ಬೆಂಗಳೂರು: ಬಿಬಿಎಂಪಿಯಲ್ಲಿ ಒಟ್ಟು 12,692 ಡಿ.ಪಿ.ಎಸ್ ಪೌರಕಾರ್ಮಿಕರುಗಳನ್ನು ಕ್ರಮಬದ್ಧಗೊಳಿಸಲಾಗಿದ್ದು, ಈಗಾಗಲೇ 1ನೇ ಮೇ 2025ರಂದು 3,628 ಮಂದಿ ಪೌರ ಕಾರ್ಮಿಕರಿಗೆ ಹಾಗೂ ಇಂದು 1,400 ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶಗಳನ್ನು ನೀಡಲಾಗಿದೆ.
ಈ ಕಾಯಂ ಪೌರ ಕಾರ್ಮಿಕರಿಗೆ ಮೇ-2025 ರಿಂದ HRMS ನಲ್ಲಿ ವೇತನ ಡ್ರಾ ಮಾಡಬೇಕಿದೆ. HRMS ನಲ್ಲಿ ಯಾವುದೇ ಅಧಿಕಾರಿ/ ಸಿಬ್ಬಂದಿಗಳ ವೇತನ ಡ್ರಾ ಮಾಡಲು ಅಧಿಕಾರಿ/ ಸಿಬ್ಬಂದಿಗಳ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಕುಟುಂಬದಲ್ಲಿ ಅವಲಂಬಿತರ ವಿವರಗಳನ್ನೊಳಗೊಂಡಂತೆ ಇತರೆ ವಿವರಗಳ ನೋಂದಣಿ ಕಡ್ಡಾಯವಾಗಿದೆ.
ಪ್ರಸ್ತುತ ಬಿಬಿಎಂಪಿಯಲ್ಲಿ ನೇಮಕಾತಿಯಾಗಿರುವ ಕಾಯಂ ಪೌರ ಕಾರ್ಮಿಕರಿಗೂ ಈ ನಿಯಮವು ಅನ್ವಯಿಸುತ್ತಿದ್ದು, ನೇಮಕಾತಿಗೊಂಡಿರುವ ಎಲ್ಲ ಪೌರ ಕಾರ್ಮಿಕರಿಂದ ಮೇಲೆ ತಿಳಿಸಿರುವ ದಾಖಲೆಗಳನ್ನು ಪಡೆದು HRMS ನಲ್ಲಿ ನೋಂದಣಿ ಕೈಗೊಂಡು ವೇತನ ಡ್ರಾ ಮಾಡಬೇಕಿದೆ. ಆದರೆ ಬಹುತೇಕ ಪೌರಕಾರ್ಮಿಕರು ಮೇಲೆ ತಿಳಿಸಿರುವ ದಾಖಲಾತಿಗಳಲ್ಲಿ ಪ್ರಮುಖವಾಗಿ ಪ್ಯಾನ್ಕಾರ್ಡ್ ಹೊಂದಿಲ್ಲದಿರುವುದು ಹಾಗೂ ಕುಟುಂಬದ ಅವಲಂಬಿತ ಸದಸ್ಯರ ವಿವರ ಹಾಗೂ ವಿದ್ಯಾರ್ಹತೆ ಬಗ್ಗೆ ಮಾಹಿತಿ ನೀಡಿಲ್ಲದಿರುವುದು ಕಂಡುಬಂದಿದ್ದು, ಈ ಮಾಹಿತಿಗಳ ಸಂಗ್ರಹಣೆ ಚಾಲ್ತಿಯಲ್ಲಿದೆ.
