CrimeNEWSನಮ್ಮರಾಜ್ಯ

2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ಪೊಲೀಸರ ಲಂಚಬಾಕತನಕ್ಕೆ 13 ಸಾವಿರ ರೂ. ಬಾಡಿಗೆ ಕಳೆದುಕೊಂಡ ಕಾರು ಚಾಲಕ
  • ಸಾರಿಗೆ ಸಂಸ್ಥೆಗೆ 10ಸಾವಿರ ರೂ.ಗೂ ಅಧಿಕ ಆದಾಯ ಕೋತ
  • ಲಂಚಕೋರ ಪೊಲೀಸ್‌ ಸಿಬ್ಬಂದಿಗಳಾದ ಭರತ್ ಕುಮಾರ್, ಪುನೀತ್ ಅಮಾನತಿಗೆ ಆಗ್ರಹ

ಮೈಸೂರು: ನಗರದ ವಾಲ್ಮೀಕಿ ಸರ್ಕಲ್ ಬಳಿ ಕಾರ್ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ನ.2ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಸಣ್ಣ ಅಪಘಾತವಾಗಿದೆ. ಈ ವೇಳೆ ಕಾರು ಚಾಲಕ ಮತ್ತು ಸಾರಿಗೆ ನಿಗಮದ ಚಾಲಕರು ರಾಜೀಸಂಧಾನ ಮಾಡಿಕೊಂಡಿದ್ದಾರೆ.

ಆದರೆ, ಮೈಸೂರು ವಿ.ವಿ.ಪುರಂ ಸಂಚಾರಿ ಠಾಣೆ ಪೊಲೀಸರು ದೂರು ನೀಡದಿದ್ದರೂ ಕಾರು ಮತ್ತು ಬಸ್‌ ಎರಡನ್ನು ಠಾಣೆಗೆ ತೆಗೆದುಕೊಂಡು ಬರುವಂತೆ ಹೇಳಿದ್ದಾರೆ. ಈ ವೇಳೆ ಇಲ್ಲ ಸರ್‌ ನಾವು ರಾಜೀಸಂಧಾನ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಆದರೂ ಬಿಡದೆ ಪೊಲೀಸ್‌ ಠಾಣೆಗೆ ವಾಹನಗಳನ್ನು ತೆಗೆದುಕೊಂಡು ಬರುವಂತೆ ಬಲವಂತ ಮಾಡಿದ್ದಾರೆ.

ಆ ಬಳಿಕ ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಇಬ್ಬರು ಚಾಲಕರು ಹೋಗಿದ್ದಾರೆ. ಠಾಣೆಯಲ್ಲಿ ನಾವು ದೂರು ಕೊಡುವುದಿಲ್ಲ ರಾಜೀಸಂಧಾನ ಮಾಡಿಕೊಂಡಿದ್ದೇವೆ ನಾವು ಹೋಗಲು ಬಿಡಿ ಎಂದು ಸಾರಿಗೆ ಬಸ್‌ ಚಾಲಕ ಬಾಲರಾಜ್‌ ಮತ್ತು ಕಾರು ಚಾಲಕ ಶಿವರಾಜೇಗೌಡ ಇಬ್ಬರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಈ ವೇಳೆ ಕಾರು ಚಾಲಕ ಹಾಗೂ ಕೆಎಸ್ಆರ್ಟಿಸಿ ಚಾಲಕರ ಹತ್ತಿರ ಒಟ್ಟು 7ಸಾವಿರ ರೂಪಾಯಿಗಳನ್ನು ಅಂದರೆ ಕಾರು ಚಾಲಕ ಶಿವರಾಜೇಗೌಡ ಅವರ ಹತ್ತಿರ 2ಸಾವಿರ ರೂಪಾಯಿ ಹಾಗೂ ಕೆಎಸ್ಆರ್ಟಿಸಿ ಚಾಲಕರ ಹತ್ತಿರ 5ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ನೀವು 7 ಸಾವಿರ ರೂಪಾಯಿ ಕೊಟ್ಟರೆ ವಾಹನಗಳನ್ನು ಬಿಡಿ ಎಂದು ನಮ್ಮ ಸಾಹೇಬರು ಹೇಳಿದ್ದಾರೆ ಎಂದು ಪೊಲೀಸರಿಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಆ ಇಬ್ಬರೂ ಸಂಚಾರಿ ಪೊಲೀಸರಲ್ಲಿ ಒಬ್ಬ ಭರತ್ ಕುಮಾರ್ ಹಾಗೂ ಮತ್ತೊಬ್ಬ ಪುನೀತ್ ಎಂಬುವವರು. ಈ ಇಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಕಾರು ಚಾಲಕ ನಾನೇಕೆ ಲಂಚ ಕೊಡಬೇಕು ನಾನೇನು ತಪ್ಪು ನಾಡಿಲ್ಲ ಎಂದು ಹೇಳಿದ್ದಾರೆ. ಆಗ ಕೆಎಸ್‌ಆರ್‌ಟಿಸಿ ಚಾಲಕನ ಡಿಎಲ್‌ ರದ್ದು ಮಾಡುತ್ತೇನೆ ಎಂದು ಕಾರು ಚಾಲಕನ ಬಳಿ ಬೆದರಿಕೆ ಹಾಕಿದ್ದಾರೆ.

