Please assign a menu to the primary menu location under menu

NEWSದೇಶ-ವಿದೇಶನಮ್ಮರಾಜ್ಯ

ಪೊಲೀಸರು ಅವಹೇಳನಕಾರಿ ಪದಬಳಕೆ ಮಾಡದೆ ಗೌರವದಿಂದ ವರ್ತಿಸಿ: ಹೈಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಕೇರಳ: ಪೊಲೀಸರು ನಾಗರಿಕರನ್ನು ಅಗೌರವದಿಂದ ಕಾಣುವ ಕುರಿತಾದ ಆರೋಪಗಳ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಹೈಕೋರ್ಟ್‌ ಗೆ ವರದಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್‌ ಈ ಕುರಿತು ತನ್ನ ತೀರ್ಪಿನಲ್ಲಿ ಪೊಲೀಸರಿಗೆ ಕೆಲ ಸಾಮಾನ್ಯ ನಿರ್ದೇಶಗಳನ್ನು ನೀಡಿದೆ.

ನಾಗರಿಕರನ್ನು ಉದ್ದೇಶಿಸಿ ಪೊಲೀಸರು ಅವಹೇಳನಕಾರಿ ಪದಬಳಕೆ ಮಾಡುವುದನ್ನು ಸಹಿಸಲಾಗುವುದಿಲ್ಲ ಅಥವಾ ಅನುಮತಿಸಲಾಗುವುದಿಲ್ಲ ಎಂದು ಆದೇಶ ನೀಡಿದ ಹೈಕೋರ್ಟ್‌, ಇದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳೊಂದಿಗೆ ವರದಿಯನ್ನು ಸಲ್ಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.

ಜೆ.ಎಸ್‌. ಅನಿಲ್‌ ಎಂಬ ವ್ಯಕ್ತಿಯು “ಪೊಲೀಸರು ತಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ಮೌಖಿಕವಾಗಿ ನಿಂದನೆ ಮಾಡುವ ಮಟ್ಟಿಗೆ ಹೋಗಿದ್ದು, ನಮಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ನ್ಯಾಮೂರ್ತಿ ದೇವನ್‌ ರಾಮಚಂದ್ರನ್‌ ಆದೇಶ ಹೊರಡಿಸಿದ್ದಾರೆ.

ಪೊಲೀಸ್‌ ಅಧಿಕಾರಿಗಳು ನಾಗರಿಕರನ್ನುದ್ದೇಶಿಸಿ ಅಸಹ್ಯ ಪದಬಳಕೆ ಮಾಡುವುದರ ಕುರಿತು ನಾನು ಹೆಚ್ಚೇನೂ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಈ ಪದಗಳು ಸುಸಂಸ್ಕೃತ ಸಮಾಜಕ್ಕೆ ಅಸಹ್ಯವಾಗಿವೆ.

ಇದು ವಸಾಹತಿಶಾಹಿ ಅಧೀನ ತಂತ್ರಗಳ ಅವಶೇಷ ಮಾತ್ರ. 21ನೇ ಶತಮಾನದ ಅಗತ್ಯತೆಗಳಿಗೆ ಅನುಗುಣವಾಗಿ ಸಾಗುವ ಈ ಸ್ವತಂತ್ರ ದೇಶದಲ್ಲಿ ಇಂತಹವುಗಳಿಗೆ ಯಾವುದೇ ಸ್ಥಾನವಿಲ್ಲ. ಪೊಲೀಸ್‌ ಪಡೆಯ ಯಾವುದೇ ಸದಸ್ಯರು ಇಂತಹ ಪದ ಬಳಕೆ ಮಾಡುವುದು ದೇಶದ ಸಾಂವಿಧಾನಿಕ, ನೈತಿಕತೆ ಮತ್ತು ಆತ್ಮಸಾಕ್ಷಿಗೆ ವಿರುದ್ಧವಾಗಿದೆ ಹಾಗೂ ಪ್ರಜಾಪ್ರಭುತ್ವ ನೈತಿಕತೆಗೆ ವಿರುದ್ಧವಾಗಿದೆ. ಅವರು ನಾಗರಿಕರನ್ನು ಗೌರವಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಂದ ಮನವಿ ಪತ್ರ ಸಲ್ಲಿಸುವ ಚಳವಳಿ ಆರಂಭ: ಸಿಎಂ, ಸಾರಿಗೆ ಮಂತ್ರಿ, ನಾಲ್ಕೂ ನಿಗಮಗಳ ಎಂಡಿಗಳಿಗೆ ಸಲ್ಲಿಕೆ 110 ಹಳ್ಳಿಗಳ ಕೊಳವೆ ಬಾವಿಗಳು ಜಲಮಂಡಳಿ ಸುಪರ್ದಿಗೆ: ತುಷಾರ್ ಗಿರಿನಾಥ್ ವಯನಾಡಲ್ಲಿ ಮಹಿಳೆ ಕೊಂದು ತಿಂದಿದ್ದ ಹೆಣ್ಣು ಹುಲಿ ಸಾವು ಬಡವರಿಗೆ ನೆರವಾಗುತ್ತಿವೆ ಪಂಚ ಗ್ಯಾರಂಟಿ ಯೋಜನೆಗಳು: ಸಚಿವ ಮಧುಬಂಗಾರಪ್ಪ ದಳಪತಿ ವಿಜಯ್ 69ನೇ ಚಿತ್ರದ ಫಸ್ಟ್ ಲುಕ್ ರಿಲೀಸ್ KPSC ಸ್ಪರ್ಧಾತ್ಮಕ ಪರೀಕ್ಷೆ ಹಿನ್ನೆಲೆ ಜ.31-ಫೆ.2ರಂದು ಹೆಚ್ಚುವರಿ ಸರ್ಕಾರಿ ಬಸ್‌ ಬಿಡಲು ಮನವಿ ಮೈಕ್ರೋ ಫೈನಾನ್ಸ್ ಹಾವಳಿಗೆ ಹೆದರಿ ಜನ ಆತ್ಮಹತ್ಯೆಗೆ ಶರಣು: ವಿಪಕ್ಷ ನಾಯಕ ಅಶೋಕ್ ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ FIR ದಾಖಲಿಸಿ: ತುಷಾರ್ ಗಿರಿನಾಥ್ ಬಸ್‌ನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದ ಮಹಿಳೆಗೆ ಗಂಭೀರ ಗಾಯ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