ಪ್ರಸ್ತುತ HRMS ನಲ್ಲಿ ಈ ಮಾಹಿತಿಗಳ ನೋಂದಣಿಯಿಲ್ಲದೇ ವೇತನ ಡ್ರಾ ಮಾಡಲು ಸಮಸ್ಯೆಯಾಗಿದೆ. ಆದರೆ ಈಗಾಗಲೇ ನೇಮಿಸಿರುವ ಆದೇಶಗಳನ್ವಯ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದರಿಂದ ತಾತ್ಕಾಲಿಕವಾಗಿ ಪೌರ ಕಾರ್ಮಿಕರ ಇತರ ಎಲ್ಲ ದಾಖಲೆಗಳನ್ನು HRMSನಲ್ಲಿ ನೋಂದಾಯಿಸಿ, ಪ್ಯಾನ್ ಕಾರ್ಡ್, ಅವಲಂಬಿತ ಕುಟುಂಬದ ಸದಸ್ಯರ ವಿವರ ಹಾಗೂ ವಿದ್ಯಾರ್ಹತೆ ದಾಖಲೆಗಳನ್ನು HRMS ನೋಂದಣಿಯಿಂದ ವಿನಾಯಿತಿ ನೀಡಿ ಮೇಲಿನ ದಾಖಲೆಗಳನ್ನು ಎರಡು ತಿಂಗಳ ಅವಧಿಯೊಳಗೆ DDO ಗಳಿಗೆ ಸಲ್ಲಿಸುವ ಷರತ್ತು ವಿಧಿಸಿ ಮೇ-2025 ಮತ್ತು ಜೂನ್-2025ರ ಮಾಹೆಯ ವೇತನ ಡ್ರಾ ಮಾಡಬಹುದಾಗಿದ್ದು, ಅದರಂತೆ ಈ ಆದೇಶ ಹೊರಡಿಸಿದೆ.
ಮೇ-2025ರ ಮಾಹೆಯಲ್ಲಿ ಕಾಯಂಮಾತಿ ಗೊಂಡಿರುವ 12,692 ಪೌರಕಾರ್ಮಿಕರ ಮೇ-2025 ಹಾಗೂ ಜೂನ್-2025ರ ಮಾಹೆಯ ವೇತನವನ್ನು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ HRMS ನಲ್ಲಿ ವೇತನ ಪಾವತಿಸುತ್ತಿರುವ ಮಾದರಿಯಲ್ಲಿಯೇ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ವಿಲೇವಾರಿ ವಿಭಾಗರವರು ಕೂಡಲೇ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.
ಈ ಸಂಬಂಧ ಹೊಸದಾಗಿ ನೇಮಕಾತಿಗೊಂಡಿರುವ ಕಾಯಂ ಪೌರ ಕಾರ್ಮಿಕರಿಗೆ ಪ್ಯಾನ್ಕಾರ್ಡ್, ಅವಲಂಬಿತ ಕುಟುಂಬದ ಸದಸ್ಯರ ವಿವರ ಹಾಗೂ ವಿದ್ಯಾರ್ಹತೆ ದಾಖಲೆಗಳಿಗೆ HRMS ನೋಂದಣಿಯಿಂದ ವಿನಾಯಿತಿ ನೀಡಿ, ಮೇಲಿನ ದಾಖಲೆಗಳನ್ನು ಎರಡು ತಿಂಗಳ ಅವಧಿಯೊಳಗೆ DDO ಗಳಿಗೆ ಸಲ್ಲಿಸಿ, HRMS ನೋಂದಣಿಗೆ ಒಳಪಡುವ ಷರತ್ತಿಗೊಳಪಟ್ಟು ಮೇ-2025 ಮತ್ತು ಜೂನ್-2025ರ ಮಾಹೆಯ ವೇತನ ಡ್ರಾ ಮಾಡಲು ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಆದೇಶಿಸಿದ್ದಾರೆ.
Related

You Might Also Like
BMTC ನೌಕರರಿಗೆ ಸಾರಿಗೆ ಸಚಿವರಿಂದ ಪಿಂಚಣಿ ಪಾವತಿ ಆದೇಶ ಪತ್ರ ವಿತರಣೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಯೋಗದೊಂದಿಗೆ ಜೂನ್-2025ರ ಮಾಹೆಯ ಸಂಸ್ಥೆಯ 100ಕ್ಕೂ ಹೆಚ್ಚು ಅರ್ಹ ನೌಕರರಿಗೆ ಪ್ರಯಾಸ್ ಯೋಜನೆಯಡಿ...