ಅಷ್ಟೇ ಅಲ್ಲದೆ ಕಾರು ಚಾಲಕ ಮತ್ತು ಸಾರಿಗೆ ಬಸ್‌ ಚಾಲಕ ಇಬ್ಬರು ರಾಜೀಸಂಧಾನ ಮಾಡಿಕೊಂಡಿದ್ದೇವೆ ಎಂದ ಮೇಲು 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಅಲ್ಲದೆ ಇದು ಕೋರ್ಟ್‌ಗೆ ದಂಡ ಕಟ್ಟುವುದಕ್ಕೆ ಎಂದು ದಬಾಯಿಸಿ ಬೆದರಿಸಿದ್ದಾರೆ. ಈ ವೇಳೆ ವಿಧಿ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಬಾಲರಾಜ್‌ ಅವರು 2 ಸಾವಿರ ರೂಪಾಯಿ ಲಂಚ ಕೊಟ್ಟಿದ್ದಾರೆ.

ಈ ಎಲ್ಲ ನಡೆಯುವಷ್ಟರಲ್ಲಿ ಸಂಜೆ 6 ಗಂಟೆ ಆಗಿದೆ. 2 ಸಾವಿರ ಲಂಚಕೊಟ್ಟ ಮೇಲೆ ಕಾರು ಮತ್ತು ಬಸ್‌ ಎರಡನ್ನು ಬಿಟ್ಟುಕಳುಹಿಸಿದ್ದಾರೆ. ಇನ್ನು 2 ಸಾವಿರ ರೂಪಾಯಿ ಲಂಚವನ್ನು ಪೊಲೀಸ್‌ ಸಿಬ್ಬಂದಿ ಪುನೀತ್‌ ಚಾಲಕನಿಂದ ತೆಗೆದುಕೊಂಡು ಜೇಬಿಗೆ ಹಾಕಿಕೊಂಡಿದ್ದಾನೆ.

ಇನ್ನು ಭರತ್‌ ಕುಮಾರ್‌ ಎಂಬ ಪೊಲೀಸ್‌ ಸಿಬ್ಬಂದಿ ತನ್ನ ಮೊದಲ ಪಾಳಿಯ ಕೆಲಸ ಮುಗಿದಿದ್ದರಿಂದ ಹಬ್ಬಕ್ಕೆ ಪಟಾಕಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿ ಪುನೀತ್‌ಗೆ ಲಂಚ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಭಾರಿ ನಿಷ್ಠೆಯಿಂದ ವಹಿಸಿ ಹೋಗಿದ್ದಾನೆ. ಅಂದರೆ ಇಂಥ ಲಂಚಕೋರ ಪೊಲೀಸರಿಂದ ನಿಷ್ಠಾವಂತ ಪೊಲೀಸರನ್ನು ಸಾರ್ವಜನಿಕರು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ.

ಅಲ್ಲದೆ ಕಾರು ಮತ್ತು ಸಾರಿಗೆ ಬಸ್‌ ಚಾಲಕರು ಸ್ಥಳದಲ್ಲೇ ರಾಜೀಸಂಧಾನ ಮಾಡಿಕೊಂಡ ಮೇಲೆ ಅವರನ್ನು ಅವರ ಪಾಡಿಗೆ ಹೋಗಲು ಬಿಡಬಹುದಿತ್ತು. ಆದರೆ ಹಾಗೆ ಮಾಡದಿದ್ದರಿಂದ ಬೆಂಗಳೂರಿನಿಂದ ಕೊಡಗಿಗೆ ಮೂರು ದಿನಗಳ ಬಾಡಿಗೆಗಾಗಿ ಕಾರು ಚಾಲಕ ತಮಿಳುನಾಡು ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಬಾಡಿಗೆ ಸುಮಾರು 13 ಸಾವಿರ ರೂಪಾಯಿಯನ್ನು ಕಳೆದುಕೊಳ್ಳಬೇಕಾಯಿತು.

ಅಲ್ಲದೆ ಆ ಪ್ರವಾಸಿಗರು ಮಧ್ಯಾಹ್ನ ಸುಮಾರು 3.30ರವರೆಗೂ ಕಾದು ಬಳಿಕ ಬೇರೆ ಕಾರನ್ನು ಬಾಡಿಗೆಗೆ ಪಡೆದು ಹೋಗಬೇಕಾಯಿತು. ಈ ವೇಳೆ ಸರಿಯಾದ ಸಮಯಕ್ಕೆ ತಲುಪಬೇಕಾದ ಸ್ಥಳವನ್ನು ತಲುಪಲಾಗಲಿಲ್ಲವಲ್ಲ ಎಂದು ಚಾಲಕನ ಬಗ್ಗೆ ಅಸಮಾಧಾನಗೊಂಡು ಬೆಂಗಳೂರಿನಿಂದ ಬಂದಿದ್ದ ಬಾಡಿಗೆ ಹಣವನ್ನು ಕೊಡದೆ ಹೋಗಿದ್ದಾರೆ.

