ್ದ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಾತನ ಅಸಲಿ ಮುಖ ಬಯಲಾಗಿರುವ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ....
KSRTC: ಪ್ರಯಾಣಿಕರು ಕಳೆದುಕೊಂಡಿದ ಬೆಲೆ ಬಾಳುವ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ ಮೆರೆದ ತುರುವೇಕೆರೆ ಘಟಕದ ನೌಕರರು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿ, ಅಂದರೆ ಚಾಲಕ ನಿರ್ವಾಹಕರು ಪ್ರಾಮಾಣಿಕತೆ ಮೆರೆಯು ಮೂಲಕ ಇತರರಿಗೆ ಮಾದರಿಯಾಗುತ್ತಿರುವುದು ನಿರಂತರವಾಗಿದೆ. ಇದು ಒಂದು ರೀತಿ...
ಮೈಸೂರು: ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವ ಪ್ರಧಾನಿ, ಕೃಷಿ ಮಂತ್ರಿಗಳ ಪ್ರತಿಕೃತಿ ದಹಿಸಲು ಯತ್ನಿಸಿದ ರೈತರ ಬಂಧನ
ಮೈಸೂರು: ರೈತ ವಿರೋಧಿ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ ದಲೈವಾಲ ಹೋರಾಟವನ್ನು ಬೆಂಬಲಿಸಿ ಪ್ರಧಾನ ಮಂತ್ರಿ ಹಾಗೂ ಕೃಷಿ ಮಂತ್ರಿಗಳ ಪ್ರತಿಕೃತಿ ದಹನ ಮಾಡಲು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ...
ಹೈಪರ್‌ಟೆನ್ಷನ್: ಭಾರತದ ಯುವಜನತೆಗೆ ಅಡಗಿದ ಅಪಾಯ: ಡಾ.ಸಾಯಿಶಂಕರ್
ಬೆಂಗಳೂರು: ಯುವ ದಿನ, ಜನವರಿ 12 ರಂದು, ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಜೀವನ ಮತ್ತು ಉಪದೇಶಗಳನ್ನು ಆಚರಿಸುತ್ತದೆ. ಅವರ ಉಪದೇಶಗಳು ಪೀಳಿಗೆಗಳನ್ನು ಪ್ರೇರೇಪಿಸುತ್ತಿವೆ ಎಂದು ಏಮ್ಸ್ ಮತ್ತು...
ಹುಬ್ಬಳ್ಳಿ: ಸಾರಿಗೆ ನೌಕರರಿಗೆ ಸರಿ ಸಮಾನ ವೇತನ ಜಾರಿಗೆ ಸಿಎಂ ಒತ್ತಾಯಿಸಿ: ಸಚಿವರಿಗೆ ವಾಯವ್ಯ ವಲಯ ನೌಕರರ ಕೂಟ ಮನವಿ
ಹುಬ್ಬಳ್ಳಿ: ಚುನಾವಣಾ ಪೂರ್ವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸರಿಸಮಾನ ವೇತನ (7 ನೇ ವೇತನ ಆಯೋಗ ಮಾದರಿಯಲ್ಲಿ) ನೀಡುವಂತೆ...
“ಕೆಎಸ್‌ಆರ್‌ಟಿಸಿ ಆರೋಗ್ಯ” ಯೋಜನೆ ಕುರಿತು ನೌಕರರಿಗೆ ಪತ್ರ ಬರೆದು ಖುಷಿ ಹಂಚಿಕೊಂಡ ಸಂಸ್ಥೆ ಎಂಡಿ ಅನ್ಬುಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಉತ್ತಮ ಆರೋಗ್ಯದಿಂದ ಇರಬೇಕು ಎಂಬ ಸದುದ್ದೇಶದಿಂದ "ಕೆಎಸ್‌ಆರ್‌ಟಿಸಿ ಆರೋಗ್ಯ" ಯೋಜನೆಯನ್ನು ರೂಪಿಸಿದ್ದು, ಮುಖ್ಯಮಂತ್ರಿಗಳು...
BMTC: ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಕ್ಕೆ ನೌಕರರಿಂದ ದಾಖಲೆ ಸಂಗ್ರಹಿಸಲು ಮೂವರು ಅಧಿಕಾರಿಗಳ ನಿಯೋಜನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವುದಕ್ಕೆ ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಮೂವರು ಅಧಿಕಾರಿಗಳನ್ನೊಳಗಂಡ ಮೇಲ್ವಿಚಾರಣೆ ತಂಡಗಳನ್ನು ರಚಿಸಿ ವ್ಯವಸ್ಥಾಪಕ...
ಮುಂದಿನ ಪೀಳಿಗೆ ಉಳಿವಿಗಾಗಿ ಸಾವಯವ ಕೃಷಿ ಅವಶ್ಯಕ: ಸಚಿವ ಮುನಿಯಪ್ಪ
ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ-2025 ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯ ವೃದ್ಧಿ ಬೆಂಗಳೂರು: ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಹಾಗಾಗಿ...
ಲೋಕ ಸೇವಾ ಆಯೋಗಗಳು ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆ ನೀಡುವ ಪ್ರಜಾ ಪ್ರಭುತ್ವದ ಸ್ತಂಭಗಳು: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲೋಕ ಸೇವಾ ಆಯೋಗಗಳು ಅರ್ಹತೆ ಮತ್ತು ನ್ಯಾಯಪರತೆಯನ್ನು ಎತ್ತಿಹಿಡಿದು, ಕಾರ್ಯಾಂಗಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡುವ ಪ್ರಜಾಪ್ರಭುತ್ವದ ಸ್ತಂಭಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಲೋಕಸೇವಾ...
KSRTC: ಶಸ್ತ್ರಚಿಕಿತ್ಸೆ ಗೊಳಗಾದ ಚಾಲಕನಿಗೆ ರಜೆ ಕೊಡದೆ ಗೈರು ಹಾಜರಿಹಾಕಿ 4 ತಿಂಗಳ ವೇತನ ತಡೆಹಿಡಿದ ಅಧಿಕಾರಿಗಳು
ಅನಾರೋಗ್ಯದ ನಡುವೆಯೂ ಕಚೇರಿಯಿಂದ ಡಿಪೋಗೆ - ಡಿಪೋನಿಂದ ಕಚೇರಿಗೆ ಅಲೆಯುತ್ತಿರು ಚಾಲಕ ವೇತನಕ್ಕಾಗಿ ಚಾಲಕನ ಅಲೆದಾಟ, ಪರದಾಟ ಆರ್ಥಿಕ ಸಂಕಷ್ಟದಲ್ಲಿ ಕುಟುಂಬ-ಆದರೂ ಕರಗದ ಅಧಿಕಾರಿಗಳ ಮನಸ್ಸು ದೊಡ್ಡಬಳ್ಳಾಪುರ:...