KKRTC ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ತಾತ್ಕಾಲಿಕ ನೇಮಕ
ಕೊಪ್ಪಳ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿ ಜಾಧವ್ ರಾಜೇಂದ್ರ ಬಾಹುರಾವ್ ಅವರನ್ನು ತಾತ್ಕಾಲಿಕವಾಗಿ ನೇಮಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (CPM)...
ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 20ಕ್ಕೂ ಹೆಚ್ಚು ಜನರು ಮೃತ: ಸರ್ಕಾರ ಗಂಭೀರವಾಗಿ ಪರಿಗಣಿಸಿದೆ – ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಳೆದೊಂದು ತಿಂಗಳಿನಲ್ಲಿ ಹಾಸನ ಜಿಲ್ಲೆಯೊಂದರಲ್ಲೇ ಇಪ್ಪತ್ತಕ್ಕೂ ಅಧಿಕ ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು...
KSRTC ನೌಕರರ ವೇತನ ಹೆಚ್ಚಳ ಪ್ರಕರಣ: ನಾಳೆ ಹೈ ಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್ನಲ್ಲಿ...
ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್: ಬೆಲೆಯಲ್ಲಿ ಭಾರಿ ಇಳಿಕೆ
ನ್ಯೂಡೆಲ್ಲಿ: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್...
KSRTC: ಶೇ.31ರಷ್ಟು ತುಟ್ಟಿಭತ್ಯೆ 2022 ಜು.1ರ ಮೂಲ ವೇತನಕ್ಕೆ ವಿಲೀನಗೊಂಡ ಬಳಿಕ ನೌಕರರು 4% HRA ಕಳೆದುಕೊಳ್ಳುವರು..!
ಆದರೂ ಅಲ್ಪ ಮಟ್ಟಿಗೆ ಸಂಬಳದಲ್ಲಿ ಏರಿಕೆ ಕಾಣಬಹುದಾಗಿದೆ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ 01.07.2022 ರಲ್ಲಿದ್ದ ಶೇ.31 ರಷ್ಟು ತುಟ್ಟಿಭತ್ಯೆಯನ್ನು 1ನೇ ಆಗಸ್ಟ್...
BMTC: ಚಾಲಕ ಹುದ್ದೆಯಿಂದ ಚಾಲಕ ಕಂ ನಿರ್ವಾಹಕ ಹುದ್ದೆಗೆ ನಿಯೋಜಿಸಿದ್ದ ಆದೇಶ ಹಿಂಪಡೆಯಲು ಸಿಟಿಎಂ ಆದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಿಯಮ 17/1 ರ ಅಡಿಯಲ್ಲಿ ಚಾಲಕ ಹುದ್ದೆಯಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗೆ ನಿಯೋಜಿಸಿರುವ ಆದೇಶಗಳನ್ನು ಜುಲೈ 1ರಿಂದಲೇ ಹಂತ ಹಂತವಾಗಿ ಹಿಂಪಡೆದು...
ಕಾವೇರಿ ತಾಯಿಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಡ್ಯ: ಸೋತ ಗಿರಾಕಿಗಳು ಸರ್ಕಾರ ಬಿದ್ದೋಗತ್ತೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನನ್ನ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ವಿಶ್ವಾಸ ಸರಿ ಇಲ್ಲ ಎಂದು ಬುರುಡೆ...
ವನಮಹೋತ್ಸವದಲ್ಲಿ ತ್ರಿಚಕ್ರ ವಾಹನ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರು ಗ್ರಾಮಾಂತ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಸ್ವಚ್ಛತಾ ಕೆಲಸಕ್ಕಾಗಿ ನೂತನ ಆಟೋ ವಾಹನ ಮತ್ತು ಹಿಟಾಚಿ...