ಈ ಪೊಲೀಸರ ಲಂಚದಾಸೆಗೆ ಪಾಪ ಕಾರು ಚಾಲಕ 13 ಸಾವಿರ ರೂಪಾಯಿ ಆದಾಯವನ್ನು ಕಳೆದುಕೊಳ್ಳುವಂತಾಯಿತು. ಜತೆಗೆ ಮತ್ತೆ ಬೆಂಗಳೂರಿಗೆ ಪ್ರಯಾಣಿಕರಿಲ್ಲದೆ ವಾಪಸ್‌ ಹೋಗಬೇಕಾಯಿತು. ಇದರಿಂದ ಡೀಸೆಲ್‌ ಹಣ ಮತ್ತು ಅವರ ನಿತ್ಯದ ಸಂಪಾದನೆಯನ್ನು ಕಳೆದುಕೊಳ್ಳಬೇಕಾಯಿತು.

ಇನ್ನು ಕೆಎಸ್‌ಆರ್‌ಟಿಸಿ ಬಸ್‌ ಕೂಡ ಪೊಲೀಸ್‌ ಠಾಣೆಯಲ್ಲಿ ಸುಮಾರು 6 ಗಂಟೆ ತನಕ ನಿಂತಿದ್ದರಿಂದ ಸಾರಿಗೆ ಸಂಸ್ಥೆಯೂ 10 ಸಾವಿರ ರೂಪಾಯಿಗೂ ಹೆಚ್ಚು ಆದಾಯ ಕಳೆದುಕೊಳ್ಳಬೇಕಾಯಿತು. ಪೊಲೀಸರು ಇನ್ನಾದರೂ ಈ ರೀತಿಯ ವರ್ತನೆಯನ್ನು ಬದಲಾಯಿಸಿಕೊಂಡರೆ ಸಾರ್ವಜನಿಕರಿಗೆ ಮತ್ತು ಸರ್ಕಾರದ ಇಲಾಖೆಗಳಿಗೆ ಆಗುವ ನಷ್ಟವನ್ನು ತಪ್ಪಿಸಬಹುದಾಗಿದೆ.

ಅಲ್ಲದೆ ಮುಖ್ಯವಾಗಿ ಈ ರೀತಿ ಲಂಚಕ್ಕಾಗಿ ಸಮಯ ಹಾಳುಮಾಡಿದ ಈ ಇಬ್ಬರು ಪೊಲೀಸ್‌ ಸಿಬ್ಬಂದಿಗಳನ್ನು ಕೂಡಲೇ ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಜ್ಞಾವಂತ ನಾಗರಿಕರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
2 ಸಾವಿರ ರೂ. ಲಂಚಕೊಟ್ಟ ಮೇಲೆ 6ಗಂಟೆ ಬಳಿಕ ಕಾರು-KSRTC ಬಸ್‌ ಬಿಟ್ಟು ಕಳಿಸಿದ ಮೈಸೂರು ಸಂಚಾರಿ ಪೊಲೀಸರು ಹಾಸನಾಂಬೆ ದೇವಿ ಉತ್ಸವದ 9ದಿನಗಳಲ್ಲಿ ದಾಖಲೆಯ ₹12,63,83,808 ಆದಾಯ ಸಂಗ್ರಹ ಕೃಷ್ಣರಾಜಪೇಟೆ ತ್ರಿವೇಣಿ ಸಂಗಮದಲ್ಲಿ ಕಾರ್ತಿಕ ಮಾಸದ ಮೊದಲ ಸೋಮವಾರ ಅದ್ದೂರಿಯಾಗಿ ಜರುಗಿದ ಹುಲಿ ವಾಹನ ಉತ್ಸವ ತಿ.ನರಸೀಪುರ: ಭತ್ತದ ಬೆಂಬಲ ಬೆಲೆ ಜತೆಗೆ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಿ - ರೈತ ಮುಖಂಡರ ಆಗ್ರಹ ಅಪಾರ್ಟ್‌ಮೆಂಟ್‌ನಲ್ಲಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಗುರುಪ್ರಸಾದ್‌ ಆತ್ಮಹತ್ಯೆ ಹಾಸನಾಂಬೆ ದರ್ಶನ ಅಂತ್ಯ-ಹರಿದು ಬಂತ್ತು ₹9 ಕೋಟಿಗೂ ಅಧಿಕ ಆದಾಯ ನ.3ರಂದುಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ: ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTCಯ ಸಮಸ್ತ ನೌಕರರ ಸಮಸ್ಯೆ, ಅಸಮಾಧಾನದ ನಡುವೆಯೂ ಕನ್ನಡ ರಾಜ್ಯೋತ್ಸವ ಆಚರಣೆ ತುಂಬಾ ವಿಜೃಂಭಣೆ ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